MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹುಬ್ಬಳ್ಳಿಗೆ ಹೋಗಿ 'ಬೃಂದಾವಿಹಾರಿ' ಆಗ್ಬಿಟ್ಟು ವಾಪಸ್.. 'ಹಾಯಾದ ಈ ಟೈಮೂ' ಅಂತಿರೋ ಅನುಶ್ರೀ ಅಪರೂಪದ ಫೋಟೋಸ್ ಇಲ್ನೋಡಿ!

ಹುಬ್ಬಳ್ಳಿಗೆ ಹೋಗಿ 'ಬೃಂದಾವಿಹಾರಿ' ಆಗ್ಬಿಟ್ಟು ವಾಪಸ್.. 'ಹಾಯಾದ ಈ ಟೈಮೂ' ಅಂತಿರೋ ಅನುಶ್ರೀ ಅಪರೂಪದ ಫೋಟೋಸ್ ಇಲ್ನೋಡಿ!

ದೊಡ್ಡದೊಡ್ಡ ವೇದಿಕೆಗಳಲ್ಲಿ ತಮ್ಮ ಚಟಪಟ ಮಾತುಗಳ ಮೂಲಕ ಆಂಕರಿಂಗ್ ಮಾಡುತ್ತಾ ಇಡೀ ಕರ್ನಾಟಕದಲ್ಲಿ ಕರೆದಲ್ಲೆಲ್ಲಾ ಓಡಾಡುತ್ತಿರುವುದು, ಅಭಿಮಾನಿಗಳ ಹೃದಯಾಂತರಾಳದ ಅಭಿಮಾನಕ್ಕೆ ಕರಗಿ ಸೆಲ್ಫೀಗಳಿಗೆ, ಫೋಟೋಗಳಿಗೆ, ಮೊಬೈಲ್ ಕರೆಗಳಿಗೆ ರೆಸ್ಪಾನ್ಸ್ ಮಾಡುವುದು..ಹೀಗೆ ಅನುಶ್ರೀ ಕಾರುಬಾರು ಒಂದಲ್ಲ, ಎರಡಲ್ಲ..

2 Min read
Author : Shriram Bhat
Published : Oct 12 2026, 06:26 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Anushree FaceBook

ಕನ್ನಡದ ಖ್ಯಾತ ಆಂಕರ್ ಅನುಶ್ರೀ (Anchor Anushree) ಬೆಂಗಳೂರಿನಲ್ಲಿ ಜನಿಸಿದವರು. ಇವರದು ತುಳು ಮಾತಾಡುವ ಕುಟುಂಬ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
Image Credit : Anushree FaceBook

ವೃತ್ತಿ ಹಾಗೂ ಪ್ರವೃತ್ತಿ ಎರಡಲ್ಲೂ ಅನುಶ್ರೀ ಮಾದರಿ!

ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Related Articles

Related image1
ನಿರ್ದೇಶಕನ ಮೇಲೆ ಹಲ್ಲೆ.. 'ವಿಕ್ರಂ ವೇದಾಂತ್' ಸಿನಿಮಾ ಮಹೂರ್ತದಲ್ಲಿ ಗಲಾಟೆ!
Related image2
Premada Oorali: ಸುನಾದ್ ಗೌತಮ್ ಭಾರೀ ಸೀಕ್ರೆಟ್ ಹೊರಬಿತ್ತು! ಕಾರ್ಕಳ ಶಾಲೆಯ ಆ 7 ಮಕ್ಕಳಿಂದಲೇ ಹಾಡಿಸಿರೋ ಹಿಂದಿದೆ ದೊಡ್ಡ ಗುಟ್ಟು!
39
Image Credit : Anushree FaceBook

'ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ. ಅಲ್ಲಿ ಅನುಶ್ರೀ ಅವರು 80 ದಿನಗಳ ಕಾಲ ಇದ್ದು ಹೊರಬಂದರು. ಜೊತೆಗೆ, ಅನುಶ್ರೀ ಅವರು ಬೇರೆ ಕಾರ್ಯಕ್ರಮಗಳಾದ ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ.

49
Image Credit : Anushree FaceBook

ಅವರು ಬೆಂಕಿಪಟ್ಟಣ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಪ್ರವೇಶ ಮಾಡಿದ್ದಾರೆ. ಆದರೆ, ಅದಕ್ಕೂ ಮೊದಲು ಅನುಶ್ರೀಯವರು ಹಲವು ಸಿನಿಮಾಗಳಲ್ಲಿ ಪೋಷಕನಟಿಯಾಗಿ ನಟಿಸಿ 'ನಟಿ' ಎನ್ನಿಸಿಕೊಂಡಿದ್ದರು. 'ಮುರಳಿ ಮೀಟ್ಸ್ ಮೀರಾ' ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ.

59
Image Credit : Anushree FaceBook

ಅನುಶ್ರೀ ನಟಿಸಿದ ಸಿನಿಮಾಗಳು:-

2011ರಲ್ಲಿ 'ಭೂಮಿತಾಯಿ ಚಿತ್ರದಲ್ಲಿ ಗೌರಿ ಹೆಸರಿನ ಪಾತ್ರದಲ್ಲಿ ನಟನೆ

2011ರಲ್ಲಿ 'ಮುರಳೀ ಮೀಟ್ಸ್ ಮೀರಾ' ಚಿತ್ರದಲ್ಲಿ 'ಮೀರಾ' ಚಿತ್ರದಲ್ಲಿ ನಟಿಸಿ ಈ ಚಿತ್ರಕ್ಕೆ ಕಂಠದಾನ ಸಹ ಮಾಡಿದ್ದಾರೆ.

2012ರಲ್ಲಿ 'ಬೆಳ್ಳಿ ಕಿರಣ' ಚಿತ್ರದಲ್ಲಿ ಅನನ್ಯ ಪಾತ್ರದಲ್ಲಿ ನಟಿಸಿದ್ದಾರೆ.

2014ರಲ್ಲಿ 'ಟ್ಯೂಬ್‌ಲೈಟ್' ಸಿನಿಮಾದಲ್ಲಿ ಸಂಧ್ಯಾ ಪಾತ್ರದಲ್ಲಿ ನಟನೆ.

2015ರಲ್ಲಿ 'ಬೆಂಕಿಪಟ್ನ' ಚಿತ್ರದಲ್ಲಿ ಪಾವನಿ ಪಾತ್ರದಲ್ಲಿ ನಟನೆ

69
Image Credit : Anushree FaceBook

2015ರಲ್ಲಿ 'ರಿಂಗ್ ಮಾಸ್ಟರ್' ಚಿತ್ರದಲ್ಲಿ ಮಧು ಎಂಬ ಪಾತ್ರದಲ್ಲಿ ನಟನೆ

2015ರಲ್ಲಿ 'ಉತ್ತಮ ವಿಲನ್' ತಮಿಳು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

2016ರಲ್ಲಿ'ಮಾದ ಮತ್ತು ಮಾನಸಿ' ಸಿನಿಮಾದಲ್ಲಿ ಐಟಂ ಡಾನ್ಸರ್ ವಿಶೇಷ ಪಾತ್ರದಲ್ಲಿ ನಟನೆ.

2017ರಲ್ಲಿ 'ಉಪ್ಪು ಹುಳಿ ಖಾರ' ಜಾಹ್ನವಿ ಪಾತ್ರದಲ್ಲಿ ನಟನೆ

79
Image Credit : Anushree FaceBook

ಇನ್ನು, ನಟಿ ಅನುಶ್ರೀ ಬಗ್ಗೆ ಕನ್ನಡಿಗರಿಗೆ ಅಥವಾ ತುಳುನಾಡಿನ ಜನರಿಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಅವರು ಮಾನವೀಯತೆಯ ಸಾಕಾರ ಮೂರ್ತಿ ಎಂದರೆ ತಪ್ಪೇನಿಲ್ಲ. 'ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು' ಎಂಬಂತೆ ಅವರು ಹಲವರಿಗೆ ತಮ್ಮಿಂದಾದ ಸಹಾಯ ಮಾಡುತ್ತಿರುವುದು ಎಷ್ಟೇ ಗುಟ್ಟಾಗಿಟ್ಟರೆ ಕೆಲವೊಂದು ಕಡೆಗಳಲ್ಲಿ ಆಚೆ ಬರುತ್ತಿದೆ.

89
Image Credit : Anushree FaceBook

ಸದ್ಯಕ್ಕೆ ಜೀ ಕನ್ನಡದಲ್ಲಿ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ ಅನುಶ್ರೀ. ಜೊತೆಗೆ, ದೊಡ್ಡದೊಡ್ಡ ವೇದಿಕೆಗಳಲ್ಲಿ ತಮ್ಮ ಚಟಪಟ ಮಾತುಗಳ ಮೂಲಕ ಆಂಕರಿಂಗ್ ಮಾಡುತ್ತಾ ಇಡೀ ಕರ್ನಾಟಕದಲ್ಲಿ ಕರೆದಲ್ಲೆಲ್ಲಾ ಓಡಾಡುತ್ತಿರುವುದು, ಅಭಿಮಾನಿಗಳ ಹೃದಯಾಂತರಾಳದ ಅಭಿಮಾನಕ್ಕೆ ಕರಗಿ ಸೆಲ್ಫೀಗಳಿಗೆ, ಫೋಟೋಗಳಿಗೆ, ಮೊಬೈಲ್ ಕರೆಗಳಿಗೆ ರೆಸ್ಪಾನ್ಸ್ ಮಾಡುವುದು ಎಂದಿನಂತೆ ಈಗಲೂ ನಡೆಯುತ್ತಲೇ ಇದೆ.

99
Image Credit : Anushree FaceBook

ಅಂದಹಾಗೆ, ಇನ್ನೊಂದು ಹೊಸ ವಿಷಯ.. ತುಂಬಾ ದಿನಗಳ ಬಳಿಕ ಮತ್ತೆ ನಟಿ ಹಾಗೂ ನಿರೂಪಕಿ ಅನುಶ್ರೀಯವರು 'ಇನ್‌ಸ್ಟಾಗ್ರಾಂ ಲೈವ್‌'ಗೆ ಬಂದಿದ್ದರು. ಅದರಲ್ಲಿ ಅಭಿಮಾನಿಯೊಬ್ಬ ಕೇಳಿದ 'ಮದುವೆ ಬಳಿಕ ಗುಡ್‌ ನ್ಯೂಸ್; ಪ್ರಶ್ನೆಗೂ ಕೂಡ ಸ್ವಲ್ಪವೂ ಬೇಸರಿಸದೇ ಉತ್ತರ ಕೊಟ್ಟು ಆ ವಿಡಿಯೋ ಸಖತ್ ವೈರಲ್ ಆಗಲು ಕಾರಣರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಆಂಕರ್ ಅನುಶ್ರೀ
ಸ್ಯಾಂಡಲ್‌ವುಡ್
ಟಿವಿ ಶೋ
ರಿಯಾಲಿಟಿ ಶೋ
ವೈರಲ್ ಸುದ್ದಿ
 

Latest Videos
Recommended Stories
Recommended image1
ಮಾಡ್ರನ್ ಮಹಾಕವಿ ಮಂಜು ಬರ್ತ್‌ಡೇ ಸೆಲೆಬ್ರೇಷನ್: ಲಿಖಿತ್ ಕೊಟ್ಟ ಈ ಸರ್ಪ್ರೈಸ್‌ಗೆ ಫ್ಯಾನ್ಸ್ ಫಿದಾ
Recommended image2
‘ಮಗಳು ಇನ್ನಿಲ್ಲ’ ಎಂದು ಭಾವಿಸಿದ್ದ ತಂದೆ; 8 ಗಂಟೆಗಳ ಬಳಿಕ ಶವಪೆಟ್ಟಿಗೆಯೊಳಗೆ ನಡೆದದ್ದೇನು?
Recommended image3
5 ಲಕ್ಷ ದುಡ್ಡು, ದುಬೈನಲ್ಲಿ ಕೆಲ್ಸ ಕೊಟ್ಟರೂ Bigg Bossಗೆ ಅದೇ ಹಳೆ ಬಟ್ಟೆ ಯಾಕಮ್ಮಾ ಕುಮಾರಿ? ನೆಟ್ಟಿಗರ ಪ್ರಶ್ನೆ
Related Stories
Recommended image1
ನಿರ್ದೇಶಕನ ಮೇಲೆ ಹಲ್ಲೆ.. 'ವಿಕ್ರಂ ವೇದಾಂತ್' ಸಿನಿಮಾ ಮಹೂರ್ತದಲ್ಲಿ ಗಲಾಟೆ!
Recommended image2
Premada Oorali: ಸುನಾದ್ ಗೌತಮ್ ಭಾರೀ ಸೀಕ್ರೆಟ್ ಹೊರಬಿತ್ತು! ಕಾರ್ಕಳ ಶಾಲೆಯ ಆ 7 ಮಕ್ಕಳಿಂದಲೇ ಹಾಡಿಸಿರೋ ಹಿಂದಿದೆ ದೊಡ್ಡ ಗುಟ್ಟು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved