Annayya Serial: ಏಕಕಾಲಕ್ಕೆ ಒಂದು ಡಿವೋರ್ಸ್, ಎರಡು ಮದುವೆ! ಶಿವು ಕನಸು ಕಮರಿಹೋಯ್ತಾ?
Annayya Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ, ಹಾಗೂ ರಶ್ಮಿ ಬೇರೆ ಬೇರೆ ಆಗಬೇಕು ಎಂದು ಲೀಲಾ ಪಟ್ಟು ಹಿಡಿದು ಕೂತಿದ್ದಾಳೆ. ಜಿಮ್ ಸೀನ, ಪಿಂಕಿ ಪ್ರೀತಿ ಮಾಡಿದ್ದರೂ ಕೂಡ, ಅವರಿಗಿಂತ ಜಾಸ್ತಿ ಲೀಲಾಳೇ ಈ ಡಿವೋರ್ಸ್ ಆಗಬೇಕು ಎಂದು ಹಠ ಹಿಡಿದು ಕೂತಿದ್ದಾರೆ.

ಶಿವುಗೆ ಸತ್ಯವೇ ಗೊತ್ತಿಲ್ಲ
ತನ್ನ ತಂಗಿಯರು ಚೆನ್ನಾಗಿರಬೇಕು ಎಂದು ಶಿವು ಯಾವಾಗಲೂ ಬಯಸುತ್ತಾನೆ, ಅದಕ್ಕೆ ಅವನು ಏನು ಬೇಕಿದ್ರೂ ಮಾಡುತ್ತಾನೆ. ಮೊದಲ ತಂಗಿ ರತ್ನಾಗೆ ಇನ್ನೂ ಮದುವೆ ಆಗಿಲ್ಲ. ಇನ್ನು ನಾಲ್ಕನೇ ತಂಗಿಗೆ ಓದಿಸಬೇಕು. ಇನ್ನು ರಾಣಿ ಮದುವೆ ಆಗಿರೋ ಮನುಗೆ ಮಾತ್ರ ತಲೆ ಸರಿ ಇಲ್ಲ, ಚಿಕ್ಕ ಮಕ್ಕಳ ಥರ ಆಡ್ತಾನೆ ಎನ್ನೋ ಸತ್ಯ ರಿವೀಲ್ ಆಗಿಲ್ಲ.
ರತ್ನಾಗೆ ಪರಶು ಸರಿಯಾದ ಹುಡುಗ ಅಲ್ಲ
ರತ್ನ ಹಾಗೂ ಪಾರು ಅಣ್ಣ ಶಿವುಗೆ ಮದುವೆ ಮಾಡಿಸಬೇಕು ಎಂದು ಶಿವು ಪ್ಲ್ಯಾನ್ ಮಾಡಿದ್ದನು. ಎಲ್ಲರ ಕಣ್ಣಲ್ಲಿ ಒಳ್ಳೆಯವರಾಗಬೇಕು ಎಂದು ಪರಶು ನಾಟಕ ಮಾಡುತ್ತಿದ್ದಾನೆ. ಹೆಣ್ಣು ಮಕ್ಕಳ ವಿಷಯದಲ್ಲಿ ಪರಶು ಸರಿ ಇಲ್ಲ. ಪರಶುಗೆ ರತ್ನಾ ಮೇಲೆ ಪ್ರೀತಿ ಇಲ್ಲ, ಬದಲಾಗಿ ಮೋಹ ಇದೆ. ಒಟ್ಟಿನಲ್ಲಿ ರತ್ನಾಗೆ ಪರಶು ಸರಿಯಾದ ಹುಡುಗ ಅಲ್ಲ. ಈಗ ಈ ಮದುವೆ ಆಗೋದನ್ನು ಪಾರು ತಡೆಯುತ್ತಾಳಾ ಎಂದು ಕಾದು ನೋಡಬೇಕಿದೆ.
ಶ್ಮಿ ಕೂಡ ಡಿವೋರ್ಸ್ ಕೊಡಲು ರೆಡಿ
ಆ ಕಡೆ ಲೀಲಾಗೆ ರಶ್ಮಿ ತಾಯಿ ಶಾರದಾ ಪಾಠ ಕಲಿಸುತ್ತಿದ್ದಾಳೆ. ಅವಳಿಗೆ ಗೊತ್ತಾಗದಂತೆ ಹೊಡೆದಿದ್ದಾಳೆ. ಆದರೂ ಕೂಡ ಲೀಲಾ ಮಾತ್ರ ರಶ್ಮಿ-ಸೀನಗೆ ಡಿವೋರ್ಸ್ ಆಗಲೇಬೇಕು ಎಂದು ಹೇಳಿದ್ದಾಳೆ. ಈಗ ರಶ್ಮಿ ಕೂಡ ಡಿವೋರ್ಸ್ ಕೊಡಲು ರೆಡಿಯಾಗಿದ್ದಾಳೆ. ಸೀನನನ್ನು ಕಂಡರೆ ರಶ್ಮಿಗೆ ಇಷ್ಟವೇ ಇರಲಿಲ್ಲ, ಆದರೆ ಮದುವೆ ಆದ್ಮೇಲೆ ಸೀನನನ್ನು ಕಂಡ್ರೆ ಅವಳಿಗೆ ಇಷ್ಟ ಆಗಲು ಶುರುವಾಗಿದೆ.
ಲೀಲಾಳದ್ದೇ ಆಟ
ರಶ್ಮಿ ಸೀನ ತನ್ನನ್ನು ಒಂದು ದಿನ ಹೆಂಡ್ತಿ ಎನ್ನೋ ಥರ ನಡೆಸಿಕೊಳ್ಳಲಿ ಎಂದು ಅವಳು ಆಸೆಪಟ್ಟಿದ್ದಳು. ಹಾಗಿದ್ದರೆ ಡಿವೋರ್ಸ್ ಕೊಡ್ತೀನಿ ಎಂದಿದ್ದಳು. ರಶ್ಮಿ ಮಾತು ಕೇಳಿ ಸೀನ ಕೂಡ ಒಪ್ಪಿ, ಹೆಂಡ್ತಿ ಎನ್ನೋ ಥರ ಪ್ರೀತಿ ತೋರಿಸುವ ನಾಟಕ ಮಾಡುತ್ತಿದ್ದನು. ಅದಕ್ಕೂ ಕೂಡ ಲೀಲಾ ಕಲ್ಲು ಹಾಕಿದ್ದಳು. ಈಗ ಲೀಲಾಳದ್ದೇ ಆಟ ಆಗಿದೆ.
ಪಿಂಕಿ-ಸೀನನ ಮದುವೆಗೆ ತಯಾರಿ
ರಶ್ಮಿ ಡುಮ್ಮಿ, ಅವಳಿಂದ ದೂರ ಆಗಬೇಕು ಎಂದು ಸೀನ ಸಾಕಷ್ಟು ಅವಮಾನ ಮಾಡುತ್ತಿದ್ದನು. ಸೀನಗೆ ಡಿವೋರ್ಸ್ ಕೊಟ್ಟಿಲ್ಲ ಎಂದಿದ್ದಕ್ಕೆ ಲೀಲಾಳೇ ಈಗ ಮಗನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ದಾಳೆ. ಗಂಡ ಜೀವಂತವಾಗಿ ಉಳಿಯಬೇಕು ಎಂದು ರಶ್ಮಿ ಡಿವೋರ್ಸ್ ಕೊಡಲು ರೆಡಿಯಾಗಿದ್ದಾಳೆ. ಇನ್ನು ಪಿಂಕಿ-ಸೀನನ ಮದುವೆಗೆ ಕೂಡ ತಯಾರಿ ನಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

