- Home
- Entertainment
- TV Talk
- Annayya Serial: ಪರಶುಗೆ 'I Love You' ಅಂದೇ ಬಿಟ್ಲು ರತ್ನ... ಶಿವಣ್ಣ ಮತ್ತೊಬ್ಬ ತಂಗಿ ಬಾಳಿಗೂ ಬಿತ್ತು ಬೆಂಕಿ!
Annayya Serial: ಪರಶುಗೆ 'I Love You' ಅಂದೇ ಬಿಟ್ಲು ರತ್ನ... ಶಿವಣ್ಣ ಮತ್ತೊಬ್ಬ ತಂಗಿ ಬಾಳಿಗೂ ಬಿತ್ತು ಬೆಂಕಿ!
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮತ್ತೊಂದು ಪ್ರೇಮ ಕತೆ ಶುರುವಾಗಿಯೇ ಬಿಟ್ಟಿದೆ. ಪರಶು ಕೊನೆಗೂ ರತ್ನನಿಗೆ ಪ್ರಪೋಸ್ ಮಾಡಿಯೇ ಬಿಟ್ಟ. ಮನೆ ಮಂದಿ ಮುಂದೆ ಪರಶು ಪ್ರೀತಿಗೆ ಜೈ ಎಂದ ಟೀಚರಮ್ಮ ಐ ಲವ್ ಯೂ ಅಂದೇ ಬಿಟ್ಲು, ಶಿವಣ್ಣನ ಇಬ್ಬರು ತಂಗಿಯರ ಜೊತೆ ಮೂರನೇ ತಂಗಿ ಬಾಳಿಗೂ ಬಿತ್ತು ಬೆಂಕಿ.

ಅಣ್ಣಯ್ಯ ಸೀರಿಯಲ್
ಅಣ್ಣಯ್ಯ ಧಾರಾವಾಹಿಯಲ್ಲಿ ಆರಂಭದಿಂದಲೇ ಪಾರು ಅಣ್ಣ, ವಿಲನ್ ಪರಶುಗೆ ಶಿವಣ್ಣನ ತಂಗಿ ರತ್ನ ಮೇಲೆ ಒಂದು ಕಣ್ಣು ಇದ್ದೆ ಇತ್ತು. ಆದರೆ ಅವನ ಆಟಗಳಿಗೆ ಯಾವುದಕ್ಕೂ ರತ್ನ ಸೊಪ್ಪು ಹಾಕೋದಕ್ಕೆ ಹೋಗಲೇ ಇಲ್ಲ. ಆದರೆ ಇದೀಗ ಹೊಸದಾದ ಪ್ರೀತಿಯ ಖಾತೆ ತೆರೆಯುತ್ತಿದೆ. ಪರಶು ಮತ್ತು ರತ್ನ ನಡುವೆ ಪ್ರೀತಿ ಮೂಡಿತ್ತು, ಪ್ರಪೋಸ್ ಕೂಡ ಮಾಡಿದ್ದಾಗಿದೆ. ರತ್ನನ ಒಪ್ಪಿಗೆಯೂ ಸಿಕ್ಕಾಗಿದೆ.
ಪರಶು- ರತ್ನ ಲವ್ ಟ್ರಾಕ್ ಓಪನ್
ವೀರ ಭದ್ರನ ಪ್ರತಿಯೊಂದು ಮಾತಿಗೂ ತಲೆಯಾಡಿಸುವ ಶಿವಣ್ಣ, ಪರಶು ಜೊತೆ ರತ್ನನ ಮದುವೆ ಮಾಡಿಸುವ ಮಾತಿಗೂ ಓಕೆ ಅಂದಿದ್ದಾನೆ. ತನ್ನ ಅಣ್ಣ ಮತ್ತು ಅಪ್ಪನ ನೀಚ ಬುದ್ದಿ ಗೊತ್ತಿದ್ದ ಪಾರು ಆರಂಭದಲ್ಲಿ ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದಳು, ಆದರೆ ಪರಶು ಮಾಡಿದ ಹೈಡ್ರಾಮಕ್ಕೆ ಪಾರು ಕೂಡ ಸೋತು ಪರಶುವನ್ನು ನಂಬಿ ಕೊನೆಗೂ ಮದುವೆಗೆ ಓಕೆ ಅಂದೇ ಬಿಟ್ಟಿದ್ದಾಳೆ.
ಐ ಲವ್ ಯೂ ಅಂದೇ ಬಿಟ್ಲು ರತ್ನ
ಪರಶು ರತ್ನನಿಗೆ ಪ್ರಪೋಸ್ ಮಾಡೋದಕ್ಕೆ ಮನೆಮಂದಿಯೆಲ್ಲಾ ವ್ಯವಸ್ಥೆ ಮಾಡಿದ್ದಾರೆ. ಮನೆಗೆ ಬಂದ ಪರಶು ಬೋರ್ಡ್ ಮೇಲೆ ನಾನು ನಿನ್ನ ಪ್ರೀತಿಸುತ್ತೇನೆ ಎಂದು ಬರೆದು, ರತ್ನ ನೀನು ನನ್ನ ಮದುವೆ ಆಗ್ತ್ಯಾ ಎಂದು ಕೇಳಿದ್ದಾನೆ. ಅದಕ್ಕೆ ರತ್ನ ಖುಷಿಯಿಂದಲೇ ಐ ಲವ್ ಯೂ ಸೋ ಮಚ್ ಎನ್ನುತ್ತ ಪರಶುನನ್ನು ಗಟ್ಟಿಯಾಗಿ ತಂಬಿಕೊಂಡೇ ಬಿಟ್ಟಳು.
ಪ್ರತಿದಿನವು ಹಾಜರ್
ಪರಶು ಮತ್ತು ರತ್ನ ಪ್ರೀತಿ ನೋಡಿ ಮನೆಮಂದಿಯೆಲ್ಲಾ ಖುಷೀಯಾಗಿದ್ದಾರೆ. ಪರಶು ರತ್ನನಿಗೆ ಹಾಜರಿ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು. ನಿನ್ನನ್ನು ಪ್ರೀತಿ ಮಾಡಿದ ಮೇಲೆ, ಪ್ರತಿದಿನ ನಿನ್ನ ನೋಡೋದಕ್ಕೆ ಮನೆಗೆ ಬಂದೇ ಬರುತ್ತೇನೆ, ಇವತ್ತಿನ ಹಾಜರಿ ಹಾಕಿ ಟೀಚರ್ ಎನ್ನುತ್ತಾನೆ, ರತ್ನ ಪರಶು ಎಂದು ಕರೆಯುತ್ತಾ ನಾಚಿ ನೀರಾಗುತ್ತಾಳೆ. ಅಲ್ಲಿಗೆ ಹೊಸದೊಂದು ಲವ್ ಟ್ರಾಕ್ ಶುರುವಾಗಲಿದೆ ಅನ್ನೋದು ಗೊತ್ತಾಗಿದೆ.
ಪರಶು ನಿಜವಾಗಿಯೂ ಬದಲಾದ್ನ?
ಪರಶು ಖಂಡಿತವಾಗಿಯೂ ಬದಲಾಗಿಲ್ಲ. ಇದು ಅಪ್ಪ ಮತ್ತು ಮಗ ಸೇರಿ ಮಾಡಿದಂತಹ ದೊಡ್ಡ ಮೋಸ. ರತ್ನಳನ್ನು ಸೊಸೆಯಾಗಿ ಮನೆಗೆ ತಂದು, ಬಳಿಕ ಶಿವಣ್ಣನನ್ನು ಹೇಗೆಲ್ಲಾ ಕುಗ್ಗಿಸಬಹುದು ಎಂದು ಯೋಚನೆ ಮಾಡಿ, ಅಪ್ಪ ಮಗ ಮಾಡಿರುವಂತಹ ಪ್ಲ್ಯಾನ್ ಇದು. ಆದರೆ ಪರಶುನ ನಿಜವಾದ ಗುಣ ಗೊತ್ತಾಗದೆ ಪಾರು ಸೇರಿ ಮನೆಮಂದಿ ಎಲ್ಲಾ ನಂಬಿದ್ದಾರೆ. ಇನ್ನು ಮುಂದೆ ರತ್ನ ಜೀವನ ಎನಾಗುತ್ತೋ ಗೊತ್ತಿಲ್ಲ.
ಶಿವಣ್ಣನ ಮನೆಯ ಮೂವರು ಅಳಿಯಂದಿರು 3 ರತ್ನಗಳು
ಈಗಾಗಲೇ ಶಿವಣ್ಣನ ಇಬ್ಬರು ತಂಗಿಯರಾದ ರಾಣಿ ಮತ್ತು ರಶ್ಮಿ ಜೀವನಕ್ಕೆ ಬೆಂಕಿ ಬಿದ್ದಿದೆ. ರಶ್ಮಿ ಗಂಡ ಸೀನ, ಇನ್ನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರೆ, ರಾಣಿ ಗಂಡ ಪೆದ್ದು, ಇದೀಗ ರತ್ನನ ಗಂಡ ರತ್ನಳ ಜೀವನವನ್ನೇ ನಾಶ ಮಾಡಲು ಹೊರಟಿರುವ ಕ್ರೂರಿ. ಇದನ್ನೆಲ್ಲಾ ನೋಡಿ ವೀಕ್ಷಕರು ಸರಿಯಾಗಿದೆ, ಶಿವಣ್ಣನ ಮನೆಯ ಅಳಿಯಂದಿರು ಮೂವರು ಮೂರು ರತ್ನಗಳು. ಒಬ್ಬರಿಗಿಂತ ಒಬ್ಬರು ಬೆಸ್ಟ್. ಇನ್ನು ಮುಂದೆ ರತ್ನ ಜೀವನದಲ್ಲಿ ಏನೆಲ್ಲಾ ಕಥೆ ನಡೆಯುತ್ತೆ ಕಾದು ನೋಡಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

