- Home
- Entertainment
- TV Talk
- ಪಾರು ಕಿಡ್ನಾಪ್ ಮಾಡಿ ಪೊಲೀಸ್ ಠಾಣೆಗೆ ಬಿಟ್ಟ ರೌಡಿಗಳು; ಶಿವು ಮುಗಿಸಲು ಪರಶು, ಸೋಮನ ಪ್ಲ್ಯಾನ್ ರಿವೀಲ್!
ಪಾರು ಕಿಡ್ನಾಪ್ ಮಾಡಿ ಪೊಲೀಸ್ ಠಾಣೆಗೆ ಬಿಟ್ಟ ರೌಡಿಗಳು; ಶಿವು ಮುಗಿಸಲು ಪರಶು, ಸೋಮನ ಪ್ಲ್ಯಾನ್ ರಿವೀಲ್!
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಶಿವುಗೆ ಪ್ರೀತಿ ಹೇಳಿಕೊಂಡ ನಂತರ, ರೌಡಿಗಳು ಆಕೆಯನ್ನು ಕಿಡ್ನಾಪ್ ಮಾಡಿದ್ದಾರೆ. ಶಿವು ಮೇಲಿನ ಸೇಡಿಗೆ ಪಾರುವನ್ನು ಒತ್ತೆ ಇಟ್ಟಿದ್ದಾರೆ. ಶಿವುವನ್ನು ಕೊಲ್ಲಲು ದೊಡ್ಡ ಪ್ಲ್ಯಾನ್ ಮಾಡಲಾಗಿದ್ದು, ಪೊಲೀಸರು ಕೂಡ ರೌಡಿಗಳ ಜೊತೆ ಸೇರಿಕೊಂಡಿದ್ದಾರೆ. ರೋಚಕ ಕಥೆಯ ಸ್ಟೋರಿ ಇಲ್ಲಿದೆ ನೊಡಿ...

ಅಣ್ಣಯ್ಯ ಧಾರಾವಾಹಿಯಲ್ಲಿ ಇನ್ನೇನು ಬಹುದಿನಗಳಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರೂ ಒಬ್ಬರಿಗೊಬ್ಬರು ಹೇಳಿಕೊಳ್ಳಲಾಗದೇ ಪರದಾಡುತ್ತಿದ್ದು, ಕೊನೆಗೆ ಪಾರ್ವತಿಯೇ ಶಿವುಗೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾಳೆ. ಆದರೆ, ಇದೀಗ ಶಿವು ಕೂಡ ತನ್ನ ಪ್ರೀತಿ ಹೇಳಿಕೊಳ್ಳುವ ಹೊತ್ತಿಗೆ ರೌಡಿಗಳು ಎಂಟ್ರಿ ಕೊಟ್ಟು, ಪಾರುವನ್ನೇ ಕಿಡ್ನಾಪ್ ಮಾಡಿದ್ದಾರೆ. ಶಿವು ಮೇಲಿನ ಸೇಡಿಗೆ ಕೇಡಿಗಳು ಪಾರುವನ್ನೇ ಒತ್ತೆ ಇಟ್ಟಿದ್ದಾರೆ. ಇತ್ತ ಶಿವು-ಪಾರ್ವತಿ ನಡುವೆ ಪ್ರೀತಿ ಅರಳೋ ಹೊತ್ತಲ್ಲಿ ದ್ವೇಷದ ಬೆಂಕಿ ಹೊತ್ತಿಕೊಂಡಿದೆ.
ಶಿವುನನ್ನು ಕರೆದುಕೊಂಡು ಕೊಳದ ಬಳಿ ಹೋಗಿ ಪ್ರೇಮ ನಿವೇದನೆ ಮಾಡಿಕೊಂಡ ಪಾರು ನೀರಿಗೆ ಬಿದ್ದು ತನ್ನ ಪ್ರೀತಿಯನ್ನು ಸಾಬೀತು ಮಾಡಿಕೊಡಿದ್ದಾಳೆ. ನೀರಿಗೆ ಬಿದ್ದ ಪಾರುಳನ್ನು ಕಾಪಾಡಿದ ಶಿವು ಕೂಡ ಅವಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಪಾರುಳನ್ನು ಪ್ರೀತಿ ಮಾಡಿದ್ದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ. ಆದರೆ, ಪ್ರೀತಿ ಹೇಳಿಕೊಳ್ಳುವಾಗ ಪಾರು ಮುಖ ನೋಡಲು ಧೈರ್ಯವಿಲ್ಲದೇ ಹಿಂದೆ ತಿರುಗಿದ್ದಾಗ, ಕೇಡಿಗಳು ಪಾರು ಬಾಯಿ ಮುಚ್ಚಿ ಅಲ್ಲಿಂದ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ.
ಶಿವು ತಾನು ಪ್ರೀತಿ ಮಾಡಿದ ಹುಡುಗಿಯೇ ಹೆಂಡತಿಯಾಗಿ ಬಂದು ತನ್ನನ್ನು ಒಪ್ಪಿಕೊಳ್ಳುತ್ತಿರುವ ಸಮಯದಲ್ಲಿ ವೀರಭದ್ರನ ಪಟಾಲಂ ಗ್ಯಾಂಗ್‌ನ ಸೋಮ, ಪರಶು ಸೇರಿ ಶಿವು ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ. ಇದೀಗ ಪಾರು ಅಣ್ಣ ಪರಶುವನ್ನು ಮನೆ ಬಳಿ ಬರ ಹೇಳುವ ಸೋಮ, ಅಣ್ಣನೊಂದಿಗೆ ಸೇರಿ ಈ ಬಾರಿ ನಮ್ಮ ಪ್ಲಾನ್ ವರ್ಕೌಟ್ ಆಗಲೇಬೇಕು. ಶಿವು ಕಥೆ ಮುಗಿಸಲೇಬೇಕು ಎಂದು ಮಾತನಾಡಿಕೊಂಡಿದ್ದಾರೆ. ಇದೀಗ ನೀನು ಹೆದರಬೇಡ ಈ ಬಾರಿ ಶಿವು ಸಾಯುತ್ತಾನೆ. ಆದರೆ ಅವನನ್ನು ನಾವಲ್ಲ, ಪೊಲೀಸರು ಮುಗಿಸುತ್ತಾರೆ ಎಂದು ಹೇಳಿ ದೊಡ್ಡ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಾರೆ.
ಈ ಬಾರಿ ಶಿವು ಮುಗಿಸುವುದಕ್ಕೆ ಸೋಮನ ಅಣ್ಣ ಪ್ಲ್ಯಾನ್ ಮಾಡಿ ಪರಶು ಮುಂದೆ ಹೇಳುತ್ತಾನೆ. ಅದಕ್ಕೆ ಪರಶು, ನಿಮ್ಮ ಕೆಲಸಕ್ಕೆ ನಾನು ಸದಾ ಬೆಂಬಲವಾಗಿರುತ್ತೇನೆ. ಆದರೆ ನಿಮ್ಮ ಜೊತೆಗೇ ಇರಲು ಸಾಧ್ಯವಿಲ್ಲ. ಏಕೆಂದತೆ ಈ ವಿಚಾರ ಅಪ್ಪನಿಗೆ ಗೊತ್ತಿಲ್ಲ ಎಂದು ಮನೆಗೆ ಹೋಗುತ್ತೇನೆ ಎಂದು ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ವೀರಭದ್ರ ಬಂದು, ಶಿವು ಕಥೆ ಮುಗಿಸಲು ನಾವು 4 ಜನ ಸಾಕು. ನೀವು ಏನೇ ಮಾಡಿದರೂ ನಾನು ಜೊತೆಯಾಗಿರುತ್ತೇನೆ ಎಂದು ಹೇಳುತ್ತಾರೆ. ಮಂದುವರೆದು, ನಾನು ಈವರೆಗೆ ಮಾಡಿದ ಉಪಾಯಗಳು ಫಲಿಸಲಿಲ್ಲ. ನಿಮ್ಮಿಂದಾದರೂ ಒಳ್ಳೆಯದಾಗುವುದಾ ನೋಡುತ್ತೇನೆ ಎನ್ನುತ್ತಾರೆ. ಈ ಮಾತು ಕೇಳಿ ಪರಶು, ಸೋಮ ಹಾಗೂ ಅವನ ಅಣ್ಣ ಖುಷಿ ಪಡುತ್ತಾರೆ.
ಇದೀಗ ರೌಡಿಗಳೊಂದಿಗೆ ಪೊಲೀಸ್ ಹಾಗೂ ಇನ್ನೊಬ್ಬ ವ್ಯಕ್ತಿಯೂ ಸೇರಿಕೊಂಡಿದ್ದಾರೆ. ಕಳ್ಳರು ಪಾರುಳನ್ನು ಕಿಡ್ನಾಪ್ ಮಾಡಿಕೊಂಡು ಹೋಗುತ್ತಿದ್ದ ಕಾರು ಪೊಲೀಸ್ ಠಾಣೆ ಮುಂದೆ ಕೆಟ್ಟು ನಿಂತಿದೆ ಎಂಬಂತೆ ನಾಟಕ ಮಾಡುತ್ತಾರೆ. ಆಗ ಪಾರು ಕಾರಿನಿಂದ ಇಳಿದು ಪೊಲೀಸ್ ಠಾಣೆಯೊಳಗೆ ಓಡಿ ಬರುತ್ತಾಳೆ. ಅಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಯೊಬ್ಬರು ಪಾರು ನಮ್ಮ ಮನೆಯಲ್ಲಿ ಬಂಗಾರ ಕಳ್ಳತನ ಮಾಡಿದ್ದಾಳೆ ಎಂದು ದೂರು ಕೊಟ್ಟಿರುತ್ತಾನೆ. ಪಾರು ಪೊಲೀಸ್ ಠಾಣೆಗೆ ಬಂದು ಕಿಡ್ನಾಪ್ ಮಾಡಿರುವ ವಿಚಾರ ಹೇಳುತ್ತಾ ಕಾರನ್ನು ತೋರಿಸಲು ಹೊರಗೆ ಹೋಗುತ್ತಿದ್ದಂತೆ ಹಿಡಿದು ಸ್ಟೇಷನ್ನಿನ ಜೈಲಿನೊಳಗೆ ಹಾಕುತ್ತಾರೆ.
ಪಾರುಗೆ ಏನೋ ಆಗಿದೆ ಎಂದು ಹುಡುಕಾಡುತ್ತಿದ್ದ ಶಿವುಗೆ ಪೊಲೀಸ್ ಠಾಣೆಯಲ್ಲಿ ಇದ್ದಾಳೆ ಎಂದು ಊರಿನವರು ತಿಳಿಸುತ್ತಾರೆ. ಆಗ ಶಿವು ಬಂದು ಪೊಲೀಸ್ ಠಾಣೆಯಲ್ಲಿ ನನ್ನ ಹೆಂಡತಿಯನ್ನು ಬೇರೆ ಯಾರೋ ಎಂದು ಕರೆದುಕೊಂಡು ಬಂದಿದ್ದಾರೆ ಎಂದು ಹೇಳುತ್ತಾನೆ. ಆಗ ಪೊಲೀಸ್ ಅಂಥವರು ಯಾರೂ ಇಲ್ಲ ಇಲ್ಲಿ ಎಂದು ಹೇಳುತ್ತಾರೆ. ಜೈಲಿನ ಕಂಬಿ ಹಿಂದೆ ನಿಂತಿದ್ದ ಪಾರು ಮಾವಾ..., ಎಂದು ಕೂಗುತ್ತಾಳೆ. ಆಗ ಶಿವು ಪೊಲೀಸರ ಕಾಲಿಗೆ ಬಿದ್ದು ಪಾರು ಬಿಟ್ಟುಬಿಡುವಂತೆ ಕೇಳುತ್ತಾನೆ. ಆಗ ಪೊಲೀಸ್ ನೀನೂ ಏನಾದರೂ ಬಿಡಬೇಕಾಗುತ್ತದೆ ಎಂದು ಹೇಳುತ್ತಾರೆ.
ಪೊಲೀಸರ ಮುಂದೆ ಕುಳಿತಿದ್ದ ವ್ಯಕ್ತಿ ನಿನ್ನ ಹೆಂಡತಿ ಪಾರು ತುಂಬಾ ಕ್ಯೂಟ್ ಆಗಿದ್ದಾಳೆ. ಅವಳನ್ನು ಬಿಟ್ಟುಬಿಡು ಎನ್ನುವ ಅರ್ಥದಲ್ಲಿ ಮಾತನಾಡುತ್ತಾನೆ. ಇದನ್ನು ನೋಡಿ ಸಹಿಸಲಾಗದ ಶಿವು ಪೊಲೀಸ್ ಠಾಣೆಯಲ್ಲಿಯೇ ದೂರು ಕೊಟ್ಟಿದ ವ್ಯಕ್ತಿಯ ಎದೆಗೆ ಜೋರಾಗಿ ಹೊಡೆಯುತ್ತಾನೆ. ಆಲ್ಲಿಗೆ ಆ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದು ಹೋಗುತ್ತಾನೆ. ಇದರ ಮುಂದುವರೆದ ಭಾಗವಾಗಿ ಶಿವುನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿನಲ್ಲಿ ಹೊಡೆದು ಕೊಲೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ, ಶಿವು ಇದೆಲ್ಲದರಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದೇ ರೋಚಕ ಕಥೆಯಾಗಿದೆ.