- Home
- Entertainment
- TV Talk
- ಬರ್ತ್‌ಡೇಗೆ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ ಬೆಲ್ಲದಚ್ಚು ಪಾರು; ರೌಡಿ ಬೇಬಿಯ ವಯಸ್ಸೆಷ್ಟು?
ಬರ್ತ್‌ಡೇಗೆ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ ಬೆಲ್ಲದಚ್ಚು ಪಾರು; ರೌಡಿ ಬೇಬಿಯ ವಯಸ್ಸೆಷ್ಟು?
ಕಿರುತೆರೆಯ ರಾಣಿ ನಿಶಾ ರವಿಕೃಷ್ಣನ್ ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿಶಾ, ಅಭಿಮಾನಿಗಳ ಪ್ರೀತಿಗೆ ಭಾವುಕರಾಗಿದ್ದಾರೆ.

ಕಿರುತೆರೆಯ ರಾಣಿ, ರೌಡಿ ಬೇಬಿ ಅಂತಾನೇ ಕರೆಸಿಕೊಳ್ಳುವ ನಟಿ ನಿಶಾ ರವಿಕೃಷ್ಣನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೇಕ್ ಹಿಡಿದುಕೊಂಡು ಸಖತ್ ಗ್ಲಾಮರ್ ಲುಕ್‌ನಲ್ಲಿ ನಿಶಾ ಪಡ್ಡೆ ಹುಡುಗರ ನಶೆ ಏರುವಂತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಗಟ್ಟಿಮೇಳ ಧಾರಾವಾಹಿಯಲ್ಲಿ ಲಂಗ-ದಾವಣಿ ಹಾಕಿಕೊಂಡು ನಿಶಾ ರವಿಕೃಷ್ಣನ್ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರಕ್ಕೆ ನಿಶಾ ಜೀವ ತುಂಬಿದ್ದರು. ಇಂದಿಗೂ ಸೋಶಿಯುಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಮೂಲ್ಯ ಹೆಸರಿನಲ್ಲಿಯೇ ಪೇಜ್ ಕ್ರಿಯೇಟ್ ಮಾಡಿದ್ದಾರೆ.
ತಡವಾಗಿ ಬರ್ತ್ ಡೇ ಫೋಟೋಗಳನ್ನು ನಿಶಾ ರವಿಕೃಷ್ಣನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬರ್ತ್ ಡೇ ಹ್ಯಾಂಗ್‌ಓವರ್‌ಲ್ಲಿದ್ದ ಕಾರಣ ಪೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ವಿಳಂಬವಾಯ್ತು ಎಂದು ನಿಶಾ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಅದರಲ್ಲಿಯೂ ಕಲಾವಿದರು ತಮ್ಮ ವಯಸ್ಸು ಮರೆಮಾಡಲು ಪ್ರಯತ್ನಿಸುತ್ತಾರೆ. ಆದ್ರೆ ನಿಶಾ ರವಿಕೃಷ್ಣನ್ ಇದು ತಮ್ಮ 25ನೇ ಹುಟ್ಟುಹಬ್ಬ ಎಂದು ಹೇಳಿಕೊಂಡಿದ್ದಾರೆ. 25 ಸಂಖ್ಯೆಯ ಬಲೂನ್‌ಗೆ ಮುತ್ತಿಡುವ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಕೇಕ್ ಮೇಲಿನ ಗಮನವೇ ಕಡಿಮೆಯಾಗಿಲ್ಲ. ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿದ ಕುಟುಂಬ ಮತ್ತು ಎಲ್ಲಾ ಸ್ನೇಹಿತರಿಗೆ ಅಭಿನಂದನೆಗಳು. ನೀವೆಲ್ಲರೂ ನನ್ನನ್ನು ನಕ್ಷತ್ರದಂತೆ ಕಾಣುತ್ತೀರಿ. ಲವ್ ಯು ಆಲ್ ಎಂದು ನಿಶಾ ರವಿಕೃಷ್ಣನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ನಿಶಾ ರವಿಕೃಷ್ಣನ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್‌ನಲ್ಲಿ ಡಾಕ್ಟರ್ ಪಾರ್ವತಿಯಾಗಿ ನಟಿಸುತ್ತಿದ್ದಾರೆ. ಶಿವಣ್ಣನ ಪ್ರೀತಿಯ ಮಡದಿಯಾಗಿರುವ ಪಾರು, ನಾದಿನಿಯ ನೆಚ್ಚಿನ ಅತ್ತಿಗೆಯಾಗಿದ್ದಾರೆ. ಮತ್ತೊಂದದೆಡೆ ನೀಚ, ಕ್ರೂರಿ ಅಪ್ಪನಿಗೆ ಸಿಂಹಿಣಿಯಾಗಿದ್ದಾಳೆ ಪಾರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

