- Home
- Entertainment
- TV Talk
- RRR Movie ನಟ ಜ್ಯೂನಿಯರ್ ಎನ್‌ಟಿಆರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡ ಕಿರುತೆರೆ ನಟಿ ಪ್ರತ್ಯಕ್ಷ, ಯಾರದು?
RRR Movie ನಟ ಜ್ಯೂನಿಯರ್ ಎನ್‌ಟಿಆರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡ ಕಿರುತೆರೆ ನಟಿ ಪ್ರತ್ಯಕ್ಷ, ಯಾರದು?
Actor Jr NTR Add: ಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಆಶ್ಚರ್ಯ ಎಂಬಂತೆ ಕನ್ನಡ ನಟಿ ನಿಶಾ ರವಿಕೃಷ್ಣನ್ ಇದ್ದಾರೆ.

ಕನ್ನಡ ಕಿರುತೆರೆಯ ರೌಡಿಬೇಬಿ
ಕನ್ನಡ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಅವರು ಇದೀಗ ಹೊಸದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಿಶಾ ರವಿಕೃಷ್ಣನ್ ಅವರು ರೌಡಿಬೇಬಿ ಎಂದು ಹೇಳಿದ್ದರು.
ಪಾರು ಪಾತ್ರದಲ್ಲಿ ನಟನೆ
ಜೀ ಕನ್ನಡ ವಾಹಿನಿಯ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣನ್ ಅವರು ಪಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಜೂನಿಯರ್ ಎನ್‌ಟಿಆರ್ ಜೊತೆಗೆ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಅಭಿಮಾನಿಗಳಿಗೆ ಅಚ್ಚರಿ
ಈ ಹಿಂದೆ ಮೇಘಾ ಶೆಟ್ಟಿ ಅವರು ಮಹೇಶ್ ಬಾಬು ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಜ್ಯೂನಿಯರ್ ತಾರಕ್ ಜೊತೆ ನಿಶಾ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಪ್ರತಿಭಾನ್ವಿತೆ
ನಿಶಾ ರವಿಕೃಷ್ಣನ್ ಕೇವಲ ನಟಿಯಷ್ಟೇ ಅಲ್ಲದೆ ಉತ್ತಮ ನೃತ್ಯಗಾರ್ತಿ, ಗಾಯಕಿ ಕೂಡ ಹೌದು. ನಿಶಾ ಅವರು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಪಾರು, ತಾರಕ್ ಜೋಡಿ ಸೂಪರ್
ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತಿನ ವಿಡಿಯೋ ವೈರಲ್ ಆಗುತ್ತಿದ್ದು, ವೀಕ್ಷಕರು "ಪಾರು ಮತ್ತು ತಾರಕ್ ಜೋಡಿ ಸೂಪರ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ, ಧಾರಾವಾಹಿಗಳ ಜೊತೆಗೆ ಇಂತಹ ವಿಭಿನ್ನ ಪ್ರಯತ್ನಗಳ ಮೂಲಕ ನಿಶಾ ಸದಾ ಸುದ್ದಿಯಲ್ಲಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

