- Home
- Entertainment
- TV Talk
- Annayya Kannada Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್ ನ್ಯಾಚುಲರ್ ಶಕ್ತಿ ಬಂದಿದ್ದು ಹೇಗೆ?
Annayya Kannada Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್ ನ್ಯಾಚುಲರ್ ಶಕ್ತಿ ಬಂದಿದ್ದು ಹೇಗೆ?
Annayya Serial Kannada: ಅಣ್ಣಯ್ಯ ಹಾಗೂ ಕರ್ಣ ಧಾರಾವಾಹಿ ಸಂಗಮವಾಗಿದೆ. ಕರ್ಣ ಟೀಂ ಈಗ ಮಾರಿಗುಡಿಗೆ ಬಂದಿದೆ. ಮಾರಿಗುಡಿಯಲ್ಲಿ ಜಾತ್ರೆ ನಡೆಯುತ್ತಿದೆ. ಶಿವು ವಿರುದ್ಧ ದುಷ್ಟಶಕ್ತಿಯೊಂದು ಹರಸಾಹಸ ಮಾಡುತ್ತಿದೆ. ಈಗ ಶಿವು ಸೂಪರ್ ನ್ಯಾಚುರಲ್ ಶಕ್ತಿ ಪಡೆದಿದ್ದಾನೆ.

ಸತ್ಯ ಗೊತ್ತಾಗುತ್ತದೆ
ಹೌದು, ಮಾರಿಗುಡಿಗೂ ನಿಧಿ-ನಿತ್ಯಾ ತಂದೆ-ತಾಯಿ ಕೊಲೆಗೆ ಸಂಬಂಧ ಇದೆ. ಇದರ ಹಿಂದಿರೋದು ಕರ್ಣನ ಅತ್ತೆ ನಯನತಾರಾ. ಕರ್ಣನ ಮನೆಯವರು ಮಾರಿಗುಡಿಗೆ ಹೋದರೆ ತನ್ನ ಸತ್ಯ ಗೊತ್ತಾಗುತ್ತದೆ ಎಂದು ಭಾವಿಸುತ್ತಾಳೆ. ಮಾರಿಗುಡಿ ಜಾತ್ರೆಗೆ ಬಂದವರನ್ನು ತಡೆಯೋದು ಅವಳ ಗುರಿ.
ದಿಗ್ಬಂಧನ ಮಾಡಿದ್ರಾ?
ಈಗ ಜಾತ್ರೆ ನಡೆಯಬೇಕು, ಶಿವು ಅದರ ಸಾರಥ್ಯ ವಹಿಸಬೇಕು. ಒಂದು ಕಡೆ ನಯನತಾರಾ ತನ್ನ ರೌಡಿಗಳನ್ನು ಕಳಿಸುತ್ತಿದ್ದಾಳೆ. ಇನ್ನೊಂದು ಕಡೆ ದೇವಿ ಹಾಗೂ ದೇವಿ ಪುತ್ರನ ದಿಗ್ಬಂಧನ ಕೂಡ ನಡೆಯುತ್ತಿದೆ. ಆದರೆ ಮಾಟ-ಮಂತ್ರ ಮಾಡಿದವರು ಸತ್ತಿದ್ದಾರೆ.
ಶಿವುಗೆ ಸೂಪರ್ ನ್ಯಾಚುರಲ್ ಶಕ್ತಿ ಬಂತಾ?
ಶಿವುಗೆ ಕರ್ಣ ಸಾಥ್ ಕೊಟ್ಟಿದ್ದಾನೆ. ಶಿವು ಪೂಜೆಯನ್ನು ತಡೆಯೋಕೆ ಬಂದವರನ್ನು ಕರ್ಣ ತಡೆದಿದ್ದಾನೆ. ಒಟ್ಟಿನಲ್ಲಿ ಇಬ್ಬರು ಹೀರೋಗಳು ಸೇರಿಕೊಂಡಿದ್ದು, ವೀಕ್ಷಕರಿಗೆ ಹಬ್ಬ ಆಗಿದೆ. ಈ ಜಾತ್ರೆ ನೆಪದಲ್ಲಿ ಯಾವ ಸತ್ಯ ಹೊರಬರಲಿದೆ ಎಂದು ಕಾದು ನೋಡಬೇಕಿದೆ. ಜಾತ್ರೆಯ ನಂತರ ಶಿವು ಕೆರೆಯಿಂದ ಎದ್ದು ಎತ್ತರಕ್ಕೆ ಹಾರುತ್ತಾನೆ. ಶಿವುಗೆ ಸೂಪರ್ ನ್ಯಾಚುರಲ್ ಶಕ್ತಿ ಬಂತಾ ಎಂಬ ಡೌಟ್ ಕೂಡ ಬರುವುದು.
ಶಿವು ಜೀವನದಲ್ಲಿ ಏನು ನಡೆದಿದೆ?
ಶಿವು ಈ ಹಿಂದೆ ದೊಡ್ಡ ರೌಡಿಯಾಗಿದ್ದನು. ಈಗ ಮುಗ್ಧ, ಸಾಧು ಪ್ರಾಣಿ ಎನ್ನೋ ಥರ ಬದುಕುತ್ತಿದ್ದಾನೆ. ಶಿವು ಜೀವನದಲ್ಲಿ ಏನು ನಡೆದಿದೆ? ಏನಾಯ್ತು ಎಂದು ರಿವೀಲ್ ಆಗಬೇಕಿದೆ. ಸತ್ಯ ಗೊತ್ತಾಯ್ತು ಎಂದು ಪಾರು ಅವನಿಂದ ದೂರ ಹೋಗ್ತಾಳಾ ಎಂಬ ಕುತೂಹಲವೂ ಇದೆ.
ಪಾತ್ರಧಾರಿಗಳು
ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಕರ್ಣ ಪಾತ್ರದಲ್ಲಿ ಕಿರಣ್ ರಾಜ್, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಅವರು ನಟಿಸಿದ್ದಾರೆ. ಉಳಿದಂತೆ ನಮ್ರತಾ ಗೌಡ, ಭವ್ಯಾ ಗೌಡ, ಗಾಯತ್ರಿ ಪ್ರಭಾಕರ್ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

