- Home
- Entertainment
- TV Talk
- ಗಂಡನ ಜೊತೆ ಹುಟ್ಟೂರಲ್ಲಿ ದಸರಾ ಸಂಭ್ರಮಿಸಿ, ರಾಜ್ ಬಿ ಶೆಟ್ಟಿ ಗ್ಯಾಂಗ್ ಜೊತೆ ಮೀನೂಟ ಸವಿದ Anchor Anushree
ಗಂಡನ ಜೊತೆ ಹುಟ್ಟೂರಲ್ಲಿ ದಸರಾ ಸಂಭ್ರಮಿಸಿ, ರಾಜ್ ಬಿ ಶೆಟ್ಟಿ ಗ್ಯಾಂಗ್ ಜೊತೆ ಮೀನೂಟ ಸವಿದ Anchor Anushree
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ, ಮದುವೆಯಾದ ಬಳಿಕ ಮೊದಲ ಬಾರಿಗೆ ಹುಟ್ಟೂರು ಮಂಗಳೂರಿಗೆ ತೆರಳಿದ್ದು, ಅಲ್ಲಿನ ನವರಾತ್ರಿ ಸಂಭ್ರಮವನ್ನು ಗಂಡನ ಜೊತೆ ಎಂಜಾಯ್ ಮಾಡಿದ್ದಾರೆ. ಜೊತೆಗೆ ರಾಜ್ ಬಿ ಶೆಟ್ಟಿ ಗ್ಯಾಂಗ್ ಜೊತೆ ಮೀನೂಟ ಸವೆದಿದ್ದಾರೆ.

ನಿರೂಪಕಿ ಅನುಶ್ರೀ
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮಹಾನಟಿ ನಿರೂಪಣೆಯ ಜೊತೆಗೆ, ದಾಂಪತ್ಯ ಜೀವನ, ಟ್ರಾವೆಲ್ ಎಲ್ಲವನ್ನೂ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಮಂಗಳೂರು ದಸರಾ ಸಂಭ್ರಮಿಸಿದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಮಂಗಳೂರಲ್ಲಿ ಅನುಶ್ರೀ
ಮಂಗಳೂರು ದಸರಾ ಜನಪ್ರಿಯವಾಗಿದ್ದು, ಈ ಸಂದರ್ಭದಲ್ಲಿ ಅನುಶ್ರೀ ಕೂಡ ತಮ್ಮ ಹುಟ್ಟೂರಿಗೆ ಪತಿ ರೋಷನ್ ಜೊತೆ ಬಂದಿದ್ದು, ಕುದ್ರೋಳಿ ದಸರಾವನ್ನು ಸಂಭ್ರಮಿಸಿದ್ದಾರೆ. ಆ ಸುಂದರ ಕ್ಷಣಗಳ ಫೋಟೊಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದಸರಾ ಕ್ಷಣಗಳು… ಇನ್ ಮಂಗಳೂರು
ಮಂಗಳೂರು ದಸರಾದ ಒಂದಷ್ಟು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಹುಲಿ ವೇಷದ ಜೊತೆ ಸೆಲ್ಫಿ, ಹುಲಿ ಮುಖವಾಡ ಹಾಕಿ ಡ್ಯಾನ್ಸ್, ಶಾರಾದ ದೇವಿ ಮೆರವಣಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ಜೊತೆ ಅನುಶ್ರೀ
ಇನ್ನು ಅನುಶ್ರೀಯವರು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಗ್ಯಾಂಗ್ ಜೊತೆ ಸಮಯ ಕಳೆದಿದ್ದು, ಅವರ ಜೊತೆ ಮಂಗಳೂರಿನ ಸ್ಪೆಷಲ್ ಮೀನೂಟ ಕೂಡ ಸವೆದಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆಗಿನ ಫೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ
ನಿರೂಪಕಿ ಅನುಶ್ರೀಯವರು ಮದುವೆಯಾದ ಬಳಿಕ ಮೊದಲ ಬಾರಿ ಪತಿ ರೋಷನ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಪತಿ ಜೊತೆ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಮುದ್ದಾದ ಫೋಟೊಗಳನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಹಳೆ ನೆನಪುಗಳ ಬಿಚ್ಚಿಟ್ಟ ನಿರೂಪಕಿ
ಅನುಶ್ರೀಯವರು ಮಂಗಳೂರಿನ ಜನಪ್ರಿಯ ಜಾಯ್ ಕೂಲ್ ಡ್ರಿಂಕ್ಸ್ ಕುಡಿಯುವ ಫೋಟೊ ಶೇರ್ ಮಾಡಿದ್ದು, ಅಭಿಮಾನಿಗಳ ಕಾಮೆಂಟ್ ಗೆ ಇದು ತಮ್ಮ ನೆಚ್ಚಿನ ಬಾಲ್ಯದ ಕೂಲ್ ಡ್ರಿಂಕ್ಸ್ ಎಂದಿದ್ದಾರೆ ಅನುಶ್ರೀ.
ರಕ್ಷಿತ್ ಶೆಟ್ಟಿಗೆ ಮದುವೆ ಮಾಡಿಸಿ ಎಂದ ಫ್ಯಾನ್
ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ, ಮೇಡಂ ನಿಮಗೂ ಮದುವೆಯಾಯಿತು, ಆದಷ್ಟು ಬೇಗ ರಕ್ಷಿತ್ ಶೆಟ್ಟಿಯವರಿಗೆ ಒಂದೊಳ್ಳೆ ಹುಡುಗಿಯನ್ನು ನೋಡಿ ಮದುವೆ ಮಾಡಿಸಿ ಎಂದಿದ್ದಾರೆ. ಅದಕ್ಕೆ ಅನುಶ್ರೀ ನಗುವಿನ ಇಮೋಜಿ ಹಾಕಿದ್ದಾರೆ.
ಗಂಡನ ಜೊತೆ ಜಾಲಿ ಟ್ರಿಪ್
ಇತ್ತೀಚೆಗಷ್ಟೇ ಅನುಶ್ರೀ ತಮ್ಮ ಪತಿ ಜೊತೆ ವೆಕೇಶನ್ ತೆರಳಿದ್ದರು, ಅಲ್ಲಿ ಕೆಸರು ಗದ್ದೆ, ಮಣ್ಣು, ಟ್ರಾಕ್ಟರ್ ಎನ್ನುವ ಸ್ವಚ್ಚಂದವಾಗಿ ಸಮಯ ಕಳೆದಿದ್ದರು. ಆ ಫೋಟೊಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.