MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಮದುಮಗಳ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree

ಮದುಮಗಳ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree

ಆ್ಯಂಕರ್ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ನಂತರವೂ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮದುಮಗಳ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಆ್ಯಂಕರ್​ ಅನುಶ್ರೀ. ಅವರು ಹೇಳಿರೋದನ್ನು ಕೇಳಿ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. 

2 Min read
Suchethana D
Published : Sep 11 2025, 07:14 PM IST
Share this Photo Gallery
  • FB
  • TW
  • Linkdin
  • Whatsapp
18
ದಾಂಪತ್ಯ ಜೀವನದ ಖುಷಿಯಲ್ಲಿ ಆ್ಯಂಕರ್​ ಅನುಶ್ರೀ
Image Credit : Instagram

ದಾಂಪತ್ಯ ಜೀವನದ ಖುಷಿಯಲ್ಲಿ ಆ್ಯಂಕರ್​ ಅನುಶ್ರೀ

ಆ್ಯಂಕರ್​ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. 38 ವರ್ಷದ ಅನುಶ್ರೀ ಅವರು ಕೊಡಗು ಮೂಲದ ರೋಷನ್​ ಜೊತೆ ಹಣೆಮಣೆ ಏರಿದ್ದಾರೆ. ಅನುಶ್ರೀ ಮದುವೆ ಯಾವಾಗ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರೂ ಈ ಬಗ್ಗೆ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದ್ದ ನಟಿ, ಕೊನೆಗೂ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಷ್ಟಕ್ಕೂ ಆ್ಯಂಕರ್​ ಅನುಶ್ರೀ(Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್​ ಇರುವುದು ಗೊತ್ತೇ ಇದೆ.

28
ಎಲ್ಲರಿಗೂ ಅನುಶ್ರೀನೇ ಬೇಕು
Image Credit : anchor anushree instagram

ಎಲ್ಲರಿಗೂ ಅನುಶ್ರೀನೇ ಬೇಕು

ಜೀ ಟಿವಿ, ಕಲರ್ಸ್​ ಕನ್ನಡ ಸೇರಿದಂತೆ ಕೆಲವು ಚಾನೆಲ್​ಗಳಲ್ಲಿ ಇವರು ಆ್ಯಂಕರಿಂಗ್​ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್​ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.

Related Articles

Related image1
Anchor Anushreeಗೆ ನಾವೇ ಬೆಳೆಸಿದ್ದು, MLA ಮದ್ವೆಯಲ್ಲೂ ಈ ಪರಿ ಇನ್​ಸಲ್ಟ್​ ಮಾಡ್ಲಿಲ್ಲ... ಫ್ಯಾನ್ಸ್​ ಆಕ್ರೋಶ!
Related image2
ಹುಡುಗನ ವಿಷ್ಯದಲ್ಲಿ ನೀವು ಹೀಗೆ ಮಾಡೋದಾ? Anchor Anushreeಗೆ ಮದ್ವೆಮನೆಯಲ್ಲಿಯೇ ಶಿವಣ್ಣ ಕ್ಲಾಸ್​!
38
ಪ್ರಶ್ನೆಗೆ ಉತ್ತರಿಸಿದ್ದ ನಟಿ
Image Credit : X

ಪ್ರಶ್ನೆಗೆ ಉತ್ತರಿಸಿದ್ದ ನಟಿ

ಕಿರುತೆರೆಯ ನಟ-ನಟಿಯರ ಮದುವೆಯೆಂದರೆ, ಸಾಮಾನ್ಯವಾಗಿ ಅವರ ಪಾತ್ರ ಇರುವ ದೃಶ್ಯಗಳನ್ನು ಮೊದಲೇ ಶೂಟಿಂಗ್​ ಮಾಡಿ ಮುಗಿಸುತ್ತಾರೆ. ಅವರು ವಾಪಸಾಗುವವರೆಗೂ ಅವರು ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ರಿಯಾಲಿಟಿ ಷೋಗಳು ಹಾಗಾಗುವುದಿಲ್ಲ. ಮೊದಲೇ ರಿಕಾರ್ಡಿಂಗ್​ ಮಾಡಿದರೂ 3-4 ಕಂತುಗಳ ರಿಕಾರ್ಡಿಂಗ್​ ಮಾಡುವುದು ಸುಲಭವಲ್ಲ. ಆದ್ದರಿಂದ ಆ್ಯಂಕರ್​ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್​ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಪ್ರಶ್ನೆಗೆ ಮದುವೆಯ ದಿನವೇ ನಟಿ ಉತ್ತರಿಸಿದ್ದರು. ನಾಡಿದ್ದೇ ನಾನು ಡ್ಯೂಟಿಗೆ ಜಾಯಿನ್​ ಆಗುತ್ತಿದ್ದೇನೆ ಎಂದಿದ್ದರು.

48
ಭರ್ಜರಿ ಗುಡ್​ನ್ಯೂಸ್
Image Credit : Asianet News

ಭರ್ಜರಿ ಗುಡ್​ನ್ಯೂಸ್

ಅದೇ ರೀತಿ ಇದೀಗ ನಟಿ ಈಗ ಲಕ್ಷಣವಾಗಿ ಸೀರೆಯುಟ್ಟು ಮದುಮಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವೀಕ್ಷಕರಿಗೆ ಅವರು ಭರ್ಜರಿ ಗುಡ್​ನ್ಯೂಸ್ ಕೂಡ ಕೊಟ್ಟಿದ್ದಾರೆ.

58
ಡಾನ್ಸ್​ ಕರ್ನಾಟಕ ಡಾನ್ಸ್​ ಮತ್ತು ಕಾಮಿಡಿ ಕಿಲಾಡಿಗಳು
Image Credit : Instagram

ಡಾನ್ಸ್​ ಕರ್ನಾಟಕ ಡಾನ್ಸ್​ ಮತ್ತು ಕಾಮಿಡಿ ಕಿಲಾಡಿಗಳು

ಡಾನ್ಸ್​ ಕರ್ನಾಟಕ ಡಾನ್ಸ್​ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್​ ಕುರಿತು ಅವರು ಮಾತನಾಡಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ DKD & Comedy Kiladigalu ಕಾಮಿಡಿ ಕಿಲಾಡಿಗಳು ಸೀಸನ್-5ರ ಆಡಿಷನ್ ನಡೆಯುತ್ತಿದೆ. ಬೆಳಿಗ್ಗೆ 9 ಗಂಟೆಯಿಂದ ಇದು ಶುರುವಾಗಲಿದೆ ಎನ್ನುವ ಮಾಹಿತಿ ಕೊಟ್ಟಿದ್ದಾರೆ. ಆಸಕ್ತರು ಭಾಗವಹಿಸುವಂತೆ ಅವರು ಕೋರಿದ್ದಾರೆ.

68
ಹೊಸ ಕಳೆ ನೋಡಿ ಫುಲ್​ ಖುಷ್​
Image Credit : Asianet News

ಹೊಸ ಕಳೆ ನೋಡಿ ಫುಲ್​ ಖುಷ್​

ಆ್ಯಂಕರ್​ ಅನುಶ್ರೀ ಅವರಿಗೆ ಬಂದಿರುವ ಹೊಸ ಕಳೆಯನ್ನು ನೋಡಿ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಬಳಿಕ ಬಹುತೇಕ ಮಂದಿಯ ಕಣ್ಣು ಹೋಗುವುದು ಅವರ ತಾಳಿಯತ್ತ. ಮಂಗಳಸೂತ್ರವನ್ನು ಅವರು ಹಾಕಿದ್ದಾರೋ, ಇಲ್ಲವೋ ಎನ್ನುವುದೇ ಹೈಲೈಟ್​ ಆಗಿಬಿಡುತ್ತದೆ.

78
ಮದುಮಗಳಂತೆ ಮಿಂಚಿಂಗ್​
Image Credit : Asianet News

ಮದುಮಗಳಂತೆ ಮಿಂಚಿಂಗ್​

ಆದರೆ ಅನುಶ್ರೀ ಅವರು ಲಕ್ಷಣವಾಗಿ ಸೀರೆಯುಟ್ಟು ಮದುಮಗಳಂತೆ ಕಂಗೊಳಿಸುತ್ತಿರುವುದು ಮಾತ್ರವಲ್ಲದೇ ಮದುವೆಯ ದಿನ ಹಾಕಿರುವ ಮಂಗಳಸೂತ್ರವನ್ನೂ ಹೊರಗಡೆಯೇ ಹಾಕಿಕೊಂಡಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಿಂದ ಕಮೆಂಟ್​ ಹಾಕುತ್ತಿದ್ದಾರೆ. ಸದಾ ನಗುತ್ತಿರಿ, ಹೀಗೆಯೇ ಭಾರತೀಯ ನಾರಿಯಂತೆ ಕಂಗೊಳಿಸುತ್ತಿರಿ ಎಂದೆಲ್ಲಾ ಆಶೀರ್ವಾದ ಮಾಡಿದ್ದಾರೆ.

88
ವೀಕ್ಷಕರಿಂದ ಪ್ರಶ್ನೆ
Image Credit : Asianet News

ವೀಕ್ಷಕರಿಂದ ಪ್ರಶ್ನೆ

ಮತ್ತೆ ಕೆಲವರು ಇಷ್ಟು ಬೇಗ ಕೆಲಸಕ್ಕೆ ಯಾಕೆ ಬಂದ್ರಿ? ಹನಿಮೂನ್​ (Honeymoon) ಹೋಗಲ್ವಾ ಎಂದು ಪ್ರಶ್ನಿಸಿದ್ದಾರೆ. ಮದುವೆಯ ಲೈಫ್​ ಎಂಜಾಯ್​ ಮಾಡಿ, ಈ ಕೆಲಸವೆಲ್ಲಾ ಇರುವುದೇ, ಬಿಡುವು ತೆಗೆದುಕೊಳ್ಳಿ ಎಂದು ಸಲಹೆಗಳನ್ನೂ ಕೊಟ್ಟಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ರಿಯಾಲಿಟಿ ಶೋ
ಜೀ ಕನ್ನಡ
ಕಲರ್ಸ್ ಕನ್ನಡ
ಮದುವೆ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved