ಖ್ಯಾತ ನಿರೂಪಕಿ ಅನುಶ್ರೀ ಇತ್ತೀಚೆಗೆ ರೋಷನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಮೂರೇ ದಿನಕ್ಕೆ ಕೆಲಸಕ್ಕೆ ಮರಳಿದ ಅವರು, ತಮ್ಮ ನಿರೂಪಣಾ ವೃತ್ತಿಯನ್ನು ಬಿಡುವುದಿಲ್ಲ ಮತ್ತು ಇದೇ ಉತ್ಸಾಹದಿಂದ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಆ್ಯಂಕರ್ ಅನುಶ್ರೀ (Anchor Anushree) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. 38 ವರ್ಷದ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಹಣೆಮಣೆ ಏರಿದ್ದಾರೆ. ಅನುಶ್ರೀ ಮದುವೆ ಯಾವಾಗ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರೂ ಈ ಬಗ್ಗೆ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದ್ದ ನಟಿ, ಕೊನೆಗೂ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಷ್ಟಕ್ಕೂ ಆ್ಯಂಕರ್ ಅನುಶ್ರೀ (Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್ ಇರುವುದು ಗೊತ್ತೇ ಇದೆ.
ಅನುಶ್ರೀಗೆ ಭಾರಿ ಡಿಮಾಂಡ್
ಜೀ ಟಿವಿ, ಕಲರ್ಸ್ ಕನ್ನಡ ಸೇರಿದಂತೆ ಕೆಲವು ಚಾನೆಲ್ಗಳಲ್ಲಿ ಇವರು ಆ್ಯಂಕರಿಂಗ್ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.
ಮೂರೇ ದಿನಕ್ಕೆ ಕೆಲಸಕ್ಕೆ ಹಾಜರ್:
ಆದ್ದರಿಂದ ಆ್ಯಂಕರ್ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಚಿಂತೆ ಅಭಿಮಾನಿಗಳಿಗೆ ಇದ್ದೇ ಇತ್ತು. ರಿಯಾಲಿಟಿ ಷೋಗಳಲ್ಲಿ ಇವರು ಮದುವೆಯ ಬಳಿಕ ಹನಿಮೂನ್, ಅದೂ ಇದೂ ಎಂದು ಕೆಲವು ದಿನಗಳ ಮಟ್ಟಿಗೆ ಬಿಡುವು ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿತ್ತು. ಈ ಬಗ್ಗೆ ಮದುವೆಯ ದಿನವೇ ಕೆಲವರು ಈ ಪ್ರಶ್ನೆಯನ್ನು ಅನುಶ್ರೀ ಮುಂದೆ ಇಟ್ಟಿದ್ದರು. ಆಗ ಅವರು, ಶಾಕಿಂಗ್ ಉತ್ತರ ಕೊಟ್ಟಿದ್ದರು. ನಾಡಿದ್ದುಯಿಂದಲೇ ಮತ್ತೆ ಕೆಲಸ ಶುರು ಮಾಡುತ್ತೇನೆ ಎಂದಿದ್ದರು. ಇದನ್ನು ಕೇಳಿ ಹಲವರು ಇಷ್ಟು ಬೇಗ ಯಾಕಮ್ಮಾ, ಮದುವೆಯಾದ ಮೇಲೆ ಕೆಲವು ದಿನ ಎಂಜಾಯ್ ಮಾಡಿ, ಕೆಲಸವೆಲ್ಲಾ ಇದದ್ದೇ ಎಂದಿದ್ದರೂ, ಕೆಲಸದ ಮೇಲೆ ಬದ್ಧತೆ ತೋರಿಸಿದ್ದ ಅನುಶ್ರೀ ತಮ್ಮ ಮಾತಿನಂತೆ ಕೂಡಲೇ ಮತ್ತೆ ಷೋನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹುಡುಗನ ವಿಷ್ಯದಲ್ಲಿ ನೀವು ಹೀಗೆ ಮಾಡೋದಾ? Anchor Anushreeಗೆ ಮದ್ವೆಮನೆಯಲ್ಲಿಯೇ ಶಿವಣ್ಣ ಕ್ಲಾಸ್!
ಆ್ಯಂಕರಿಂಗ್ ಬಿಡ್ತಾ ಇದ್ದಾರಾ ಅನುಶ್ರೀ?
ಇದೀಗ ಮತ್ತೊಮ್ಮೆ ಅನುಶ್ರೀ ಅವರಿಗೆ ಅದೇ ಪ್ರಶ್ನೆ ಎದುರಾಗಿದೆ. ಕೆಲಸ ಮುಂದುವರೆಸುತ್ತೀರಾ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಅನುಶ್ರೀ ಅವರು, ಮತ್ತೊಬ್ಬರ ಮನೆಯನ್ನು ಬೆಳಗಲು ಹೊರಟಿದ್ದೇನೆ ಎಂದ ಮಾತ್ರಕ್ಕೆ ನನ್ನ ಕೆಲಸವನ್ನು ಬಿಡುವುದಿಲ್ಲ. ಇದೇ ಜೋಶ್, ಇದೇ ಉತ್ಸಾಹ ಇನ್ನೂ ಕೆಲವು ವರ್ಷ ಇದ್ದೇ ಇರುತ್ತದೆ. ನೀವು ನನ್ನನ್ನು ಇನ್ನೊಂದಷ್ಟು ವರ್ಷ ಸಹಿಸಿಕೊಳ್ಳಲೇಬೇಕು ಎನ್ನುವ ಮೂಲಕ ಕೆಲಸದ ಮೇಲೆ ಮತ್ತೊಮ್ಮೆ ಬದ್ಧತೆ ತೋರಿಸಿದ್ದಾರೆ. ಇದನ್ನು ನ್ಯೂಸ್‌ಬೀಟ್ ಕನ್ನಡಾ ಚಾನೆಲ್ ಶೇರ್ ಮಾಡಿಕೊಂಡಿದೆ.
ಇದನ್ನೂ ಓದಿ: ಮದುಮಗಳ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ Anchor Anushree
