ಗ್ರೀನ್ ಗೌನ್‌ನಲ್ಲಿ ಸಿಂಡ್ರೆಲಾ ರೀತಿ ಮಿಂಚಿದ ಅನುಪಮಾ ಗೌಡ; ಹಣೆ ಬೊಟ್ಟು ಇಟ್ಟಿಲ್ಲ ಎಂದು ನೆಟ್ಟಿಗರು ಗರಂ
ರಾಜಾ ರಾಣಿ ಕಾರ್ಯಕ್ರಮಕ್ಕೆ ಹಸಿರು ಗೌನ್ ಧರಿಸಿದ ಅನುಪಮಾ ಗೌಡ. ಹಣೆ ಬೊಟ್ಟು ಇಡಬೇಕು ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು....
ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಜನಪ್ರಿಯ ನಿರೂಪಕಿ ಅನುಪಮಾ ಗೌಡ ಸದ್ಯ ರಾಜಾ ರಾಣಿ ರೀಲೋಡೆಡ್ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಪ್ರತಿ ವೀಕೆಂಡ್ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಅನುಪಮಾ ಗೌಡ ಧರಿಸಿ ಬರುವ ಡಿಸೈನರ್ ವಸ್ತ್ರುಗಳನ್ನು ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ.
ಈ ವೀಕೆಂಡ್ ಅನುಪಮಾ ಗೌಡ ಹಸಿರು ಬಣ್ಣದ ಡಿಸೈನ್ ಗೌನ್ ಧರಿಸಿದ್ದಾರೆ. ಹಸಿರು ಬಣ್ಣದ ಮುತ್ತುಗಳು ಮತ್ತು ಬೀಡ್ಸ್‌ಗಳಿಂದ ಡಿಸೈನ್ ಮಾಡಲಾಗಿದೆ.
ಇನಾಯ ಡಿಸೈನರ್ ಸ್ಟುಡಿಯೋ ಈ ವಸ್ತ್ರವನ್ನು ಡಿಸೈನ್ ಮಾಡಿದ್ದು ಲಿಖಿತಾ ಸುರೇಶ್ ಸ್ಟೈಲಿಂಗ್ ಮಾಡಿದ್ದಾರೆ. ಹಾಗೂ ಇಷ್ಟು ಚಂದದ ಫೋಟೋವನ್ನು ಉಮೇಶ್ ಫೋಟೋಗ್ರಾಫಿ ಕ್ಲಿಕ್ ಮಾಡಿದ್ದಾರೆ.
ಈ ಡ್ರೆಸ್‌ಗೆ ಒಂದು ಉದ್ದವಾದ ಕಿವಿ ಓಲೆ ಅದರ ಜೊತೆ ಸಣ್ಣ ಕವಿ ಓಲೆ ಧರಿಸಿರುವ ಅನುಪಮಾ ಗೌಡ, ಎರಡು ಫಿಂಗರ್ ರಿಂಗ್ ಹಾಕಿಕೊಂಡಿದ್ದಾರೆ ಅಷ್ಟೇ.
ನೀವು ಯಾವ ಡ್ರೆಸ್ ಧರಿಸಿದ್ದರೂ ಸೂಪರ್ ಆದರೆ ಹಣೆಗೆ ಬೊಟ್ಟು ಇಟ್ಟಿಲ್ಲ ಅನ್ನೋದು ತುಂಬಾ ಬೇಸರ ಆಗುತ್ತಿದೆ. ದಯವಿಟ್ಟು ಬೊಟ್ಟು ಇಡದೆ ಫೋಟೋ ಹಾಕಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.