ಮರುಭೂಮಿಯಲ್ಲಿ ಬಿಸಿ ಹೆಚ್ಚಿಸಿದ ದಾಸ ಪುರಂದರ ನಟಿ ಅಮೂಲ್ಯ ಭಾರಧ್ವಜ್
ದಾಸ ಪುರಂದರ, ವೃಂದಾವನ ಸೀರಿಯಲ್ ನಟಿ ಅಮೂಲ್ಯ ಭಾರಧ್ವಜ್ ದುಬೈನ ಮರುಭೂಮಿಯಲ್ಲಿ ನಿಂತು ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಅಮೂಲ್ಯ ಭಾರಧ್ವಜ್ (Amulya Bharadwaj) ಕನ್ನಡ ಕಿರುತೆರೆಗೆ ಚಿರಪರಿಚಿತ ನಟಿ. ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ವಿವಿಧ ಪಾತ್ರಗಳ ಮೂಲಕ ಮಿಂಚಿದವರು ಅಮೂಲ್ಯ ಭಾರಧ್ವಜ್.
ದಾಸ ಪುರಂದರ (Dasa Purandara) ಧಾರಾವಾಹಿಯಲ್ಲಿ ಪುರಂದರನ ಪತ್ನಿಯಾಗಿ ಮಿಂಚಿದ್ದ ಅಮೂಲ್ಯ ಭಾರಧ್ವಜ್. ತಮ್ಮ ಮುಗ್ಧ ಅಭಿನಯದಿಂದ ಗಮನ ಸೆಳೆದಿದ್ದರು. ಇವರ ಪಾತ್ರ ಕೂಡ ಗಮನ ಸೆಳೆದಿತ್ತು.
ಇದಾದ ನಂತರ ಅಮೂಲ್ಯ ಭಾರಧ್ವಜ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಗೆ (Brundavana Serial) ನಾಯಕಿಯಾಗುವ ಮೂಲಕ ಗಮನ ಸೆಳೆದಿದ್ದರು. ಇದರಲ್ಲೂ ಸಹ ಅಮೂಲ್ಯ ಅವರದ್ದು ಮುಗ್ಧ ಪಾತ್ರ.
ಬೃಂದಾವನ ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತರ ತುಂಬು ಕುಟುಂಬಕ್ಕೆ ಸೊಸೆಯಾಗಿ ಹೋಗುವ ಗ್ರಾಮದ ಒಬ್ಬ ಮುಗ್ಧ ಹುಡುಗಿಯ ಕಥೆಯಾಗಿತ್ತು. ಎಲ್ಲಾ ಧಾರಾವಾಹಿಗಳಲ್ಲೂ ಅಮೂಲ್ಯ ತುಂಬಾನೆ ಪಾಪದ, ಮುಗ್ಧ ಗ್ರಾಮೀಣ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದರು.
ಆದರೆ ರಿಯಲ್ ಲೈಫಲ್ಲಿ ಅಮೂಲ್ಯ ಅಷ್ಟೊಂದು ಸಿಂಪಲ್ ಅಲ್ವೇ ಅಲ್ಲ. ಸಖತ್ ಸ್ಟೈಲಿಶ್ ಆಗಿದ್ದಾರೆ ಇವರು. ಹೆಚ್ಚಾಗಿ ಮಾಡರ್ನ್ ಡ್ರೆಸಲ್ಲೇ ಪೋಸ್ ಕೊಡುವ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಹೊಸದಾಗಿ ದುಬೈ ಮರುಭೂಮಿಯಲ್ಲಿ ಸಖತ್ ಬೋಲ್ಡ್ ಆಗಿ ಡ್ರೆಸ್ ಮಾಡಿರುವ ಹಲವು ಫೋಟೊಗಳನ್ನು ಶೇರ್ ಮಾಡಿದ್ದು, ಇಂಟರ್ನೆಟ್ಟಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.
ಸೂರ್ಯ ಮುಳುತ್ತಿರುವ ಹಿನ್ನೆಲೆ, ಮರುಭೂಮಿಯ ಮರಳಿನ ಮೇಲೆ ಗೋಲ್ಡನ್ ಕ್ರಾಪ್ ಟಾಪ್ ಹಾಗೂ ಥೈ ಹೈ ಸ್ಲಿಟ್ ಸ್ಕರ್ಟ್ ಧರಿಸಿ ಬಿಂದಾಸ್ ಆಗಿ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೊ ಜೊತೆ ನಟಿ Never met a desert sunset I didn't like ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಅಮೂಲ್ಯ ಭಾರಧ್ವಜ್ ಫೋಟೊಗಳಿಗೆ ಹಾರ್ಟ್ ಹಾಗೂ ಫೈರ್ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಅಮೂಲ್ಯ ಬೋಲ್ಡ್ ಫೋಟೊ ನೋಡಿ ಫ್ಯಾನ್ಸ್ ಕೂಡ ಮೆಚ್ಚಿ ಸೂಪರ್ ಅಂದಿದ್ದಾರೆ.
ಅಮೂಲ್ಯ ಭಾರಧ್ವಜ್ ಸದ್ಯ ನಟನೆಯಿಂದ ದೂರ ಇದ್ದಾರೆ, ಮುಂದೆ ಯಾವ ಸೀರಿಯಲ್ ನಲ್ಲಿ ಇವರು ನಟಿಸಲಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ. ಆದಷ್ಟು ಬೇಗನೆ ಸೀರಿಯಲ್ ಗೆ ಕಂ ಬ್ಯಾಕ್ ಮಾಡಲಿ ಅನ್ನೋದು ಅಭಿಮಾನಿಗಳ ಆಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.