- Home
- Entertainment
- TV Talk
- Amruthadhare: ಕೆಡಿ ಜೆಡಿ ಪ್ಲ್ಯಾನ್ ತಲೆಕೆಳಗಾಯ್ತು… ಅಖಾಡಕ್ಕೆ ಇಳಿದೇ ಬಿಟ್ರು ಭೂಮಿ-ಗೌತಮ್
Amruthadhare: ಕೆಡಿ ಜೆಡಿ ಪ್ಲ್ಯಾನ್ ತಲೆಕೆಳಗಾಯ್ತು… ಅಖಾಡಕ್ಕೆ ಇಳಿದೇ ಬಿಟ್ರು ಭೂಮಿ-ಗೌತಮ್
Amruthadhare: ಅಮೃತಧಾರೆ ಧಾರಾವಾಹಿಯಲ್ಲಿ ಕೆಡಿ ಜೈದೇವ್ ತನ್ನ ಮಾಜಿ ಪತ್ನಿ ಮಲ್ಲಿ ಮದುವೆ ಮಾಡಿ, ಆಕೆಯನ್ನು ನರಕಕ್ಕೆ ತಳ್ಳುತ್ತೇನೆ ಎಂದು ಮಾಡಿದ್ದ ಪ್ಲ್ಯಾನ್ ಈಗ ಆತನಿಗೆ ತಿರುಗಿ ಬಿದ್ದಿದೆ, ಅಖಾಡಕ್ಕಿಳಿತ ಗೌತಮ್ ಮತ್ತು ಭೂಮಿ ವಾರ್ನಿಂಗ್ ಕೊಟ್ಟೇ ಬಿಟ್ರು.

ಅಮೃತಧಾರೆ
ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೋ ನೋಡಿ, ವೀಕ್ಷಕರಂತೂ ಸಖತ್ ಖುಷಿಯಾಗಿದ್ದಾರೆ. ಇಷ್ಟು ದಿನ ಕಾಯುತ್ತ ಕುಳಿತಿದ್ದ ಗಳಿಗೆ ಬಂದೇ ಬಿಟ್ಟಿದೆ. ಜೈ ದೇವ್ ಗೆ ಸರಿಯಾಗಿ ಪೆಟ್ಟು ಬಿದ್ದಿದೆ ಎಂದು ಹೇಳುತ್ತಿದ್ದಾರೆ ಜನ. ಹಾಗಿದ್ರೆ ಅಷ್ಟಕ್ಕೂ ಮುಂದಿನ ಎಪಿಸೋಡಲ್ಲಿ ಏನಾಗಲಿದೆ ಅನ್ನೋದನ್ನು ನೋಡೊಣ.
ನಡೆದೆ ಬಿಡ್ತು ಮಲ್ಲಿ-ಸುನಿಲ್ ಮದುವೆ
ಜೈದೇವ್ ಪ್ಲ್ಯಾನ್ ಮಾದಿ ಮಲ್ಲಿ ಮದುವೆಯನ್ನು ಕೊನೆ ಗಳಿಗೆಯಲ್ಲಿ ಹೇಗಾದರು ಮಾಡಿ ನಿಲ್ಲಿಸಬೇಕು ಎಂದು ಯೋಚನೆ ಮಾಡಿದ್ದ, ಆದರೆ ಅಲ್ಲಿ ನಡೆದದ್ದೇ ಬೇರೆ. ಗೌತಮ್ ಮುಂದೆ ನಿಂತು ಕೊನೆಗೂ ಮಲ್ಲಿ ಮತ್ತು ಸುನಿಲ್ ಮದುವೆ ಮಾಡಿಸಿದ್ದಾರೆ. ತಡೆಯಾಗುತ್ತಿದ್ದ, ಭೂಮಿಕಾಗೂ ಗೌತಮ್ ಸತ್ಯ ತಿಳಿಸಿ, ಸುಮ್ಮನಿರುವಂತೆ ಮಾಡಿದ್ದಾರೆ.
ಜೈದೇವ್ ಮುಂದೆ ಮಲ್ಲಿ-ಸುನಿ
ಇದೀಗ ಮದುವೆಯಾಗಿ ಮಲ್ಲಿಯನ್ನು ಕರೆದುಕೊಂಡು ಸುನಿ ನೇರವಾಗಿ ತನ್ನ ಬಾಸ್ ಜೈದೇವ್ ಮನೆಗೆ ಬಂದು ನಿಂತಿದ್ದಾನೆ. ಮಲ್ಲಿಯನ್ನು ಕೆಣಕಿ, ಅವನು ನಿನ್ನ ಪ್ರೀತಿಸಿಯೇ ಇಲ್ಲ, ಅವನು ಮಾಡಿದ್ದೆಲ್ಲಾ ನಾಟಕ, ನೀನು ಬಿದ್ದೆ, ನಾನು ಗೆದ್ದೆ ಎನ್ನುತ್ತಾ, ಮಲ್ಲಿಯನ್ನು ಕೆಳಕ್ಕೆ ತಳ್ಳಿ ಸಂಭ್ರಮಿಸುತ್ತಾನೆ ಜೈದೇವ್. ಅಷ್ಟರಲ್ಲಿ ಅಲ್ಲಿಗೆ ಗೌತಮ್ ಮತ್ತು ಭೂಮಿಕಾ ಆಗಮನ ಆಗುತ್ತದೆ.
ಮೂರ್ಖನಾದ ಜೈದೇವ್
ಗೌತಮ್ ಕೋಪದಲ್ಲಿ ಜೈದೇವ್ ಮುಂದೆ ನಿಂತು, ನಿನ್ನನ್ನು ನೀನು ಕೆಡಿ ಅಂದುಕೊಂಡು ಬಿಟ್ಟೆ ಅಲ್ವಾ? ಎಲ್ಲರ ಮುಂದೆ ಫೂಲ್ ಆದೆ ಅಲ್ವಾ? ಮಲ್ಲಿ ನೆಮ್ಮದಿಗೆ ಏನಾದ್ರೂ ಕಲ್ಲು ಬಿದ್ರೆ, ಇನ್ನು ಮುಂದೆ ವಾರ್ನಿಂಗ್ ಕೊಡೋದಿಲ್ಲ, ಫೈನಲ್ ಜಡ್ಜ್ ಮೆಂಟ್ ಮಾತ್ರ ಎನ್ನುವ ಖಡಕ್ ಆಗಿ ವಾರ್ನಿಂಗ್ ಕೊಡ್ತಾರೆ ಗೌತಮ್. ಇದನ್ನು ಕೇಳಿ ಜೈ ದೇವ್ ಮುಖ ಹಿಂಗು ತಿಂದ ಮಂಗನಂತಾಗುತ್ತದೆ.
ಮುಂದೆ ಏನಾಗುತ್ತೆ?
ಜೈದೇವ್ ಪ್ಲ್ಯಾನ್ ಗಳಲ್ಲಿ ಒಂದರ ನಂತರ ಒಂದು ಫ್ಲಾಪ್ ಆದ ಬಳಿಕ ಜೈದೇವ್ ಮತ್ತಷ್ಟು ರೊಚ್ಚಿಗೇಳುವ ಸಾಧ್ಯತೆ ಇದೆ. ಇದರಿಂದ ಭೂಮಿ ಮತ್ತು ಗೌತಮ್ ಗೆ ಮತ್ತಷ್ಟು ಅಪಾಯ ಉಂಟಾಗುವ ಸಾಧ್ಯತೆ ಕೂಡ ಇದೆ. ಅಥವಾ ಮಲ್ಲಿ ಡಿಸಿಯಾಗಿ ಜೈದೇವ್ ಬೆವರಿಳಿಸುವ ಸಾಧ್ಯತೆ ಕೂಡ ಇದೆ. ಶೀಘ್ರದಲ್ಲಿ ಎಲ್ಲಾದಕ್ಕೂ ಪರಿಹಾರ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕು.
ಸೀರಿಯಲ್ ಮುಗಿಯುತ್ತಾ?
ಇನ್ನು ಹೆಚ್ಚಿನ ಕಥೆ ಏನು ಇಲ್ಲದೇ ಇರೋದರಿಂದ ಶೀಘ್ರದಲ್ಲಿ ಅಮೃತಧಾರೆ ಧಾರವಾಹಿ ಮುಗಿಯಲಿದೆ ಎನ್ನುವ ಸುದ್ದಿ ಕೂಡ ಇದೆ. ಜೈದೇವ್ ಸೋತು ಸುಣ್ಣಾಗಿ ಜೈಲು ಸೇರಿ, ಗೌತಮ್ ದಿವಾನ್ ಮತ್ತೆ ಆಸ್ತಿ, ಅಂತಸ್ತು ಮಾಡಿ, ಬ್ಯುಸಿನೆಸ್ ನಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಧಾರಾವಾಹಿ ಸುಖಾಂತ್ಯ ಕಾಣುವ ಸಾಧ್ಯತೆ ಕೂಡ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

