- Home
- Entertainment
- TV Talk
- Bigg Boss 13 ಕುರಿತು ಬಿಗ್ ಅಪ್ಡೇಟ್: ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು? ಇಲ್ಲಿದೆ ಒಂದು ರೋಚಕ ಟ್ವಿಸ್ಟ್
Bigg Boss 13 ಕುರಿತು ಬಿಗ್ ಅಪ್ಡೇಟ್: ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು? ಇಲ್ಲಿದೆ ಒಂದು ರೋಚಕ ಟ್ವಿಸ್ಟ್
ಬಿಗ್‌ಬಾಸ್ 13ನೇ ಸೀಸನ್ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದು, ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಖಚಿತವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೀಸನ್ 13ರ ದಿನಾಂಕ ಘೋಷಿಸುವ ವಿಡಿಯೋ ವೈರಲ್ ಆಗಿದ್ದು, ಅದು ವೀಕ್ಷಣೆಗಾಗಿ ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಬಯಲಾಗಿದೆ.

Bigg Boss 13ಗೆ ಕಾತರ
ಬಿಗ್‌ಬಾಸ್ ಎಂದರೆ ಬಾಯ್ಬಿಟ್ಟು ನೋಡುವ ಲಕ್ಷಾಂತರ ವೀಕ್ಷಕರಿದ್ದಾರೆ. ಇಲ್ಲಿ ನಡೆಯುವ ಜಗಳ, ಕಾಂಟ್ರವರ್ಸಿ, ಲವ್ಸ್ಟೋರಿ... ಹೀಗೆ ಎಲ್ಲವನ್ನೂ ನೋಡಲು ತುದಿಗಾಲಿನಲ್ಲಿ ನಿಲ್ಲುವ ವೀಕ್ಷಕರು ಹಲವರು. ಇದಾಗಲೇ 12 ಸೀಸನ್ಗಳನ್ನು ಮುಗಿಸಿರುವ ಬಿಗ್ಬಾಸ್ನಲ್ಲಿ 13ನೇ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ಹಲವರು ಕಾತರದಿಂದ ಕಾಯುತ್ತಿದ್ದಾರೆ.
ನಾಲ್ಕು ಸೀಸನ್ಗಳಲ್ಲಿ ಸುದೀಪ್
11ನೇ ಸೀಸನ್ ಬಳಿಕ ಮುಂದಿನ ಸೀಸನ್ನಿಂದ ತಾವು ಕಾಣಿಸಿಕೊಳ್ಳುವುದಿಲ್ಲ ಎಂದು ಶಾಕ್ ಕೊಟ್ಟ ಕಿಚ್ಚ ಸುದೀಪ್, ಕೊನೆಗೆ ಒಂದಲ್ಲ, ನಾಲ್ಕು ಸೀಸನ್ಗಳನ್ನು ಒಪ್ಪಿಕೊಂಡಿದ್ದಾರೆ. ತಾವು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದಕ್ಕೂ ತಮ್ಮದೇ ಆದ ಕಾರಣ ಕೊಟ್ಟು, ಕೊನೆಗೆ ತಾವು ಯಾಕೆ ಕಾಣಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕೂ ಕಾರಣ ಕೊಟ್ಟಿದ್ದಾರೆ. ಇದರಿಂದಾಗಿ ಕಿಚ್ಚ ಸುದೀಪ್ (Kichcha Sudeep) 13ನೇ ಸೀಸನ್ ಅನ್ನು ನಡೆಸಿಕೊಡುವುದು ಕನ್ಫರ್ಮ್ ಆಗಿದೆ.
13ನೇ ಸೀಸನ್
ಇದೀಗ ಸೋಷಿಯಲ್ ಮೀಡಿಯಾದಲ್ಲಿ 13ನೇ ಸೀಸನ್ ಎನ್ನುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ 143 ದಿನ ಕಾದರೆ ಬಿಗ್‌ಬಾಸ್ 13 ನೇ ಸೀಸನ್ ಶುರುವಾಗುತ್ತದೆ ಎಂದು ಇದೆ. bbkseason 13 ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ.
ಹೊಸ ಕಂಟೆಸ್ಟೆಂಟ್, ಹೊಸ ಆಟಗಳು
ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ಬಂದು ಹೊಸ ಕಂಟೆಸ್ಟೆಂಟ್, ಹೊಸ ಆಟಗಳು ಎಂದಿದ್ದಾರೆ. ಈ ಮನೆಯಲ್ಲಿಯೂ ಕಿಚ್ಚು ಇರುತ್ತದೆ, ಹುಚ್ಚು ಇರುತ್ತದೆ. ಮನಸ್ಸಿನಲ್ಲಿಯೇ ಮಡಗಿರುವ ರೊಚ್ಚು ಇರುತ್ತದೆ ಎಂದಿದ್ದಾರೆ.
ವಿಡಿಯೋದ ಅಸಲಿಯತ್ತೇನು?
ಅಸಲಿಗೆ ಇದು ಅಸಲಿ ವಿಡಿಯೋ ಕಂಡ ಹಾಗೆಯೇ ಕಾಣಿಸುತ್ತದೆ. ಅಷ್ಟಕ್ಕೂ ಇದು ಎಐ ಯುಗ. ಎಐನಲ್ಲಿ ಇದನ್ನು ಕ್ರಿಯೇಟ್ ಮಾಡಲಾಗಿದೆ. ಸೀಸನ್ 13 ಅನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಅದನ್ನೇ ಬಂಡವಾಳ ಮಾಡಿಕೊಂಡು ಹೆಚ್ಚು ಹೆಚ್ಚು ವ್ಯೂವ್ಸ್ ತರುವುದಕ್ಕಾಗಿ ಹೊಸ ಪ್ರೊಫೈಲ್ ಕ್ರಿಯೇಟ್ ಮಾಡಲಾಗಿದೆ. ಚಾನೆಲ್ ಹೆಸರನ್ನು ಕಲರ್ಸ್ ಸೂಪರ್ ಎಂದು ಮಾಡಲಾಗಿದೆ!
ಕಮೆಂಟ್ ಸೆಕ್ಷನ್ ಆಫ್
ಇದೇ ಕಾರಣಕ್ಕೆ ಜನರು ಬೈಯುತ್ತಾರೆಂದು ಕಮೆಂಟ್ ಸೆಕ್ಷನ್ ಕೂಡ ಆಫ್ ಮಾಡಲಾಗಿದೆ. ಒಟ್ಟಿನಲ್ಲಿ ಬಿಗ್‌ಬಾಸ್ ಎನ್ನುವ ಹುಚ್ಚು, ಜನರನ್ನು ಎಷ್ಟು ಮರಳು ಮಾಡುತ್ತಿದೆಯೋ, ಈ ವಿಡಿಯೋ ಅನ್ನು ಕೂಡ ನಿಜ ಎಂದು ನಂಬಿ ಮರುಳು ಆಗುತ್ತಿದ್ದಾರೆ ಹಲವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

