Amruthadhaare Serial: ಗಂಡನ ಗೊರಕೆ ಸೌಂಡ್, ಅಬ್ಬಾ ಅದೆಂಥ ಮಹದಾನಂದನಪ್ಪಾ!
ಅಮೃತಧಾರೆ ಧಾರಾವಾಹಿಯಲ್ಲಿ, ಅಜ್ಜಿಯ ತಂತ್ರದಿಂದಾಗಿ ಭೂಮಿಕಾ ಮತ್ತು ಗೌತಮ್ ಒಂದೇ ಕೋಣೆಯಲ್ಲಿ ಮಲಗುವಂತಾಗಿದೆ. ಮಕ್ಕಳ ಪ್ಲ್ಯಾನ್‌ನಿಂದ ಒಂದೇ ಹಾಸಿಗೆ ಹಂಚಿಕೊಂಡ ಈ ಜೋಡಿಯ ನಡುವೆ, ಗೌತಮ್‌ನ ಗೊರಕೆಯ ಶಬ್ದವೇ ಭೂಮಿಕಾಗೆ ಸವಿಯಾಗಿ ಕೇಳಿಸುತ್ತಿದ್ದು, ಅವರ ಸಂಬಂಧದಲ್ಲಿ ಹೊಸ ಅಧ್ಯಾಯ ಶುರುವಾದಂತಿದೆ.

ಎಲ್ಲರದ್ದೂ ಡ್ರಾಮಾ
ಅಮೃತಧಾರೆ (Amruthadhaare Serial) ಈಗ ರೋಚಕ ಹಂತ ತಲುಪಿದೆ. ಅಜ್ಜಿಯ ಕಿತಾಪತಿಯಿಂದಾಗಿ ಭೂಮಿಕಾ ಮತ್ತು ಗೌತಮ್ ಒಂದಾಗಿದ್ದಾರೆ. ಅಜ್ಜಿಯ ಪ್ಲ್ಯಾನ್ ಗೊತ್ತಿದ್ದರೂ ಮಿಂಚು ಮತ್ತು ಆಕಾಶ್ ತುಟಿಕ್ ಪಿಟಿಕ್ ಎನ್ನದೇ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಒಂದೇ ಕೋಣೆಯಲ್ಲಿ
ಇದೀಗ ಅಜ್ಜಿ ಮತ್ತು ಭಾಗ್ಯಮ್ಮನ ಪ್ಲ್ಯಾನ್ ಅಂತೆ ಭೂಮಿಕಾ ಮತ್ತು ಗೌತಮ್ ಒಂದೇ ಕೋಣೆಯಲ್ಲಿ ಮಲಗಬೇಕಿದೆ. ಆದರೆ ಅವರು ಹೇಗೆ ಮಲಗಿಯಾರು? ಇಬ್ಬರೂ ನಾನು ಕೆಳಗೆ, ನಾನು ಕೆಳಗೆ ಎಂದು ಹಾಸಿಗೆ ಮೇಲೆ ಮಲಗಲಿಲ್ಲ. ಗೌತಮ್ ಕೆಳಗೆ ಹಾಸಿಗೆ ಹಾಕಿ ಮಲಗಿದರೆ, ಭೂಮಿಕಾ ಖುರ್ಚಿಯ ಮೇಲೆ ಮಲಗಿದ್ದಳು.
ಅಜ್ಜಿ ಎಂಟ್ರಿ
ಇವರಿಬ್ಬರೂ ಒಂದಾಗಲ್ಲ ಎಂದು ತಿಳಿದ ಅಜ್ಜಿ ಅಲ್ಲಿಗೆ ರಾತ್ರಿ ಎಂಟ್ರಿ ಕೊಟ್ಟೇ ಬಿಟ್ಟಿದ್ದಾಳೆ. ಲಗುಬಗೆಯಿಂದ ಗೌತಮ್ ಮತ್ತು ಭೂಮಿಕಾ ಬಂದು ಬಾಗಿಲು ತೆರೆದಾಗ ಭಾಗ್ಯಮ್ಮ ಅವರ ಬಳಿ ಬಂದು, ಅಜ್ಜಿಗೆ ಏನೋ ಡೌಟ್ ಬಂದಿದೆ. ನೀವಿಬ್ಬರೂ ಒಟ್ಟಿಗೇ ಮಲಗಿ ಎಂದು ಹೇಳಿ ಹೋಗಿದ್ದಾಳೆ.
ಮಿಂಚು-ಆಕಾಶ್ ಪ್ಲ್ಯಾನ್
ಮಿಂಚು ಮತ್ತು ಆಕಾಶ್ನನ್ನು ನಡುವೆ ಮಲಗಿಸಿಕೊಂಡು ಇಬ್ಬರೂ ಮಲಗಿದ್ದಾರೆ. ಆಗ ಮಕ್ಕಳಿಬ್ಬರೂ ಪ್ಲ್ಯಾನ್ ಮಾಡಿ ಅತ್ತ ಇತ್ತ ಮಲಗಿ ಭೂಮಿಕಾ ಮತ್ತು ಗೌತಮ್ ಒಟ್ಟಿಗೇ ಮಲಗುವಂತೆ ಮಾಡಿದ್ದಾರೆ.
ಸವಿಯಾದ ಗೊರಕೆ
ಗೌತಮ್ ನಿದ್ದೆಗೆ ಜಾರಿ ಮಾಮೂಲಿನಂತೆ ಗೊರಕೆ ಹೊಡೆದಿದ್ದಾನೆ.ಆರಂಭದಲ್ಲಿ ಗೌತಮ್ ಗೊರಕೆ ಸೌಂಡ್ಗೆ ನಿದ್ದೆ ಮಾಡದಿದ್ದ ಭೂಮಿಕಾಗೆ ಕೊನೆಗೆ ಗೊರಕೆ ಸೌಂಡ್ ಇಲ್ಲದೇ ನಿದ್ದೆಯೇ ಬರುವುದಿಲ್ಲ ಎನ್ನಿಸಿತ್ತು. ಈಗ ಮತ್ತದೇ ನೆನಪಾಗಿ ಗೊರಕೆ ಶಬ್ದ ಸವಿಯಾಗಿ ಕೇಳಿಸುತ್ತಿದೆ. ಗಂಡನನ್ನೇ ನೋಡುತ್ತಾ ಮಲಗಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

