- Home
- Entertainment
- TV Talk
- Amruthadhaare Serial: ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್
Amruthadhaare Serial: ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್
ತುಂಬು ಗರ್ಭಿಣಿ ಹೆಂಡ್ತಿ ಭೂಮಿಕಾಳನ್ನು ತವರಿಗೆ ಕಳುಹಿಸಿದ ಗೌತಮ್ ದಿವಾನ್, ಈಗ ಹೆಂಡ್ತಿನ ನೋಡೋದಕ್ಕೆ ಮಧ್ಯರಾತ್ರಿ ಭೂಮಿಕಾ ತವರಿಗೆ ಕಳ್ಳನಂತೆ ಎಂಟ್ರಿ ಕೊಟ್ಟಿದ್ದಾನೆ.
- FB
- TW
- Linkdin
Follow Us
)
ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಇದೀಗ ತುಂಬು ಗರ್ಭಿಣಿಯಾಗಿರುವ ಭೂಮಿಕಾಗೆ ಎಲ್ಲಾ ಅಡೆತಡೆಗಳ ನಡುವೆ ಸಿಂಪಲ್ ಆಗಿ ಸೀಮಂತ ಮಾಡಿಕೊಂಡು ತವರು ಮನೆಗೆ ತೆರಳಿದ್ದಾಳೆ. ಹೆಂಡ್ತಿಯನ್ನು ಮನೆಗೆ ಕಳುಹಿಸಿದ ಗೌತಮ್ ದಿವಾನ್ ಮಾತ್ರ ಈಗ ಬೇಜಾರಾಗಿದ್ದಾರೆ.
ಭೂಮಿಕಾಳನ್ನು ತವರು ಮನೆಗೆ ಕಳುಹಿಸಿದ ಗೌತಮ್ ದಿವಾನ್ ಗೆ ಇದೀಗ ಒಂಟಿತನ ಕಾಡುತ್ತಿದೆ. ಹೆಂಡ್ತಿ ಇಲ್ಲದೇ, ಮನೆಯಲ್ಲಿ ಇರೋದೆ ಬೇಜಾರು. ರಾತ್ರಿ ನಿದ್ರೆ ಕೂಡ ಬರದೇ ಒದ್ದಾಡ್ತಿದ್ದಾರೆ ಗೌತಮ್.
ಒಂಟಿಯಾಗಿರೋ ಗೌತಮ್ ಗೆ ಸಾಥ್ ಕೊಡೋದಕ್ಕೆ ಆನಂದ್ ಡ್ರಿಂಕ್ಸ್ ಜೊತೆ ಎಂಟ್ರಿ ಕೊಟ್ಟು, ಕುಡಿಯೋದಕ್ಕೆ ಫೋರ್ಸ್ ಮಾಡ್ತಿದ್ದಾನೆ. ಆದರೆ ಗೌತಮ್ ಮಾತ್ರ ಹೆಂಡತಿ ಇಲ್ಲದೇ ಗೌತಮ್ ಗೆ ಕುಡಿಯೋದಕ್ಕೂ ಬೇಸರವಾಗಿ ತಾನು ಕುಡಿಯಲ್ಲ ಎಂದಿದ್ದಾರೆ. ಗೆಳೆಯನ ಸ್ಥಿತಿಯನ್ನು ನೋಡಿ ಆನಂದ್ ಮಧ್ಯರಾತ್ರಿಯಲ್ಲಿ ಭೂಮಿಕಾ ಮನೆಗೆ ಭೇಟಿ ಕೊಡುವ ಸಲಹೆ ಕೊಟ್ಟಿದ್ದಾನೆ.
ಅದರಂತೆ ಇದೀಗ ಲವರ್ ಬಾಯ್ ಆಗಿರುವ ಗೌತಮ್ ದಿವಾನ್ ಹಾಗೂ ಅವರಿಗೆ ಸಾತ್ ನೀಡುತ್ತಿರುವ ಆನಂದ್ ಇಬ್ಬರೂ ಜೊತೆಯಾಗಿ ಭೂಮಿಕಾ ತವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಕದ್ದು ಮುಚ್ಚಿ ಒಳಗಡೆ ಹೋಗೋದಕ್ಕೆ ಭಯ ಪಟ್ಟ ಗೌತಮ್ ಒಂದೆರಡು ಪೆಗ್ ಹಾಕಿ ಧೈರ್ಯ ತಂದುಕೊಂಡಿದ್ದಾನೆ.
ಮದ್ಯದ ಅಮಲಿನಲ್ಲಿ ಕುಡಿದು ತೂರಾಡುತ್ತಾ, ಮುಖಕ್ಕೆ ಮುಸುಕು ಹಾಕಿ ಕಳ್ಳರಂತೆ ಮೆಲ್ಲಗೆ ಹೆಂಡ್ತಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾರೆ ಸ್ನೇಹಿತರು. ಕಿಟಕಿ ಬಾಗಿಲನ್ನು ತೆರೆದು ಭೂಮಿಕಾಳನ್ನು ಎಬ್ಬಿಸೋಕೆ ಟ್ರೈ ಮಾಡ್ತಿದ್ದಾರೆ.
ಕಿಟಕಿಯಿಂದ ಹೂ ಬಿಸಾಕಿ ಭೂಮಿಕಾಳನ್ನು ಎಬ್ಬಿಸಲು ಹೋಗಿ, ಅಪ್ಪಿ ಮೇಲೆ ಹೂವು ಬಿದ್ದು, ಏನೋ ಆಗ್ತಿದೆ ಅಂತ, ಎದ್ದು ಕಿಟಕಿ ಬಳಿ ಬರುತ್ತಾಳೆ. ಅಲ್ಲಿ ಎದುರುಗಡೆ ಬಂದ ಗೌತಮ್ ನೋಡಿ, ಶಾಕ್ ಆಗಿ ಕಿರುಚಿದ್ದಾಳೆ. ಅಪೇಕ್ಷಾ ಕಿರುಚಿದ್ದು ಕೇಳಿ ಭೂಮಿಕಾನು ಎದ್ದು ಕೂತಿದ್ದಾಳೆ. ಮುಂದೇನಾಗುತ್ತೆ ಅನ್ನೋದನ್ನು ನೋಡಬೇಕು.
ಅಮೃತಧಾರೆ ಧಾರಾವಾಹಿ ಝೀಕನ್ನಡದ ಜನಪ್ರಿಯ ಧಾರಾವಾಹಿಯಾಗಿದ್ದು, ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್, ವನಿತಾ ವಾಸು, ಸಿಹಿಕಹಿ ಚಂದ್ರು, ಚಿತ್ರಾ ಶೆಣೈ ಸೇರಿ ಹಲವು ನಟರು ನಟಿಸಿದ್ದಾರೆ.