- Home
- Entertainment
- TV Talk
- Amruthadhaare: ಮಿಂಚು ಹೇಳಿದ ಸತ್ಯ ಕೇಳಿ ಗೌತಮ್ ಅಲ್ಲೋಲ-ಕಲ್ಲೋಲ! ಭೂಮಿಕಾ ಕಣ್ಣೀರ ಕೋಡಿ
Amruthadhaare: ಮಿಂಚು ಹೇಳಿದ ಸತ್ಯ ಕೇಳಿ ಗೌತಮ್ ಅಲ್ಲೋಲ-ಕಲ್ಲೋಲ! ಭೂಮಿಕಾ ಕಣ್ಣೀರ ಕೋಡಿ
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಗಂಡ-ಹೆಂಡತಿ ಎಂಬ ಸತ್ಯ ತಮ್ಮ ಮಕ್ಕಳಾದ ಆಕಾಶ್ ಮತ್ತು ಮಿಂಚುಗೆ ತಿಳಿದಿದೆ. ತಾವು ಮಗುವನ್ನು ಹುಡುಕಲು ಹೋಗುತ್ತಿರುವ ವಿಷಯವನ್ನು ಮಕ್ಕಳು ಹೇಳಿದಾಗ ಗೌತಮ್ ಮತ್ತು ಭೂಮಿಕಾ ಇಬ್ಬರೂ ಆಘಾತಕ್ಕೊಳಗಾಗಿ, ಭಾವುಕರಾಗುತ್ತಾರೆ.

ಆ್ಯಕ್ಟಿಂಗ್ ಇನ್ನೊಂದು ಲೆವೆಲ್
ಅಮೃತಧಾರೆ ಸೀರಿಯಲ್ನಲ್ಲಿ ಪ್ರತಿಯೊಬ್ಬರದ್ದೂ ಅಬ್ಬಬ್ಬಾ, ವ್ಹಾರೆವ್ಹಾ ಎನ್ನುವಂಥ ಅಭಿನಯ. ಗೌತಮ್ ಆಗಿರೋ ರಾಜೇಶ್ ನಟರಂಗ ಮತ್ತು ಭೂಮಿಕಾ ಆಗಿರೋ ನಟಿ ಛಾಯಾ ಸಿಂಗ್ ಅವರಿಬ್ಬರೂ ಅಭಿನಯದಲ್ಲಿ ಪಂಟರು. ಆದರೆ ಮಕ್ಕಳಾಗಿರೋ ಆಕಾಶ್ ಮತ್ತು ಮಿಂಚು ಆ್ಯಕ್ಟಿಂಗ್ ಲೆವೆಲ್ಲೇ ಬೇರೆ. ಇವರಿಬ್ಬರೂ ಜನರನ್ನು ಮೋಡಿ ಮಾಡುತ್ತಿದ್ದಾರೆ.
ಸತ್ಯ ಹೇಳಿದ ಮಿಂಚು
ಇದೀಗ, ಮಿಂಚು ಹೇಳಿದ ಸತ್ಯವೊಂದು ಗೌತಮ್ ನೆಲವನ್ನೇ ಕುಸಿಯುವಂತೆ ಮಾಡಿದೆ. ಅದೇನೆಂದರೆ, ಗೌತಮ್ ತಾನು ಒಂದು ವಾರದ ಮಟ್ಟಿಗೆ ರಜೆಯ ಮೇಲೆ ಹೋಗುತ್ತಿದ್ದೇನೆ. ನೀನು ಮಲ್ಲಿ ಆಂಟಿ ಜೊತೆ ಸ್ಕೂಲ್ಗೆ ಹೋಗು ಎಂದಾಗ, ಎಲ್ಲಿ ಎಂದು ಮಿಂಚು ಕೇಳಿದ್ರೆ ಅವನು ಏನು ಎಂದು ಹೇಳಿರುವುದಿಲ್ಲ.
ಗೌತಮ್ ಅಲ್ಲೋಲ ಕಲ್ಲೋಲ
ಆದರೆ ಮಿಂಚು, ನನಗೆ ಗೊತ್ತು ಪಪ್ಪಾ. ನೀವು ಮ್ಯಾಮ್ ಜೊತೆ ಮಗುವನ್ನು ಹುಡುಕಲು ಹೊರಟಿದ್ದೀರಿ ಎಂದು ಹೇಳುವುದೂ ಅಲ್ಲದೇ ನೀವಿಬ್ಬರೂ ಗಂಡ-ಹೆಂಡತಿ ಎನ್ನೋ ಸತ್ಯನೂ ನನಗೆ ಗೊತ್ತು ಎಂದಾಗ ಗೌತಮ್ ಅಲ್ಲೋಲ ಕಲ್ಲೋಲವಾಗುತ್ತಾನೆ.
ಸತ್ಯ ಗೊತ್ತು
ಅದೇ ಇನ್ನೊಂದೆಡೆ, ಆಕಾಶ್ ಕೂಡ ಭೂಮಿಕಾಗೆ, ನೀವು ಪಪ್ಪಾ ಜೊತೆ ಮಗುವನ್ನು ಹುಡುಕಲು ಹೊರಟಿರುವ ಸತ್ಯ ಗೊತ್ತು. ಬೇಗ ನನ್ನ ಅಕ್ಕನನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ.
ಭೂಮಿಕಾ ಕಣ್ಣೀರು
ಆಗ ಭೂಮಿಕಾ, ನಿನಗೆ ಅವರನ್ನು ಪಪ್ಪಾ ಎಂದು ಹೇಳಬೇಕು ಎಂದು ಎನಿಸಲ್ವಾ ಎಂದಾಗ, ಆಕಾಶ್, ಎನಿಸತ್ತೆ ಮಮ್ಮಿ. ಆದರೆ ನೀವು ಯಾವಾಗ ಹೇಳು ಎನ್ನುತ್ತೀರೋ ಆಗ ಹೇಳ್ತೇನೆ, ನೀವು ನನಗಾಗಿ ಎಷ್ಟೊಂದು ಮಾಡಿದ್ದೀರಿ. ನಿಮ್ಮ ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾಡಲ್ಲ ಎಂದಾಗ ಭೂಮಿಕಾ ಕಣ್ಣೀರಾಗುತ್ತಾಳೆ.
ವೀಕ್ಷಕರ ಕಮೆಂಟ್
ಒಟ್ಟಿನಲ್ಲಿ ಮಕ್ಕಳಿಬ್ಬರೂ ತಮ್ಮ ಅಭಿನಯದಿಂದ ವೀಕ್ಷಕರ ಕಣ್ಣೀರಿನ ಕೋಡಿಯನ್ನೇ ಹರಿಸಿರುವುದನ್ನು ಈ ಪ್ರೊಮೋಗೆ ಬಂದಿರುವ ಕಮೆಂಟ್ಗಳಿಂದಲೇ ತಿಳಿದು ಬರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

