- Home
- Entertainment
- TV Talk
- Amruthadhaare Serial: ಶತ್ರುವಿನ ಶತ್ರು ನನಗೆ ಮಿತ್ರ; ಗೌತಮ್ ಈಗ ಮಲ್ಗಿದ್ರೆ ಭೂಮಿಕಾ ಚಿರನಿದ್ರೆಗೆ ಜಾರ್ತಾಳೆ
Amruthadhaare Serial: ಶತ್ರುವಿನ ಶತ್ರು ನನಗೆ ಮಿತ್ರ; ಗೌತಮ್ ಈಗ ಮಲ್ಗಿದ್ರೆ ಭೂಮಿಕಾ ಚಿರನಿದ್ರೆಗೆ ಜಾರ್ತಾಳೆ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಪರಸ್ಪರ ಕಣ್ಣು ಮುಂದೆ ಇದ್ದರೂ ಕೂಡ ವಿರಹ ವೇದನೆಯಲ್ಲಿ ಒದ್ದಾಡುತ್ತಿದ್ದಾರೆ. ಇನ್ನೊಂದು ಕಡೆ ಇವರಿಬ್ಬರನ್ನು ಹಾಳು ಮಾಡಲು ಜಯದೇವ್ ರೆಡಿಯಾಗಿದ್ದಾನೆ. ಭೂಮಿಕಾಳ ಸಹಿ ತಗೊಂಡು, ಆಸ್ತಿಯನ್ನು ಮಾರಾಟ ಮಾಡಬೇಕು ಎನ್ನೋದು ಇವರ ಪ್ಲ್ಯಾನ್. ಈಗ ಏನಾಗುವುದು?

ಗೌತಮ್‌ಗೆ ಸುಳಿವು ಸಿಗ್ತು!
ಜಯದೇವ್ ನಮ್ಮನ್ನು ಹುಡುಕುತ್ತಿರುವ ವಿಷಯವು ಗೌತಮ್ ಹಾಗೂ ಭೂಮಿಕಾಗೆ ಗೊತ್ತಾಗಿರಲಿಲ್ಲ. ಈಗ ಲಕ್ಷ್ಮೀಕಾಂತ್ ಮಾವ, ಆನಂದ್‌ಗೆ ಎಲ್ಲ ವಿಷಯವನ್ನು ತಿಳಿಸಿದ್ದಾನೆ. ಹೀಗಾಗಿ ಗೌತಮ್‌ಗೂ ಕೂಡ ಇದರ ಸುಳಿವು ಸಿಕ್ಕಿದೆ. ಕೊಡೋದೆಲ್ಲ ಕೊಟ್ಟಿದೀನಿ, ಎಲ್ಲವನ್ನು ಬಿಟ್ಟು ಬಂದಿದ್ದೇನೆ, ಜಯದೇವ್ ಯಾಕೆ ನಮ್ಮ ಹಿಂದೆ ಬೀಳ್ತಿದ್ದಾನೆ ಎಂದು ಗೌತಮ್ ಅಂದುಕೊಂಡಿದ್ದಾನೆ.
ಒಂದಾದ ಕಿರಾತಕರು
ಭೂಮಿಕಾ ತನ್ನ ಮಗನ ಜೊತೆ ಕುಶಾಲನಗರದಲ್ಲಿ ಇದ್ದಿದ್ದು, ಆಮೇಲೆ ಎಂಎಲ್‌ಎ ಜೊತೆ ಕಿರಿಕ್ ಆಗಿದ್ದು, ಗೌತಮ್ ಹೋಗಿ ಕಾಪಾಡಿದ್ದು ಎಲ್ಲವೂ ಈಗ ಜಯದೇವ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ಎಂಎಲ್‌ಎ ಜೊತೆ ಸ್ನೇಹ ಬೆಳೆಸಿದ್ದಾನೆ. ಒಟ್ಟಿನಲ್ಲಿ ಗೌತಮ್-ಭೂಮಿಕಾಗೆ ಅಪಾಯ ತಪ್ಪಿದ್ದಲ್ಲ.
ಲಕ್ಷ್ಮೀಕಾಂತ್ ಮಾವನ ಒಳ್ಳೆಯತನ
ಇನ್ನೊಂದು ಕಡೆ ಲಕ್ಷ್ಮೀಕಾಂತ್ ಮಾವ ಇದೆಲ್ಲವನ್ನು ನೋಡುತ್ತಿದ್ದಾನೆ. ಆನಂದ್‌ಗೆ ಈ ವಿಷಯವನ್ನು ಅಪ್‌ಡೇಟ್ ಮಾಡುತ್ತಲೇ ಇದ್ದಾನೆ. ಗೌತಮ್ ಸ್ವಲ್ಪ ಬೇರೆ ಕಡೆ ಗಮನ ಕೊಟ್ಟರೂ ಕೂಡ ಅಪಾಯ ತಪ್ಪಿದ್ದಲ್ಲ.
ಗೌತಮ್‌ಗೆ ಆ ವಿಷಯ ಗೊತ್ತಾದರೆ?
ಜಯದೇವ್ ಹಾಗೂ ಎಂಎಲ್‌ಎ ಸೇರಿಕೊಂಡು ಮುಂದೆ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಗೌತಮ್ ಮಗಳನ್ನು ದೂರ ಮಾಡಿರುವ ನೀಚರು ಮುಂದೆ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಮಗಳು ಕಾಣೆಯಾಗಲು ಜಯದೇವ್ ಕಾರಣ ಎಂದು ಗೌತಮ್‌ಗೆ ಗೊತ್ತಾದರೆ ಅವನು ಏನು ಮಾಡ್ತಾನೋ ಏನೋ!
ಗೌತಮ್ ಏನು ಮಾಡಬಹುದು?
ಮಗಳು ಕಿಡ್ನ್ಯಾಪ್ ಆಗಿದ್ದು, ಭೂಮಿಕಾ ದೂರ ಆಗಲು ಜಯದೇವ್-ಶಕುಂತಲಾ ಕಾರಣ ಎನ್ನೋ ಸತ್ಯ ಅವನಿಗೆ ಗೊತ್ತಾದರೆ, ಮತ್ತೆ ಆಸ್ತಿಯನ್ನು ವಶಕ್ಕೆ ಪಡೆಯಬಹುದು. ಇವರಿಬ್ಬರ ಸೊಕ್ಕು ಅಡಗಿಸಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.