- Home
- Entertainment
- TV Talk
- Amruthadhaare ವಠಾರದವರ ಕಣ್ಣಿಗೆ ಬಿತ್ತು Gowtham-Bhoomika ಕುಚುಕುಚು: ಶುರುವಾಯ್ತು ಬೆಟ್ಟಿಂಗ್!
Amruthadhaare ವಠಾರದವರ ಕಣ್ಣಿಗೆ ಬಿತ್ತು Gowtham-Bhoomika ಕುಚುಕುಚು: ಶುರುವಾಯ್ತು ಬೆಟ್ಟಿಂಗ್!
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದ ಬಗ್ಗೆ ವಠಾರದ ಜನರಿಗೆ ಅನುಮಾನ ಶುರುವಾಗಿದೆ. ಇವರಿಬ್ಬರ ಬಗ್ಗೆಯೇ ಬೆಟ್ಟಿಂಗ್ ನಡೆಯುತ್ತಿರುವಾಗ, ಗೌತಮ್‌ಗೆ ಬಂದ ಕ್ಯಾಬ್ ಬುಕಿಂಗ್ ಭೂಮಿಕಾಳದ್ದೇ ಆಗಿದ್ದು, ಇದು ವಠಾರದವರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ವಠಾರದವರ ಕಣ್ಣು ಇಬ್ಬರ ಮೇಲೆ
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಗೌತಮ್ ಮತ್ತು ಭೂಮಿಕಾ ನಡುವೆ ಏನೋ ನಡೆಯುತ್ತಿದೆ ಎನ್ನುವುದು ವಠಾರದ ಜನರಿಗೆ ತಿಳಿದಿದೆ. ಹೇಳಿ ಕೇಳಿ ವಠಾರ ಅದು. ಇಂಥದ್ದೆಲ್ಲಾ ಗೊತ್ತಾಗದೇ ಇರತ್ತಾ?
ವಠಾರದವರಿಗೆ ಅನುಮಾನ
ಇವರಿಬ್ಬರೂ ದಂಪತಿ ಎನ್ನೋದು ಗೊತ್ತಿಲ್ಲ. ಆದರೆ ಅವಳಿಗೆ ಸದ್ಯ ಗಂಡ ಇಲ್ಲ, ಇವನಿಗೆ ಹೆಂಡತಿ ಇಲ್ಲ ಅನ್ನೋದಷ್ಟೇ ಗೊತ್ತಿದೆ. ಆದ್ದರಿಂದ ಇಬ್ಬರ ನಡುವೆ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿದೆ.
ಮಕ್ಕಳ ಜೊತೆ ಶಾಲೆಗೆ
ಇದೀಗ ಗೌತಮ್ ಮಗಳನ್ನು ಕರೆದುಕೊಂಡು ಶಾಲೆಗೆ ಹೊರಡಲು ರೆಡಿಯಾಗಿದ್ದಾನೆ. ಅತ್ತ ಭೂಮಿಕಾ ಮಗನನ್ನು ಕರೆದುಕೊಂಡು ಶಾಲೆಗೆ ಹೊರಡುತ್ತಿದ್ದಾಳೆ.
ಡಿಕ್ಕಿ ಹೊಡೆದ ದಂಪತಿ
ಇಬ್ಬರೂ ಒಟ್ಟಿಗೇ ಮೆಟ್ಟಿಲು ಇಳಿಯುವಾಗ ಒಬ್ಬರನ್ನೊಬ್ಬರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಆದರೂ ಸಾವರಿಸಿಕೊಂಡು ಒಬ್ಬರ ಮುಖ ಒಬ್ಬರನ್ನು ನೋಡದ ಹಾಗೆ ಮಾಡಿ ಓರೆಗಣ್ಣಿನಿಂದಲೇ ನೋಡುತ್ತಾ ಕೆಳಕ್ಕೆ ಇಳಿದಿದ್ದಾರೆ.
ವಠಾರದವರಿಂದ ಬೆಟ್ಟಿಂಗ್
ಅದೇ ವೇಳೆ, ವಠಾರದವರು ಇವರಿಬ್ಬರನ್ನೂ ನೋಡಿದ್ದಾರೆ. ಅವರಲ್ಲಿ ಬೆಟ್ಟಿಂಗ್ ಶುರುವಾಗಿದೆ. ಈಗ ಗೌತಮ್ ತನ್ನ ಕಾರಿನಲ್ಲಿ ಆ ಮೇಡಂ ಅನ್ನು ಕರೆದುಕೊಂಡು ಹೋಗುತ್ತಾರೆ ಎಂದು ಒಬ್ಬಾತ ಹೇಳಿದ್ರೆ, ಮತ್ತೊಬ್ಬಾತ ಅದು ಸಾಧ್ಯನೇ ಇಲ್ಲ ಎಂದಿದ್ದಾನೆ. ಒಂದು ವೇಳೆ ಗೌತಮ್ ಕರೆದರೂ ಮೇಡಂ ಹೋಗಲ್ಲ, ಅವರು ತುಂಬಾ ಸ್ಟ್ರಿಕ್ಟ್ ಎಂದಿದ್ದಾನೆ.
ಗೌತಮ್‌ಗೆ ಕಾಲ್
ಅಷ್ಟರಲ್ಲಿಯೇ ಗೌತಮ್‌ಗೆ ಕಾಲ್ ಬಂದಿದೆ. ಒಬ್ಬರನ್ನು ಡೇಲಿ ಕರೆದುಕೊಂಡು ಹೋಗಿ ಡ್ರಾಪ್ ಮಾಡುವ ಕೆಲಸ ಎಂದು ಲೊಕೇಶನ್ ಕಳಿಸಿದ್ದಾರೆ. ಗೌತಮ್ ನೋಡಿದ್ರೆ ಅದು ತಮ್ಮ ವಠಾರದ್ದೇ ಲೊಕೇಶನ್.
ಭೂಮಿಕಾ ಪ್ರಯಾಣಿಕಳು!
ಡೌಟ್ ಬಂದು ಯಾರು ಎಂದು ನೋಡಿದಾಗ ಅವಳು ಭೂಮಿಕಾನೇ ಆಗಿದ್ದಾಳೆ. ಅಂದ್ರೆ ಡೇಲಿ ಭೂಮಿಕಾಳನ್ನು ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ಅವನದ್ದು. ಅದಕ್ಕಾಗಿ ಅವನು ಮೊದಲಿಗೆ ಹೋಗಿ ಬಾಯ್ತಪ್ಪಿ ಭೂಮಿಕಾ ಎಂದಿದ್ದಾನೆ. ಕೊನೆಗೆ ಮೇಡಂ ಎಂದಿದ್ದಾನೆ. ಅಲ್ಲಿಗೆ ವಠಾರದವರು ಬಾಯಿ ಬಿಟ್ಟು ನೋಡಿದ್ದಾರೆ.