- Home
- Entertainment
- Amruthadhaare Serial Update: ಗೌತಮ್-ಭೂಮಿಕಾಗೂ ಇಕ್ಕಟ್ಟಿನ ಸ್ಥಿತಿ ತಂದ ಗೆಳೆಯ; ಛೇ..ಹೀಗೆಲ್ಲ ಮಾಡಬಾರದಪ್ಪಾ..!
Amruthadhaare Serial Update: ಗೌತಮ್-ಭೂಮಿಕಾಗೂ ಇಕ್ಕಟ್ಟಿನ ಸ್ಥಿತಿ ತಂದ ಗೆಳೆಯ; ಛೇ..ಹೀಗೆಲ್ಲ ಮಾಡಬಾರದಪ್ಪಾ..!
ಅಮೃತಧಾರೆ ಧಾರಾವಾಹಿಯಲ್ಲಿ ಕಳೆದ ಗೌತಮ್ ಹಾಗೂ ಭೂಮಿ ಒಂದಾಗಿರೋದನ್ನು ತೋರಿಸಲಾಗಿತ್ತು. ಆದರೆ ಇದು ಕನಸು, ನನಸಲ್ಲ. ಈಗ ಇವರಿಬ್ಬರು ಎಷ್ಟು ದೂರ ಆಗಿದ್ದಾರೋ ಅಷ್ಟೇ ಹತ್ತಿರ ಆಗುವಂಥ ಪರಿಸ್ಥಿತಿ ಬಂದಿದೆ. ಹಾಗಾದರೆ ಏನಾಯ್ತು?

ಭೂಮಿಕಾ ಕೂಡ ಟೀಚರ್
ಗೌತಮ್ ಹಾಗೂ ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಗೌತಮ್ ಈಗ ಭೂಮಿಕಾ ಸ್ಕೂಲ್‌ನ ಕ್ಯಾಬ್ ಡ್ರೈವರ್. ದಿನವೂ ಅವನು ಮಕ್ಕಳನ್ನು ಕರೆದುಕೊಂಡು, ಶಾಲೆಗೆ ಬರಬೇಕು. ಆ ಶಾಲೆಯಲ್ಲಿ ಭೂಮಿಕಾ ಕೂಡ ಟೀಚರ್ ಆಗಿದ್ದಾಳೆ. ಈಗ ಭೂಮಿಕಾಳನ್ನು ಕೂಡ ಕರೆದುಕೊಂಡು ಶಾಲೆಗೆ ಬರಬೇಕಿತ್ತು. ಆಗ ಭೂಮಿಕಾ ನಾನು ಬರೋದಿಲ್ಲ, ಆಟೋದಲ್ಲಿ ಬರ್ತೀನಿ ಎಂದು ಹೇಳ್ತಾಳೆ.
ಆನಂದ್ ಮಾಡೋದು ಒಂದಾ, ಎರಡಾ?
ಆಟೋದಲ್ಲಿ ಬರೋದಾದ್ರೆ ಗೌತಮ್‌ನನ್ನು ಕೆಲಸದಿಂದ ತೆಗೆದು ಹಾಕುವೆ ಎಂದು ಸ್ಕೂಲ್‌ನವರು ಹೇಳ್ತಾರೆ, ಆಗ ಭೂಮಿ ಕೆಲಸಕ್ಕೆ ಬರಲು ಒಪ್ಪುತ್ತಾಳೆ. ಕಾರ್‌ನಲ್ಲಿ ಹೋಗುವಾಗ ಆನಂದ್ ಫೋನ್ ರಿಂಗಣಿಸುವುದು. ಆಗ ಆನಂದ್, “ಓಹೋ ವಿರಹ ವೇದನೆಯನ್ನು ತಾಳಲಾರದೆ ಮುತ್ತುಗಳ ಸುರಿಮಳೆ ಸುರಿಸ್ತೀರಾ” ಎಂದು ಹೇಳಿ ಕಾಲೆಳೆಯುತ್ತಾನೆ. ಅದನ್ನು ಕೇಳಿ ಗೌತಮ್ ಹಾಗೂ ಭೂಮಿಗೆ ಮುಜುಗರ ಆಗುವುದು.
ಮಲ್ಲಿ, ಆ ಪಾಪಿಗಳ ಕಣ್ಣಿಗೆ ಬೀಳ್ತಾಳಾ?
ಇನ್ನೊಂದು ಕಡೆ ಮಲ್ಲಿಯನ್ನು ಜಯದೇವ್ ರೌಡಿಗಳು ಬೆನ್ನಟ್ಟಿದ್ದಾರೆ. ಮಲ್ಲಿ ಅವರ ಕಣ್ಣಿಗೆ ಬಿದ್ದರೆ ಏನು ಕಥೆ ಅಂತ ಲಕ್ಷ್ಮೀಕಾಂತ್ ಟೆನ್ಶನ್ ಮಾಡಿಕೊಂಡಿದ್ದಾನೆ. ಮಲ್ಲಿ ಆರಾಮಾಗಿ ಇರೋದು ನೋಡಿ ಜಯದೇವ್‌ಗೆ ಸಹಿಸೋಕೆ ಆಗ್ತಿಲ್ಲ. ಮಲ್ಲಿ ಎಲ್ಲಿದ್ದಾಳೆ ಅಂತ ಗೊತ್ತಾದರೆ ಭೂಮಿಕಾ-ಗೌತಮ್‌ರನ್ನು ಕೂಡ ಕಂಡುಹಿಡಿಯಬಹುದು ಎಂದು ಅವರು ಲೆಕ್ಕಾಚಾರ ಹಾಕಿದ್ದಾರೆ.
ಮುಂದೆ ಏನಾಗುವುದು?
ಜಯದೇವ್ ಕುತಂತ್ರದಂತೆ ಮಲ್ಲಿ, ಕಣ್ಣಿಗೆ ಬೀಳ್ತಾಳಾ? ಅಥವಾ ಜಯದೇವ್ ಯೋಜನೆಯಂತೆ ಭೂಮಿ ಹಾಗೂ ಅವನ ಮಗು ಕೂಡ ಅವನ ಕಣ್ಣಿಗೆ ಬೀಳ್ತಾಳಾ ಎಂದು ಕಾದು ನೋಡಬೇಕಿದೆ. ಗೌತಮ್ ಹಾಗೂ ಭೂಮಿಕಾ ಒಂದಾಗ್ತಾರಾ ಎಂಬ ಅನುಮಾನ ಕೂಡ ಶುರುವಾಗಿದೆ.
ಪಾತ್ರಧಾರಿಗಳು
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಜಯದೇವ್ ಪಾತ್ರದಲ್ಲಿ ರಾಣವ್ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

