- Home
- Entertainment
- TV Talk
- Amruthadhaare Serial: ಭೂಮಿಕಾ ವಿರುದ್ಧವೇ ತಿರುಗಿಬಿದ್ದ ಗೌತಮ್; ಇದೆಲ್ಲ ದತ್ತುಪುತ್ರಿಯ ಅವಾಂತರ!
Amruthadhaare Serial: ಭೂಮಿಕಾ ವಿರುದ್ಧವೇ ತಿರುಗಿಬಿದ್ದ ಗೌತಮ್; ಇದೆಲ್ಲ ದತ್ತುಪುತ್ರಿಯ ಅವಾಂತರ!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ತಿನ್ನೋಕೆ ಬಿಟ್ಟು ವಠಾರದಲ್ಲಿರೋದು, ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡೋದು ಭೂಮಿಕಾಗೆ ಗೊತ್ತೇ ಇಲ್ಲ. ವಠಾರದಲ್ಲಿ ಗೌತಮ್ ತನ್ನನ್ನು ಫಾಲೋ ಮಾಡ್ತಿದ್ದಾನೆ ಎಂದು ಅವಳು ಅಂದುಕೊಂಡಿದ್ದಾಳೆ. ಇನ್ನೊಂದು ಸಮಸ್ಯೆ ಸೃಷ್ಟಿಯಾಗಿದೆ.

ತಪ್ಪು ತಿಳಿದುಕೊಂಡ ಭೂಮಿ
ಗೌತಮ್ ತನಗೆ ಸಿಕ್ಕಿದ ಮಗುವನ್ನು ದತ್ತು ತಗೊಂಡಿದ್ದಾನೆ, ಆ ಮಗುಗೆ ಕಣ್ಣಿನ ಸಮಸ್ಯೆಯೂ ಆಗಿತ್ತು. ಹೀಗಾಗಿ ಅವನು ಸ್ಪೆಕ್ಟ್ ಹಾಕಿಸಿ, ಶಾಲೆಗೆ ಸೇರಿಸಲು ರೆಡಿಯಾಗಿದ್ದಾನೆ. ಭೂಮಿಕಾ ಹೆಡ್ ಮಿಸ್ ಆಗಿರುವ ಸ್ಕೂಲ್‌ಗೆ ಅವನು ಬಂದಿದ್ದನು. ವಠಾರ ಆಯ್ತು, ಶಾಲೆಗೂ ಅವನು ಫಾಲೋ ಮಾಡಿಕೊಂಡು ಬಂದ ಅಂತ ಭೂಮಿ ಅಂದುಕೊಂಡಿದ್ದಾಳೆ.
ಪ್ರಶ್ನೆ ಮಾಡಿದ ಭೂಮಿಕಾ
ಭೂಮಿಕಾ, ಗೌತಮ್ ಬಳಿ, “ಇಷ್ಟು ಶ್ರೀಮಂತರಾಗಿರೋ ನೀವು ವಠಾರದಲ್ಲಿ ಬಂದು ಯಾಕಿದ್ದೀರಿ? ವಠಾರ ಆಯ್ತು, ಈಗ ಶಾಲೆಗೂ ನನ್ನನ್ನು ಯಾಕೆ ಫಾಲೋ ಮಾಡ್ಕೊಂಡು ಬಂದ್ರಿ? ನನ್ನ ಹಿಂದೆ ಬರಬೇಡಿ ಅಂತ ನಿಮಗೆ ಹೇಳಿಲ್ವಾ?” ಎಂದು ಅವಳು ಪ್ರಶ್ನೆ ಮಾಡಿದ್ದಳು. ಇದಕ್ಕೆ ಗೌತಮ್ ಉತ್ತರವನ್ನೇ ಕೊಡಲಿಲ್ಲ.
ಉತ್ತರ ಕೊಡೋದಿಲ್ಲ
ಕುಶಾಲನಗರದಲ್ಲಿ ಅಷ್ಟೆಲ್ಲ ಪ್ರಶ್ನೆಗಳನ್ನು ಕೇಳಿದ್ರೂ ಕೂಡ ನೀವು ಒಂದು ಮಾತು ಹೇಳಲಿಲ್ಲ, ಉತ್ತರವನ್ನೇ ಕೊಡಲಿಲ್ಲ. ಈಗ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡೋದಿಲ್ಲ, ನಾನು ನಿಮ್ಮ ಹಿಂದೆ ಬಂದಿಲ್ಲ, ನನಗೆ ಬೇರೆ ಕೆಲಸ ಇದೆ ಎಂದು ಅವನು ಹೇಳಿದ್ದಾನೆ.
ಆ ಮಗು ಹೇಳಿದ್ದೇನು?
ಶಾಲೆಗೆ ಅವನು ಮಗಳು ಮಿಂಚುವನ್ನು ಕರೆದುಕೊಂಡು ಬಂದಿದ್ದಾನೆ. ಹೆಡ್ ಮಿಸ್ ಆದ ಭೂಮಿಕಾಳನ್ನು ಗೌತಮ್ ಭೇಟಿಯಾಗಬೇಕಿತ್ತು. ಗೌತಮ್ ಆ ಮಗು ಜೊತೆ ಭೂಮಿಕಾ ಇರುವ ಛೆಂಬರ್‌ಗೆ ಹೋಗಿದ್ದಾನೆ. ಅಲ್ಲಿ ಅವರಿಬ್ಬರ ಮುಖಾಮುಖಿಯಾಗಿದೆ. “ನನ್ನ ಹೆಸರು ಜಿ ಮಿಂಚು. ಗೌತಮ್ ನನ್ನ ತಂದೆ” ಎಂದು ಆ ಮಗು ಹೇಳಿದೆ. ನಿನ್ನ ತಾಯಿ ಹೆಸರೇನು ಎಂದು ಆ ಮಗುವಿಗೆ ಭೂಮಿ ಪ್ರಶ್ನೆ ಮಾಡಿದ್ದಾಳೆ. ಆಗ ಅವಳು, “ನನಗೆ ಅಪ್ಪ-ಅಮ್ಮ ಇಬ್ಬರೂ ಇವರೇ” ಎಂದಿದೆ.
ಭೂಮಿಗೆ ಚಿಂತೆ ಶುರು
ಭೂಮಿಗೆ ಆಗ ಚಿಂತೆ ಶುರುವಾಗಿದೆ. ಗೌತಮ್ ಜೊತೆ ಇರೋ ಹುಡುಗಿ ಯಾರು? ಅಪ್ಪ ಅಂತ ಬೇರೆ ಕರೆತಿದ್ಯಲ್ಲಾ ಅಂತ ಭೂಮಿ ಯೋಚನೆ ಮಾಡುತ್ತಿದ್ದಾಳೆ. ಭೂಮಿಗೆ ತುಂಬ ಪೊಸೆಸ್ಸಿವ್‌ನೆಸ್ ಇದೆ. ಗೌತಮ್‌ಗೆ ಮತ್ತೊಂದು ಮದುವೆ ಆಗಿದ್ಯಾ? ನನ್ನ ಕಳೆದು ಹೋದ ಮಗಳು ಇವಳೇ ಇರಬಹುದಾ ಎಂದೆಲ್ಲ ಯೋಚನೆ ಬಂದ್ರೂ ಬರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.