- Home
- Entertainment
- TV Talk
- Bhagyalakshmi: ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್!
Bhagyalakshmi: ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್!
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಆದಿ ಮದುವೆಯ ಪ್ರಸ್ತಾಪವನ್ನು ಭಾಗ್ಯಳ ಮುಂದಿಟ್ಟಾಗ, ಆಕೆ ಮರುಮದುವೆಯ ಸಾಧ್ಯತೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾಳೆ. ತನ್ನ ಜೀವನದಲ್ಲಿ ಮತ್ತೊಬ್ಬರಿಗೆ ಜಾಗವಿಲ್ಲ ಎಂಬ ಆಕೆಯ ನಿರ್ಧಾರದಿಂದ ಆದಿ ಹಾಗೂ ವೀಕ್ಷಕರಿಗೆ ನಿರಾಸೆಯಾಗಿದೆ.

ಆದಿ-ಭಾಗ್ಯ ಒಂದಾಗುವ ಕನಸು
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial)ನಲ್ಲಿ ಸದ್ಯ ಕುಸುಮಾ ಭಾಗ್ಯ ಮತ್ತು ಆದಿಯ ಮದುವೆಯ ಕನಸನ್ನು ಕಾಣುತ್ತಿದ್ದಾನೆ. ಇನ್ನೊಂದೆಡೆ ಆದಿಗೂ ಭಾಗ್ಯಳ ಮೇಲೆ ಮನಸಾಗುತ್ತಿದೆ. ವೀಕ್ಷಕರು ಕೂಡ ಆದಿ ಮತ್ತು ಭಾಗ್ಯಳ ಜೋಡಿ ಸೂಪರ್ ಎನ್ನುತ್ತಿದ್ದು ಇವರಿಬ್ಬರೂ ಮದುವೆಯಾಗಬೇಕು ಎಂದೇ ಬಯಸುತ್ತಿದ್ದಾರೆ.
ಮದುವೆ ಬಗ್ಗೆ ಅಭಿಪ್ರಾಯ
ಇದೀಗ ಆದಿ ಈ ಬಗ್ಗೆ ಭಾಗ್ಯಳ ಅಭಿಪ್ರಾಯವನ್ನು ಕೇಳಿದ್ದಾನೆ. ತುಂಬಾ ಹಿಂಜರಿಯುತ್ತಲೇ ಮದುವೆಯ ವಿಷಯವನ್ನು ಪ್ರಸ್ತಾಪಿಸಿದ್ದಾನೆ ಆದಿ. ನಿಮ್ಮ ಹಿಂದಿನ ಲೈಫ್ ಬಗ್ಗೆ ಕೇಳಬೇಕಿತ್ತು ಎಂದಾಗ ಭಾಗ್ಯ ಅದನ್ನು ಹೇಳುತ್ತಲೇ, ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಎಂದಿದ್ದಾಳೆ.
ಬೇರೊಂದು ಮದುವೆ
ಆಗ ಆದಿ, ಬೇರೊಬ್ಬರು ಈಗ ನಿಮ್ಮ ಜೀವನದಲ್ಲಿ ಎಂಟ್ರಿ ಕೊಡಬಹುದೆ ಎಂದಾಗ ಖಡಾಖಂಡಿತವಾಗಿ ಭಾಗ್ಯ ಅದನ್ನು ಅಲ್ಲಗಳೆದಿದ್ದಾಳೆ.ಇದು ಸಾಧ್ಯವೇ ಇಲ್ಲ. ನನ್ನ ಜೀವನದಲ್ಲಿ ಮತ್ತೊಬ್ಬರು ಎಂಟ್ರಿ ಆಗಲು ಸಾಧ್ಯವಿಲ್ಲ ಎನ್ನುವ ಮೂಲಕ ಮರು ಮದುವೆಯ ಮಾತು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸಾಧ್ಯವಾಗದ ಮಾತು
ಒಂದು ವೇಳೆ ನಿಮ್ಮ ಪತಿ ವಾಪಸ್ ಬಂದರೆ ಒಂದಾಗುವಿರಾ ಎಂದು ಆದಿ ಕೇಳಿದಾಗ, ಅವರು ನನ್ನನ್ನು ಬಿಟ್ಟು ಹೋಗಿರುವ ಉದ್ದೇಶವೇ ಬೇರೊಬ್ಬಳ ಜೊತೆ ಮದುವೆಯಾಗಲು. ಆದ್ದರಿಂದ ಅದು ಸಾಧ್ಯವಾಗದ ಮಾತು ಎಂದಿದ್ದಾಳೆ.
ವೀಕ್ಷಕರಿಗೆ ನಿರಾಸೆ
ಇದನ್ನು ಕೇಳಿ ವೀಕ್ಷಕರಿಗೆ ನಿರಾಸೆಯಾಗಿದೆ. ಆದಿ ಮತ್ತು ಭಾಗ್ಯ ಒಂದಾಗಬೇಕು, ತಾಂಡವ್ ಎದುರೇ ಇಬ್ಬರೂ ಜೊತೆಯಾಗಿ ಇರಬೇಕು. ತಾಂಡವ್ ಹೊಟ್ಟೆ ಉರಿಯಿಂದ ಸಾಯಬೇಕು ಎನ್ನುವುದು ವೀಕ್ಷಕರ ಆಸೆ.
ವೀಕ್ಷಕರ ಆಸೆ
ಆದರೆ ಸದ್ಯದ ಸ್ಥಿತಿಯಲ್ಲಿ ಅದು ಆಗದ ಮಾತು. ಆದರೆ ಮುಂದೊಂದು ದಿನ ಆದಿ ಮತ್ತು ಭಾಗ್ಯ ಒಂದಾಗುವರು ಎನ್ನುವ ಆಸೆ ಮತ್ತು ಭರವಸೆಯಲ್ಲಿದ್ದಾರೆ ವೀಕ್ಷಕರು.