- Home
- Entertainment
- TV Talk
- Amruthadhaare Serial: ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್; ಮುನಿಸು ಮಾಯ
Amruthadhaare Serial: ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್; ಮುನಿಸು ಮಾಯ
‘ಅಮೃತಧಾರೆ’ ಧಾರಾವಾಹಿಯಲ್ಲಿ ಆಕಾಶ್ ಮತ್ತು ಮಿಂಚು ಶಾಲೆಯಲ್ಲಿ ಜಗಳವಾಡುತ್ತಾರೆ, ಇದರಿಂದಾಗಿ ಪ್ರಿನ್ಸಿಪಾಲ್ ಗೌತಮ್ ಮತ್ತು ಭೂಮಿಕಾರನ್ನು ಶಾಲೆಗೆ ಕರೆಸುತ್ತಾರೆ. ಗೌತಮ್ ಮಕ್ಕಳನ್ನು ಸಮಾಧಾನಪಡಿಸಿ ಒಂದಾಗಿಸುವುದನ್ನು ತೆರೆಮರೆಯಲ್ಲಿ ನಿಂತು ನೋಡಿದ ಭೂಮಿಕಾ ಮನಸ್ಸಿನಲ್ಲೇ ಖುಷಿಪಡುತ್ತಾಳೆ.

ಆಕಾಶ್ ಮತ್ತು ಮಿಂಚು ಜಗಳ
ಅಮೃತಧಾರೆ (Amruthadhaare)ಯಲ್ಲಿ ಅತ್ತ ಗೌತಮ್ ಮತ್ತು ಭೂಮಿಕಾ ಇನ್ನೂ ದೂರ ದೂರ ಇದ್ದರೆ, ಅದೇ ಇನ್ನೊಂದೆಡೆ ಆಕಾಶ್ ಮತ್ತು ಮಿಂಚು ಜಗಳವಾಡುತ್ತಿದ್ದಾರೆ. ಶಾಲೆಯಲ್ಲಿಯೂ ಇವರ ಜಗಳ ಮುಂದುವರೆದಿದೆ.
ಪ್ರಿನ್ಸಿಪಾಲ್ ಕಿವಿಮಾತು
ಒಂದೇ ಕ್ಲಾಸ್ನಲ್ಲಿ ಇರುವ ಈ ಇಬ್ಬರೂ ಜಗಳವಾಡಿ, ಕೊನೆಗೆ ಭೂಮಿಕಾ ಮತ್ತು ಗೌತಮ್ರನ್ನು ಪ್ರಿನ್ಸಿಪಾಲ್ ಶಾಲೆಗೆ ಕರೆಸುವಂತೆ ಮಾಡಿದ್ದಾರೆ. ಇಬ್ಬರೂ ಪರಸ್ಪರ ಒಬ್ಬರ ಮೇಲೆ ಒಬ್ಬರು ಗೂಬೆ ಕುಳ್ಳರಿಸುತ್ತಾ ನನ್ನ ತಪ್ಪಿಲ್ಲ ಎಂದು ಪ್ರಿನ್ಸಿಪಾಲ್ ಎದುರೇ ಜಗಳವಾಡಿಕೊಂಡಿದ್ದಾರೆ.
ಗೌತಮ್ ಸಮಾಧಾನ
ಕೊನೆಗೆ ಇಬ್ಬರನ್ನೂ ಸಮಾಧಾನ ಮಾಡಿ ಗೌತಮ್ ಕಳುಹಿಸಿದ್ದಾನೆ. ಬಳಿಕ ಪ್ರಿನ್ಸಿಪಾಲ್ ಶಾಲೆಯಲ್ಲಿ ಮಕ್ಕಳು ಇದೆಲ್ಲಾ ಕಾಮನ್, ಆದರೆ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದಿದ್ದಾರೆ.
ಒಂದು ಮಾಡಿದ ಗೌತಮ್
ಈಗ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುವ ಅಕ್ಕ-ತಮ್ಮನನ್ನು ಒಂದು ಮಾಡುವ ಜವಾಬ್ದಾರಿ ಗೌತಮ್ ಮೇಲಿದೆ. ಮಿಂಚು ಭೂಮಿಕಾ ಮತ್ತು ಗೌತಮ್ಳ ಸ್ವಂತ ಮಗಳು ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅದೇನೇ ಇದ್ದರೂ ಮಿಂಚು ಗೌತಮ್ನನ್ನು ಅಪ್ಪ ಎಂದು ಹೇಳುವ ಕಾರಣ, ಸಹಜವಾಗಿ ಭೂಮಿಕಾ ಅಮ್ಮನೇ ಆಗುತ್ತಾಳೆ.
ಮಕ್ಕಳಿಗೆ ಬುದ್ಧಿಮಾತು
ಇದೀಗ ಮಕ್ಕಳಿಬ್ಬರನ್ನೂ ಕರೆದ ಗೌತಮ್, ಹೀಗೆಲ್ಲಾ ಕಿತ್ತಾಡಬಾರದು ಎಂದು ಬುದ್ಧಿ ಹೇಳಿದ್ದಾನೆ. ಕೊನೆಗೆ ಸಾರಿ ಕೇಳುವಂತೆ ಹೇಳಿದಾಗ, ಇಬ್ಬರೂ ಪರಸ್ಪರ ಸಾರಿ ಕೇಳಿಕೊಂಡಿದ್ದಾರೆ.
ತೆರೆಮರೆಯಲ್ಲಿ ನೋಡಿದ ಭೂಮಿಕಾ
ಇದನ್ನು ತೆರೆಯ ಮರೆಯಲ್ಲಿಯೇ ನಿಂತು ಭೂಮಿಕಾ ನೋಡುತ್ತಿದ್ದು, ಮನಸ್ಸಿನಲ್ಲಿಯೇ ಖುಷಿಪಟ್ಟುಕೊಂಡಿದ್ದಾಳೆ. ಅಂತೂ ಮೇಲ್ನೋಟಕ್ಕೆ ಈ ಅಕ್ಕ-ತಮ್ಮ ಒಂದಾಗಿದ್ದಾರೆ. ಈಗೇನಿದ್ದರೂ ಮುನಿಸಿಕೊಂಡಿರುವ ಈ ಎರಡು ಮನಸುಗಳು ಒಂದಾಗಬೇಕು ಅಷ್ಟೇ.