- Home
- Entertainment
- TV Talk
- ಗಂಡು ಮಗುವಿಗೆ ಜನ್ಮ ನೀಡಿದ ಹಿಟ್ಲರ್ ಕಲ್ಯಾಣ ನಟಿ… ತಂದೆಯಾದ ಖುಷಿಯಲ್ಲಿ ಲಕ್ಷ್ಮಿ ನಿವಾಸ ಹರೀಶ್
ಗಂಡು ಮಗುವಿಗೆ ಜನ್ಮ ನೀಡಿದ ಹಿಟ್ಲರ್ ಕಲ್ಯಾಣ ನಟಿ… ತಂದೆಯಾದ ಖುಷಿಯಲ್ಲಿ ಲಕ್ಷ್ಮಿ ನಿವಾಸ ಹರೀಶ್
ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಹಾಗೂ ಲಕ್ಷ್ಮೀ ನಿವಾಸ ಧಾರಾವಾಹಿಯ ನಟ ಅಜಯ್ ರಾಜ್ ಪತ್ನಿಯಾಗಿರುವ ಪದ್ಮಿನಿ ದೇವನಹಳ್ಳಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಮಿಂಚಿದ ತಾರಾ ಜೋಡಿಗಳಾದ ಹಿಟ್ಲರ್ ಕಲ್ಯಾಣದ ನಟಿ ಪದ್ಮಿನಿ ದೇವನಹಳ್ಳಿ (Padmini Devanahalli) ಹಾಗೂ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹರೀಶ್ ಪಾತ್ರದಲ್ಲಿ ನಟಿಸುತ್ತಿರುವ ನಟ ಅಜಯ್ ರಾಜ್ ಪೋಷಕರಾದ ಸಂಭ್ರಮದಲ್ಲಿದ್ದಾರೆ.
ಪದ್ಮಿನಿ ದೇವನಹಳ್ಳಿ ಏಪ್ರಿಲ್ 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮದ ವಿಷಯವನ್ನು ಪತಿ ಹಾಗೂ ನಟ ಅಜಯ್ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಜೊತೆಯಾಗಿ ಮಾಡಿಸಿರುವ ಪ್ರೆಗ್ನೆನ್ಸಿ ಫೋಟೊ ಶೂಟ್ ಫೋಟೊ ಒಂದನ್ನು ಶೇರ್ ಮಾಡಿ. ಹಿನ್ನೆಲೆಯಲ್ಲಿ Its a Boy ಎಂದು ಬರೆದುಕೊಂಡಿದ್ದು, ಕ್ಯಾಪ್ಶನ್ ನಲ್ಲಿ 15th April 2025 💙🧿 ಎಂದು ಅಜಯ್ ರಾಜ್ ಬರೆದುಕೊಂಡಿದ್ದಾರೆ.
ಪೋಷಕರಾಗಿ ಭಡ್ತಿ ಪಡೆದಿರುವ ಈ ತಾರಾ ಜೋಡಿಗಳಿಗೆ ಸೆಲೆಬ್ರಿಟಿಗಳು, ಲಕ್ಷ್ಮೀ ನಿವಾಸ ಹಾಗೂ ಹಿಟ್ಲರ್ ಕಲ್ಯಾಣ (Hitler Kalyana) ತಂಡದ ಸದಸ್ಯರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ ಬೇಬಿ ಬಂಪ್ ಪ್ರೆಗ್ನೆನ್ಸಿ ಫೋಟೊ ಶೂಟ್ (pregnancy photoshoot) ಮಾಡಿಸಿಕೊಂಡಿದ್ದರು. ಇವರ ಫೋಟೋಗಳು ಸಹ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. ಸೀಮಂತದ ಫೋಟೊಗಳು ಸಹ ವೈರಲ್ ಆಗಿದ್ದವು.
ʼಸೀತಾರಾಮʼ ಧಾರಾವಾಹಿಯಲ್ಲಿ ವಠಾರದಲ್ಲಿರುವ ತಾತನ ಪಾತ್ರದಲ್ಲಿ ನಟಿಸುತ್ತಿರುವ ಕಲಾಗಂಗೋತ್ರಿ ಮಂಜು ಅವರ ಮಗಳು ಪದ್ಮಿನಿ ದೇವನಹಳ್ಳಿ. ಪದ್ಮಿನಿ ಈ ಹಿಂದೆ ಮಹಾದೇವಿ, ಹಿಟ್ಲರ್ ಕಲ್ಯಾಣ ಧಾರಾವಾಹಿಗಳಲ್ಲಿ ನಟಿಸಿದ್ದರು.
ನಟ ಅಜಯ್ (Ajay Raj) ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ರವಿಚಂದ್ರನ್ ಸೇರಿ ಹಲವು ನಟರ ಜೊತೆ ನಟಿಸಿದ್ದಾರೆ. ಇವರು ಮುಕ್ತ, ಲಕ್ಷ್ಮೀ ನಿವಾಸ (Lakshmi Nivasa) ಸೇರಿ ಹಲವು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ.
4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇದೀಗ ತಂದೆ - ತಾಯಿಯಾಗಿರುವ ಸಂಭ್ರಮದಲ್ಲಿದ್ದಾರೆ. ತಾಯಿ ಮಗು ಆರೋಗ್ಯವಾಗಿರಲಿ ಹಾಗೂ ಪುಟ್ಟ ಕಂದನ ಆಗಮನದ ಸಂಭ್ರಮದಲ್ಲಿರುವ ಕುಟುಂಬಕ್ಕೆ ಶುಭ ಹಾರೈಕೆಗಳು.