- Home
- Entertainment
- TV Talk
- Aishwarya Sindhogi: ಮಳೆಯಲಿ ನೆನೆದ ಬಿಗ್ ಬಾಸ್ ಬ್ಯೂಟಿ… ಇಟ್ಸ್ ಟೂ ಹಾಟ್ ಎಂದ ಫ್ಯಾನ್ಸ್
Aishwarya Sindhogi: ಮಳೆಯಲಿ ನೆನೆದ ಬಿಗ್ ಬಾಸ್ ಬ್ಯೂಟಿ… ಇಟ್ಸ್ ಟೂ ಹಾಟ್ ಎಂದ ಫ್ಯಾನ್ಸ್
ಬಿಗ್ ಬಾಸ್ ಸುಂದರಿ ಐಶ್ವರ್ಯ ಸಿಂಧೋಗಿ ಮಳೆಗಾಲದಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಶಿಶಿರ್ ಶಾಸ್ತ್ರೀ ಏನೆಂದು ಕಾಮೆಂಟ್ ಮಾಡಿದ್ದಾರೆ ನೋಡಿ.

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಬ್ಯೂಟಿ ಐಶ್ವರ್ಯ ಸಿಂಧೋಗಿ (Aishwarya Sindhogi), ಬಿಗ್ ಬಾಸ್ ಸೀಸನ್ ೧೧ ರ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದರು. ಬಿಗ್ ಬಾಸ್ ಮನೆಮಗಳು ಎಂದೇ ಕರೆಯಲ್ಪಟ್ಟವರು ಐಶ್ವರ್ಯ.
ಬಿಗ್ ಬಾಸ್ ನಿಂದ ಬಂದ ಬಳಿಕ ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿರುವ ಐಶ್ವರ್ಯ, ಇದರ ಜೊತೆಗೆ ಟ್ರಾವೆಲ್ ಮಾಡೋದನ್ನು ಮಾತ್ರ ಮರೆತಿಲ್ಲ. ಹೆಚ್ಚಾಗಿ ಸುಂದರ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ ಈ ಬ್ಯೂಟಿ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ಇದೀಗ ಹೊಸ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡಿದ್ದು, ಮಂಜು ಮುಸುಕಿದ ವಾತಾವರಣದ ನಡುವೆ ಪ್ರಕೃತಿ ಸೌಂದರ್ಯದ ಸುಂದರವಾದ ಜಾಗದಲ್ಲಿ ಮೈಮರೆತಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಐಶ್ವರ್ಯ ಬಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದು, ಹಸಿರು ಬಣ್ಣದ ಶರ್ಟ್ ಧರಿಸಿದ್ದಾರೆ. ಇದರ ಜೊತೆಗೆ ಬೇಬಿ ಪಿಂಕ್ ಬಣ್ಣದ ಜಾಕೆಟ್ ಧರಿಸಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಜೊತೆಗೆ ಮುದ್ದು ಮುದ್ದಾಗಿ ಪೋಸ್ ಕೊಡುವ ಮೂಲಕ ಅಭಿಮಾನಿಗಳು ಮತ್ತೆ ಮತ್ತೆ ಫೋಟೊ ನೋಡುವಂತೆ ಮಾಡಿದ್ದಾರೆ.
ಐಶ್ವರ್ಯ ಫೋಟೊ ನೋಡಿ ಬಿಗ್ ಬಾಸ್ ಮೂಲಕ ಸ್ನೇಹಿತರಾಗಿದ್ದ ಶಿಶಿರ್ ಶಾಸ್ತ್ರೀ (Shishir Shastri) ಅಶೂ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಸಹ ನಟಿಯ ಫೋಟೊ ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದು, ಕ್ರಶ್, ಬ್ಯೂಟಿಫುಲ್, ಬೊಂಬೆ ಎಂದಿದ್ದಾರೆ.
ಇನ್ನೂ ಹಲವು ಜನರು ಫೈರ್ ಇಮೋಜಿ ಕಾಮೆಂಟ್ ಮಾಡಿ, ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದೀರಿ, ಇಂಟರ್ನೆಟಲ್ಲಿ ಕಿಚ್ಚು ಹಚ್ಚಿದೆ ಎಂದಿದ್ದಾರೆ. ಇನ್ನೂ ಕೆಲವರು ಎಲ್ಲಿ ಶಿಶಿರ್ ಎಂದು ಸಹ ಕಾಮೆಂಟ್ ಮೂಲಕ ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ (Bigg Boss Season 11)ಬಳಿಕ ಐಶ್ವರ್ಯ ಮತ್ತು ಶಿಶಿರ್ ಶಾಸ್ತ್ರೀ ನಡುವೆ ಉತ್ತಮ ಬಾಂಡಿಂಗ್ ಬೆಳೆದಿದ್ದು, ಇಬ್ಬರು ಜೊತೆಯಾಗಿ ಹಲವಾರು ತಾಣಗಳಿಗೆ ಟ್ರಾವೆಲ್ ಮಾಡಿದ್ದಾರೆ. ಜೊತೆಗೆ ಹಲವು ರೀಲ್ಸ್ ಕೂಡ ಮಾಡಿದ್ದಾರೆ.
ಐಶ್ವರ್ಯ ಸದ್ಯ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ಅವರು ತುಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ.