- Home
- Entertainment
- TV Talk
- ಅಬ್ಬಬ್ಬಾ..! ಎಂಥ ಸಿಂಗಾರ! ʼಅಗ್ನಿಸಾಕ್ಷಿ ಧಾರಾವಾಹಿ ಅಂಜಲಿʼ ಸುಕೃತಾ ನಾಗ್ ಜನ್ಮದಿನ ಆಚರಣೆ ಫೋಟೋಗಳಿವು!
ಅಬ್ಬಬ್ಬಾ..! ಎಂಥ ಸಿಂಗಾರ! ʼಅಗ್ನಿಸಾಕ್ಷಿ ಧಾರಾವಾಹಿ ಅಂಜಲಿʼ ಸುಕೃತಾ ನಾಗ್ ಜನ್ಮದಿನ ಆಚರಣೆ ಫೋಟೋಗಳಿವು!
ʼಅಗ್ನಿಸಾಕ್ಷಿʼ ಹಾಗೂ ʼಲಕ್ಷಣʼ ಧಾರಾವಾಹಿ ನಟಿ ಸುಕೃತಾ ನಾಗ್ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ.

ಸುಕೃತಾ ನಾಗ್ ಅವರು ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರೀಗ ಜನ್ಮದಿನ ಆಚರಿಸಿಕೊಂಡಿದ್ದಾರೆ. ಲಕ್ಷಣ, ಅಗ್ನಿಸಾಕ್ಷಿ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿಯೂ ಇವರು ನಟಿಸಿದ್ದರು.
ಸುಕೃತಾ ನಾಗ್ ಅವರಿಗೆ ಈಗ 28 ವರ್ಷ ವಯಸ್ಸು ಎನ್ನಲಾಗಿದೆ. ಈ ಬಾರಿಯ ಜನ್ಮದಿನವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ.
ಸುಕೃತಾ ನಾಗ್ ಅವರು ತಂದೆಯನ್ನು ಕಳೆದುಕೊಂಡು 22 ವರ್ಷ ಆಗಿದೆ. ಅಪ್ಪನ ಜೊತೆಗಿರುವ ಫೋಟೋ ಒಂದೂ ಇಲ್ಲ ಎನ್ನುವ ಬೇಸರವನ್ನು ಜೀ ಕನ್ನಡ ವಾಹಿನಿ ಮರೆಸಿತ್ತು. ಸುಕೃತಾ ನಾಗ್‌ಗೆ ತಂದೆ ಜೊತೆಗಿನ ಫೋಟೋ ನೀಡಿತ್ತು.
ನಟಿ ಸುಕೃತಾ ನಾಗ್ ಹಾಗೂ ಅವರ ಸಹೋದರಿಯನ್ನು ತಾಯಿಯೇ ಏಕಾಂಗಿಯಾಗಿ ಬೆಳೆಸಿದ್ದಾರಂತೆ. ಈ ವಿಚಾರವಾಗಿ ತಾಯಿ ಬಗ್ಗೆ ತುಂಬ ಖುಷಿ ಇದೆ.
ಸುಕೃತಾ ನಾಗ್ ಅವರ ಅಕ್ಕ ತಂದೆಯ ಅಂತ್ಯಕ್ರಿಯೆ ಮಾಡಿದ್ದರು. ಸುಕೃತಾ ನಾಗ್ ಅವರು ಗುಂಡು ಹೊಡೆಸಿಕೊಂಡಿದ್ದರು. ಈ ವಿಚಾರವನ್ನು ಅವರೇ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಹೇಳಿಕೊಂಡಿದ್ದರು.
ಸುಕೃತಾ ನಾಗ್ ಅವರು ತಂದೆಯನ್ನು ಕಳೆದುಕೊಂಡಾಗ ಅವರಿಗೆ 5 ವರ್ಷ ವಯಸ್ಸು. ಏನೂ ಅರಿವಿಲ್ಲದ ಅವರು ತಂದೆ ಬಾಡಿ ಮುಂದೆ ಆಟ ಆಡುತ್ತಿದ್ದರಂತೆ.
ಅಪ್ಪ-ಅಮ್ಮ ಇಬ್ಬರೂ ಇರೋರು ಪುಣ್ಯವಂತರು ಎಂದು ಸುಕೃತಾ ನಾಗ್ ಅವರು ʼಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ಹೇಳಿಕೊಂಡಿದ್ದಾರೆ.
ಸುಕೃತಾ ನಾಗ್ ಅವರ ಜನ್ಮದಿನಕ್ಕೆ ಬಹಳ ಗ್ರ್ಯಾಂಡ್ ಆಗಿ ಡೆಕೋರೇಟ್ ಮಾಡಲಾಗಿತ್ತು. ಆ ಡೆಕೋರೇಶನ್ ಮಧ್ಯೆ ಸುಕೃತಾ ನಾಗ್ ಕಾಣಿಸಿಕೊಂಡಿದ್ದು ಹೀಗೆ.
ನಟಿ ಸುಕೃತಾ ನಾಗ್ ಅವರು ಸದ್ಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಯಾವಾಗ ಧಾರಾವಾಹಿಯಲ್ಲಿ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ.