ಬೆಳ್ಳಿ ತೆರೆಯಲ್ಲಿ ಸೋತು, ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿಯರು
ಯಾವುದೇ ಒಬ್ಬ ನಟ ಬೆಳ್ಳಿ ಪರದೆ ಮೇಲೆ ತಮ್ಮ ಅಭಿನಯದಿಂದ ಗುರುತಿಸಲ್ಪಡಲು ಮತ್ತು ಲಕ್ಷಾಂತರ ಹೃದಯಗಳನ್ನು ಗೆಲ್ಲುವ ಕನಸು ಕಾಣುತ್ತಾರೆ. ಕೆಲವರಿಗೆ ಆ ಕನಸುಗಳು ನನಸಾಗುತ್ತವೆ ಆದರೆ ಇತರರು ಆ ಯಶಸ್ಸನ್ನು ಬೇರೆ ಕಡೆ ಪಡೆದುಕೊಳ್ಳುತ್ತಾರೆ. ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟ ಪ್ರಯತ್ನಿಸಿ ಅಷ್ಟಾಗಿ ಯಶಸ್ಸು ಗಳಿಸದೇ, ಆದರೆ ಕನ್ನಡ ಟೆಲಿವಿಷನ್ ಮೂಲಕ ಖ್ಯಾತಿ ಪಡೆದ ನಟಿಯರು ಯಾರು ಯಾರು ಅನ್ನೋದನ್ನು ನೋಡೋಣ.
ದಿವ್ಯಾ ಸುರೇಶ್ (Divya Suresh)
ತ್ರಿಪುರ ಸುಂದರಿ ನಟಿ ಸಣ್ಣ ಪರದೆಯ ಮೇಲೆ ತನ್ನ ನಟನೆಯಿಂದ ವೀಕ್ಷಕರ ಹೃದಯವನ್ನು ಗೆಲ್ಲುತ್ತಿರುವ ನಟಿ ದಿವ್ಯಾ ಸುರೇಶ್, ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಭಾಗವಹಿಸುವ ಮೂಲಕ ಖ್ಯಾತಿ. ಅವರು ಈ ಹಿಂದೆ 3 ನೇ ತರಗತಿ ಮತ್ತು ಟೆಂಪ್ಟ್ ರಾಜಾ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು, ಆದರೆ ಅದು ಅಷ್ಟೊಂದು ಸುದ್ದಿಯಾಗಿಲ್ಲಾಯ್ತು.
ಗೌತಮಿ ಜಾದವ್ (Gowthami Jadav)
ಗೌತಮಿ ತನ್ನ ಆನ್-ಸ್ಕ್ರೀನ್ ಪಾತ್ರ 'ಸತ್ಯ'ಕ್ಕೆ ಹೆಸರುವಾಸಿ. ಆದರೆ ಗೌತಮಿ ಅದಕ್ಕೂ ಮುಂಚೆ ಬಹಳ ಸಮಯದಿಂದ ಚಲನಚಿತ್ರೋದ್ಯಮದಲ್ಲಿದ್ದಾರೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇವರು ಕಿನಾರೆ ಮೂವಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ, ದೈನಂದಿನ ಧಾರಾವಾಹಿ ಸತ್ಯ ಇತ್ತೀಚಿನ ದಿನಗಳಲ್ಲಿ ಅವರಿಗೆ ಅಪಾರ ಜನಪ್ರಿಯತೆಯನ್ನು ನೀಡಿತು.
ದೀಪಿಕಾ ದಾಸ್ (Deepika Das)
ಬಹಳ ಸಮಯದ ನಂತರ ಬೆಳ್ಳಿ ಪರದೆಗೆ ಮರಳಲು ಸಜ್ಜಾಗಿರುವಾಗ, ದೀಪಿಕಾ ದಾಸ್ ನಾಗಿಣಿ ಮೂಲಕ ಖ್ಯಾತಿ ಪಡೆದರು. ನಟಿ ಈ ಸೀರಿಯಲ್ ನಲ್ಲಿ ಆಕಾರವನ್ನು ಬದಲಾಯಿಸುವ ಹೆಣ್ಣು ಸರ್ಪದ ಪಾತ್ರವನ್ನು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 7 ಮತ್ತು 9 ರಲ್ಲಿ ಭಾಗವಹಿಸುವ ಮೂಲಕ ಅವರು ವೀಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಮತ್ತೊಂದೆಡೆ, ದೂಧ್ ಸಾಗರ್, ಖಾಂಜಿ ಪಿಂಜಿ, ಮೊದಲಾದ ಹೆಚ್ಚು ಸದ್ದು ಮಾಡದ ಚಿತ್ರಗಳಲ್ಲೂ ನಟಿಸಿದ್ದಾರೆ.
ವೈಷ್ಣವಿ ಗೌಡ (Vaishnavi Gowda)
'ಸೀತಾ ರಾಮ' ಧಾರಾವಾಹಿ ಮೂಲಕ ಕಿರುತೆರೆಗೆ ಮರಳಲು ವೈಷ್ಣವಿ ಸಜ್ಜಾಗಿದ್ದಾರೆ. ಆದಾಗ್ಯೂ, ಅವರು 'ಬೆಕ್ಕು' ಮತ್ತು 'ಗಿರ್ಗಿಟ್ಲಿ' ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅದು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲೇ ಇಲ್ಲ. ಅವರು ಕನ್ನಡ ಟೆಲಿವಿಷನ್ ನ ನೆಚ್ಚಿನ ಸೊಸೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಕವಿತಾ ಗೌಡ (Kavitha Gowda)
ಕವಿತಾ ಗೌಡ ಕನ್ನಡದಲ್ಲಿ ಜನಪ್ರಿಯತೆ ಗಳಿಸಿದ್ದು ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಲಕ್ಷ್ಮಿಯಾಗಿ. ಇದರ ಜೊತೆಗೆ ಇವರು ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿದ್ದರು. ಆದರೆ ಅದಕ್ಕೂ ಮುನ್ನ ಅವರು ಕನ್ನಡ ಕೆಲವು ಚಿತ್ರಗಳಲ್ಲಿ ಕೂಡ ನಟಿಸಿದ್ದರು, ಆದರೆ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಿಲ್ಲ.
ಕಾವ್ಯಾ ಶಾಸ್ತ್ರಿ (Kavya Shastry)
ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ, ಜೊತೆಗೆ ಪರಭಾಷಾ ಸೀರಿಯಲ್‌ಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿರುವ ನಟಿ ಕಾವ್ಯಾ ಶಾಸ್ತ್ರೀ. ಇವರು ಮೊದಲು ದುನಿಯಾ ವಿಜಯ್ ಜೊತೆಗೆ ಯುಗ ಚಿತ್ರದಲ್ಲಿ, ನಂತರ ಚೆಲುವೆ ನಿನ್ನ ನೋಡಲು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವರು ಹೆಸರು ಮಾಡಿದ್ದು ಮಾತ್ರ ಕಿರುತೆರೆಯಲ್ಲಿ.
ಐಶ್ಚರ್ಯ ಸಿಂಧೋಗಿ (Aishwarya Shindogi)
ಮಮ್ಮ ಸೇವ್ ಮಿ ಮತ್ತು ಸಪ್ ನೋ ಕಿ ರಾಣಿಯಂತಹ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ ಐಶ್ವರ್ಯಾ ಸಿಂಧೋಗಿ ನಂತರ ನಾಗಿಣಿ 2 ಮೂಲಕ ಸಣ್ಣ ಪರದೆಗೆ ಪಾದಾರ್ಪಣೆ ಮಾಡಿದರು. ನಾಗಿಣಿ 2 ರ ನಂತರ, ನಟಿ ಕನ್ನಡ ಟೆಲಿವಿಶನ್ ನಲ್ಲಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಐಶ್ವರ್ಯ ಪ್ರಸ್ತುತ ರಿಯಾಲಿಟಿ ಶೋ 'ಸೂಪರ್ ಕ್ವೀನ್' ನಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.