ನೇಸರನೇ ಕಣ್ಣಾಕುವಂತೆ ಸೀರೆಯುಟ್ಟ ಚಂದನದಗೊಂಬೆ ನಿವೇದಿತಾ ಗೌಡ!
ಚಂದನವನದ ಚೆಲುವೆ ನಿವೇದಿತಾ ಗೌಡ ಸೀರೆಯುಟ್ಟು ಅಭಿಮಾನಿಗಳ ಮನಗೆದ್ದಿದ್ದಾರೆ. ಮಾಡ್ರನ್ ಲುಕ್‌ನಿಂದ ಸಾಂಪ್ರದಾಯಿಕ ಉಡುಗೆಗೆ ಬದಲಾಗಿರುವ ನಿವೇದಿತಾ ಅವರ ಸೀರೆಯುಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚಂದನವನದ ಚೆಲುವೆ ನಿವೇದಿತಾ ಗೌಡ ಶೂಟಿಂಗ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ತನ್ನ ಚಂದನದಗೊಂಬೆಯಂತಹ ಚೆಲುವನ್ನು ಅಭಿಮಾನಿಗಳಿಗೆ ಹಂಚುವುದನ್ನು ಮಾತ್ರ ಮಿಸ್ ಮಾಡುವುದೇ ಇಲ್ಲ. ಇದೀಗ ಇಳಿಸಂಜೆ ಹೊತ್ತಲ್ಲಿ ನೇಸರನೇ ಕಣ್ಣಾಕುವಂತೆ ನಿವೇದಿತಾ ಗೌಡ ಸೀರೆಯುಟ್ಟು ಬಳುಕುವ ಬಳ್ಳಿಯಂತೆ ಪೋಸ್ ಕೊಟ್ಟಿದ್ದಾರೆ.
ರೀಲ್ಸ್ ಮೂಲಕವೇ ಬಾರ್ಬಿ ಡಾಲ್ ಎಂದು ಗುರುತಿಸಿಕೊಂಡಿದ್ದ ನಿವೇದಿತಾ ಗೌಡ, ಮಾಡ್ರನ್ ಡ್ರೆಸ್ ಹಾಕಿಕೊಂಡು ಮಿಂಚಿದ್ದೇ ಹೆಚ್ಚು. ಇದರಿಂದಾಗಿ ನೆಟ್ಟಿಗರು ಎಷ್ಟೇ ಕಾಮೆಂಟ್ ಮಾಡಿ ಕಿಡಿಕಾರಿದರೂ ಆಕೆಯ ಸೌಂದರ್ಯ ಕಣ್ತುಂಬಿಕೊಳ್ಳುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಹೀಗಾಗಿ, ನಿವೇದಿತಾ ಗೌಡ ಇನ್‌ಸ್ಟಾ ಖಾತೆಗೆ ಲಕ್ಷಾಂತರ ಜನರು ಫಾಲೋವರ್ಸ್‌ಗಳು ಇದ್ದಾರೆ.
ತನ್ನ ಅಭಿಮಾನಿಗಳು ಏನು ಇಷ್ಟಪಡುತ್ತಾರೆ ಎಂಬುದನ್ನು ಗಮನಿಸಿದ ನಿವೇದಿತಾ ಗೌಡ ಇತ್ತೀಚೆಗೆ ಮಾಡ್ರನ್ ರೀಲ್ಸ್ ಜೊತೆಗೆ, ಸಾಂಪ್ರದಾಯಿಕವಾಗಿ ಸೀರೆಯನ್ನು ಧರಿಸಿ ಫೋಟೋ ಮತ್ತು ರೀಲ್ಸ್‌ಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಸೀರೆಯಲ್ಲಿ ನಿವೇದಿತಾ ಗೌಡ ಅಂದವನ್ನು ನೋಡಿದ ನೆಟ್ಟಿಗರು ತಮ್ಮ ಹಾರ್ಟ್ ಅನ್ನು ಕೊಡುತ್ತಾರೆ. ಹೀಗಾಗಿ, ಸೀರೆಯುಟ್ಟ ಸುಂದರ ಫೋಟೋಗಳಿಗೆ ಹಾರ್ಟ್ ಇಮೇಜಿಗಳೇ ತುಂಬಿಕೊಂಡಿರುತ್ತವೆ.
ನಿವ್ವಿ ಅವರ ಜೀವನಕ್ಕೆ ಬಂದರೆ ತಾನೇ ಪ್ರೀತಿಸಿ ಮದುವೆ ಮಾಡಿಕೊಂಡ ಹುಡುಗ ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದು ಅಪ್ಪನ ಮನೆಯಲ್ಲಿ ನೆಲೆ ಊರಿದ್ದಾರೆ. ಹಾಗಂತ ಅಪ್ಪನ ದುಡಿಮೆಯಲ್ಲಿ ಕುಳಿತು ತಿನ್ನದೇ ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ರೀಲ್ಸ್ ಮಾಡುತ್ತಾ ಹಣ ಗಳಿಸುತ್ತಿದ್ದಾರೆ.
ಇನ್ನು ವೃತ್ತಿ ಜೀವನಕ್ಕೆ ಬಂದರೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುವ ನಿವೇದಿತಾ ಗೌಡ ಕಿರುತೆಗೆ ಬೇಡಿಕೆ ನಟಿಯೂ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಗೇಮ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಜೊತೆಗೆ, ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಬಾಯ್ಸ್ v/s ಗರ್ಲ್ಸ್ ಶೋನಲ್ಲಿ ಅಪ್ಪ-ಮಗಳ ಡ್ಯಾನ್ಸ್ ವಿತ್ ಸ್ಕಿಟ್‌ನಲ್ಲಿ ಧನರಾಜ್ ಆಚಾರ್ ಅಪ್ಪನ ಮಾತ್ರದಲ್ಲಿ ಹಾಗೂ ನಿವೇದಿತಾ ಗೌಡ ಮಗಳ ಪಾತ್ರದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ವೇದಿಕೆಯಲ್ಲಿದ್ದ ಎಲ್ಲ ಸ್ಪರ್ಧಿಗಳು ಹಾಗೂ ಜಡ್ಜಸ್‌ಗಳು ಕಣ್ಣೀರು ಹಾಕಿದ್ದಾರೆ.