- Home
- Entertainment
- TV Talk
- ಗೆಳೆಯ ಪ್ರಾಣ ಬಿಟ್ಟ ಆ ನನ್ನ ಮನೆಯಲ್ಲಿ ಇರೋಕೆ ಆಗ್ತಿಲ್ಲ, ಆದ್ರೆ ಬಾಡಿಗೆ ಕಟ್ಟುತ್ತಿದ್ದೇನೆ; Krishi Thapanda
ಗೆಳೆಯ ಪ್ರಾಣ ಬಿಟ್ಟ ಆ ನನ್ನ ಮನೆಯಲ್ಲಿ ಇರೋಕೆ ಆಗ್ತಿಲ್ಲ, ಆದ್ರೆ ಬಾಡಿಗೆ ಕಟ್ಟುತ್ತಿದ್ದೇನೆ; Krishi Thapanda
What happened to Krishi Thapanda: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೃಷಿ ತಾಪಂಡ ಹಂಚಿಕೊಂಡ ವೀಡಿಯೊ ಕೇವಲ ಒಂದು ವ್ಲಾಗ್ ಆಗಿರಲಿಲ್ಲ; ಅದು ತೀವ್ರವಾದ ಮಾನಸಿಕ ಆಘಾತ, ವೈಯಕ್ತಿಕ ನಷ್ಟ ಮತ್ತು ಸೋಷಿಯಲ್ ಮೀಡಿಯಾದ ಕ್ರೌರ್ಯದ ವಿರುದ್ಧ ಹೋರಾಡುತ್ತಿರುವ ಹೆಣ್ಣೊಬ್ಬಳ ಅಂತರಂಗದ ಆಕ್ರೋಶವಾಗಿತ್ತು.

ಹೇಗಿದ್ದೀರಾ? ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ!
ತುಂಬ ಸಮಯದ ನಂತರ ಕ್ಯಾಮೆರಾ ಮುಂದೆ ಬಂದ ಕೃಷಿ, ತಮ್ಮ ಸದ್ಯದ ಮಾನಸಿಕ ಸ್ಥಿತಿಯನ್ನು ವಿವರಿಸುತ್ತಾ, "ನನ್ನ ಲೈಫ್‌ನಲ್ಲಿ ಏನು ನಡೀತಿದೆ ಅಂತ ನನಗೆ ಅರ್ಥ ಮಾಡಿಕೊಳ್ಳೋಕೆ ಆಗ್ತಾ ಇಲ್ಲ. ಯಾರಾದರೂ 'ಹೇಗಿದ್ದೀರಾ?' ಅಂತ ಕೇಳಿದರೆ ನನ್ನ ಮೈಂಡ್ ಬ್ಲಾಂಕ್ ಆಗಿಬಿಡುತ್ತೆ. ನಾನು ಒಳಗಿನಿಂದ ಮಿಲಿಯನ್ ಪೀಸ್‌ಗಳಾಗಿ ಒಡೆದು ಹೋಗಿದ್ದೇನೆ, ಸಂಪೂರ್ಣವಾಗಿ ಶಾಟರ್ ಆಗಿದ್ದೇನೆ. ಆದರೆ ನಾನು ಬದುಕಲೇಬೇಕು," ಎಂದು ತೀವ್ರ ಭಾವುಕರಾದರು.
ನಾನೇ ಮನೆ ಬಾಡಿಗೆ ಕಟ್ಟಬೇಕು
ತಮ್ಮ ನೋವಿನ ನಡುವೆಯೂ ಕೆಲಸದ ರೀಲ್ಸ್ ಅಥವಾ ಪ್ರಮೋಷನ್ ವಿಡಿಯೋಗಳನ್ನು ಹಾಕಿದ್ದಕ್ಕೆ ಕೆಲವರು ಮಾಡಿದ ಕ್ರೂರ ಕಮೆಂಟ್‌ಗಳ ವಿರುದ್ಧ ಕೃಷಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
"ನಾವು ಸತ್ತರೆ ಹೇಡಿಗಳು ಅಂತಾರೆ, ಅದೇ ಎದ್ದು ಬದುಕೋಕೆ ಪ್ರಯತ್ನ ಪಟ್ಟರೆ 'ನಾಚಿಕೆ ಇಲ್ವಾ, ಇಷ್ಟ ಬೇಗ ಮೂವ್ ಆನ್ ಆಗಿಬಿಟ್ರಾ' ಅಂತ ಕೇಳ್ತಾರೆ. ನಾನು ತುಂಬಾ ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ನಾನಿಲ್ಲ, ಆದರೆ ಅದರ ಬಾಡಿಗೆಯನ್ನು ನಾನು ಇನ್ನು ಕಟ್ಟುತ್ತಿದ್ದೇನೆ. ನನ್ನ ಮೆಡಿಕಲ್ ಬಿಲ್ಸ್, ಇಎಂಐಗಳನ್ನು ಟ್ರೋಲ್ ಮಾಡುವವರು ಬಂದು ಕಟ್ಟುತ್ತಾರಾ? ನಾನು ಬದುಕಿರೋ ತನಕ ಬಿಲ್ಸ್ ಕಟ್ಟಲು ದುಡಿಯಲೇಬೇಕು.
ನೆಗೆಟಿವ್ ಕಮೆಂಟ್‌ಗಳನ್ನು ಡಿಲೀಟ್ ಮಾಡುವ ಬಗ್ಗೆ ಮಾತನಾಡಿದ ಅವರು, "ಕೊಳೆತ ಟೊಮೆಟೊ ಇಡೀ ಬುಟ್ಟಿಯನ್ನು ಹಾಳು ಮಾಡಬಾರದು ಅಂತ ಹೇಗೆ ಬಿಸಾಡ್ತೀವೋ, ಹಾಗೆ ನನ್ನ ಮಾನಸಿಕ ನೆಮ್ಮದಿಗಾಗಿ ನೆಗೆಟಿವ್ ಕಮೆಂಟ್‌ಗಳನ್ನು ಬ್ಲಾಕ್ ಮಾಡ್ತೀನಿ," ಎಂದು ಸ್ಪಷ್ಟಪಡಿಸಿದರು.
ಹೆಣ್ಣಾಗಿ ಹುಟ್ಟಿದ್ದೇ ಶಾಪ ಅನಿಸಿಬಿಟ್ಟಿತು...
ಯಾವಾಗಲೂ ಹೆಣ್ಣಿನ ದೈವಿಕ ಶಕ್ತಿ ಮತ್ತು ಒಳಾಂಗಣ ಸೌಂದರ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದ ಕೃಷಿ, ಜೀವನದಲ್ಲಿ ಬಂದ ಬಿರುಗಾಳಿಗೆ ಧೃತಿಗೆಟ್ಟಿದ್ದನ್ನು ಒಪ್ಪಿಕೊಂಡರು. "ಮೊದಲನೇ ಸತಿ ಹೆಣ್ಣಾಗಿ ಹುಟ್ಟಿಬಿಟ್ಟಿರೋದು ಶಾಪ ಅಂತ ಅನಿಸಿಬಿಟ್ಟಿತು ನನಗೆ. ನನ್ನ ಮೇಲೆ ನನಗೇ ಅನುಮಾನ ಬರುವಂತೆ ಮೀಡಿಯಾದವರು, ಕೆಲವರು ಮಾತನಾಡಿದರು. ಅವಮಾನ, ಅನುಮಾನ, ಚಾರಿತ್ರ್ಯ ವಧೆ—ಎಲ್ಲವನ್ನೂ ನೋಡಿಬಿಟ್ಟೆ," ಎಂದರು.
ಒಂದು ದಿನಕ್ಕೆ ಅಷ್ಟೇ ಬದುಕು
ತಮ್ಮ ಜರ್ನಲ್‌ನಲ್ಲಿ ಬರೆದ ಸಾಲುಗಳನ್ನು ಓದಿದ ಕೃಷಿ, ತಮಗೆ ಸದ್ಯಕ್ಕೆ ಯಾವುದೇ ಭರವಸೆ ಕಾಣಿಸುತ್ತಿಲ್ಲವಾದರೂ ದಿನದೂಡುತ್ತಿರುವುದಾಗಿ ಹೇಳಿದರು. "ನಾನು ಇಂದು ನಗುತ್ತಿರುವುದು ನೋವು ಮರೆತುಹೋಗಿದೆ ಎಂದಲ್ಲ, ನಗುವುದೊಂದೇ ಸದ್ಯಕ್ಕಿರುವ ದಾರಿ ಅಂತ. ನಾನು ಬಲಶಾಲಿಯಾಗಿ ಇರುವುದರಿಂದ ಅಲ್ಲ, ಬದಲಿಗೆ ನಾನಿನ್ನೂ ಇಲ್ಲೇ ಇರುವುದರಿಂದ ಬದುಕುತ್ತಿದ್ದೇನೆ. ದೇವರೇ ನೀನೇ ನೋಡಿಕೋ ಅಂತ ಎಲ್ಲವನ್ನೂ ಅವನಿಗೆ ಬಿಟ್ಟಿದ್ದೇನೆ," ಎಂದು ಕಣ್ಣೀರು ಒರೆಸಿಕೊಂಡರು.
ಚುಚ್ಚಿ ಮಾತನಾಡಬೇಡಿ
ಕೊನೆಯದಾಗಿ, ಸೋಷಿಯಲ್ ಮೀಡಿಯಾದಲ್ಲಿ ಫ್ರೀಡಂ ಆಫ್ ಸ್ಪೀಚ್ ಇದೆ ಎಂದು ಬೇರೆಯವರ ನೋವನ್ನೇ ಬಂಡವಾಳ ಮಾಡಿಕೊಂಡು ಚುಚ್ಚಿ ಮಾತನಾಡಬೇಡಿ, ಯಾರಿಗೂ ಬದುಕುವ ಹೋಪ್ಸ್ ಕಸಿದುಕೊಳ್ಳಬೇಡಿ ಎಂದು ಕೃಷಿ ತಾಪಂಡ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

