- Home
- Entertainment
- TV Talk
- ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾವ್ಯಾ ಗೌಡ; ಪುನೀತ್ ರಾಜ್‌ಕುಮಾರ್ ನೆಟ್ಟ ಗಿಡ ನೋಡಿ ಶಾಕ್!
ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾವ್ಯಾ ಗೌಡ; ಪುನೀತ್ ರಾಜ್‌ಕುಮಾರ್ ನೆಟ್ಟ ಗಿಡ ನೋಡಿ ಶಾಕ್!
ಕೊಡಗಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾವ್ಯಾ ಗೌಡ. ಅಕ್ಕನ ಮಗಳು ಮತ್ತು ತಮ್ಮ ಮಗಳ ಜೊತೆ ಮ್ಯಾಚಿಂಗ್ ಮ್ಯಾಚಿಂಗ್.....

ಮೀರಾ ಮಾಧವಾ, ರಾಧಾ ರಮಣ ಸೇರಿದಂತೆ ಹಲವು ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿರುವ ಕಾವ್ಯಾ ಗೌಡ ಜೂನ್ 6ರಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಕೂರ್ಗ್‌ನಲ್ಲಿರುವ ಜನಪ್ರಿಯ ಐಷಾರಾಮಿ ಹೋಟೆಲ್ ಆಗಿರುವ ಎವಾಲ್ವ್ ಬ್ಯಾಕ್ ಕೂರ್ಗ್‌ನಲ್ಲಿ ಗಂಡ ಸೋಮಶೇಖರ್, ಪುತ್ರಿ ಸಿಯಾ ಹಾಗೂ ಅಕ್ಕನ ಮಗಳ ಆಧ್ಯಾ ಜೊತೆ ಆಚರಿಸಿಕೊಂಡಿದ್ದಾರೆ.
ಕಾವ್ಯಾ ಗೌಡ, ಅಕ್ಕನ ಮಗಳು ಹಾಗೂ ತಮ್ಮ ಮಗಳ ಜೊತೆ ಮ್ಯಾಚಿಂಗ್ ಮ್ಯಾಚಿಂಗ್ ಉಡುಪುಗಳನ್ನು ಧರಿಸಿ ಅಲ್ಲಿಯೇ ಫೋಟೋಶೂಟ್ ಮಾಡಿದ್ದಾರೆ.
ಕಾವ್ಯಾ ವಾಸಿಸುತ್ತಿರುವ ರೆಸಾರ್ಟ್‌ಗೆ ಏಪ್ರಿಲ್ 24, 2021ರಲ್ಲಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದರು. ಅಗ ಅಲ್ಲಿ ಮಲಬಾರ್ ಹುಣಸೆ ಮರವನ್ನು ನಿಟ್ಟಿದ್ದರು. ಈ ಫೋಟೋವನ್ನು ಕಾವ್ಯಾ ಶೇರ್ ಮಾಡಿದ್ದಾರೆ.
ಮದುವೆ ನಂತರ ಬಣ್ಣದ ಪ್ರಪಂಚದಿಂದ ಕಾವ್ಯಾ ದೂರ ಉಳಿದುಬಿಟ್ಟಿದ್ದಾರೆ. ತಮ್ಮ ಜ್ಯುವೆಲರಿ ಡಿಸೈನ್ ಮತ್ತು ಪತಿಯ ಬ್ಯುಸಿನೆಸ್ ನೋಡಿಕೊಂಡ ಬ್ಯುಸಿಯಾಗಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಈ ರೀತಿ ಡಿಸೈನ್ ಇರುವ ಶರ್ಟ್ ಧರಿಸುವುದು ನೋಡಿದ್ದೀನಿ...ನೀವು ಇದರಲ್ಲಿ ಡ್ರೆಸ್ ಮಾಡಿಸಿಕೊಂಡಿದ್ದೀರಿ. ಇಷ್ಟು ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಶೋಕಿ ಕಲಿಸಬೇಡಿ ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ.