- Home
- Entertainment
- TV Talk
- ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!
ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!
Actress Jyothi Rai Photos: ಕಿನ್ನರಿ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಲೀಡ್ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಸಣ್ಣಗಾಗಿ, ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇಷ್ಟು ಚೆಂದ ಕಾಣಲು ಕಾರಣ ಏನು?

3 ವರ್ಷದ ಹಿಂದೆ ಸರ್ಪ್ರೈಸ್
ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿರುವ ಜ್ಯೋತಿ ರೈ ಅವರು ಚೂಡಿದಾರ, ಸೀರೆ ಧರಿಸಿ, ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಏಕಾಏಕಿ ಕಳೆದ ಮೂರು ವರ್ಷಗಳ ಹಿಂದೆ ಅವರು ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿ ಸರ್ಪ್ರೈಸ್ ನೀಡಿದ್ದರು.
ಹೈಸ್ಕೂಲ್‌ಗೆ ಹೋಗುವ ಮಗನಿದ್ದಾನೆ
ಜ್ಯೋತಿ ರೈ ಅವರಿಗೆ ವಯಸ್ಸು 41 ಆದರೂ, ಹೈಸ್ಕೂಲ್‌ಗೆ ಹೋಗುವ ಮಗನಿದ್ದರೂ ಕೂಡ, ಅವರು ಹೇಗೆ ಇಷ್ಟ ಸಣ್ಣಗಾದರು? ಅವರ ಸೌಂದರ್ಯ ಹೇಗೆ ಹೆಚ್ಚಾಗಿದೆ ಎಂದು ಅನೇಕರು ಆಶ್ಚರ್ಯಪಟ್ಟಿದ್ದರು.
ಬ್ಯೂಟಿ ಗುಟ್ಟೇನು?
ಜ್ಯೋತಿ ರೈ ಅವರು ಹೀಗೆ ಹಾಟ್ ಆಗಿ ಕಾಣಲು ಅಷ್ಟೇ ಕಷ್ಟಪಟ್ಟಿದ್ದಾರೆ. ಹೌದು, ಡಯೆಟ್, ವರ್ಕೌಟ್ ಜೊತೆಗೆ ಕನ್ಸಿಸ್ಟನ್ಸಿಯನ್ನು ಕೂಡ ಮೆಂಟೇನ್ ಮಾಡಿದ್ದಾರೆ. ಇದರಿಂದಲೇ ಅವರಿಗೆ ಅಂದ-ಚೆಂದ ಇನ್ನಷ್ಟು ಹೆಚ್ಚಾಗಿದೆ.
ಫಿಟ್‌ನೆಸ್ ಮುಖ್ಯ
ಜ್ಯೋತಿ ರೈ ಅವರು ನಿತ್ಯವೂ ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಇದರಿಂದಲೇ ಅವರು ಇಷ್ಟು ಚೆಂದ ಕಾಣಿಸುತ್ತಾರೆ. ಆರೋಗ್ಯ ವೃದ್ಧಿಗೂ, ಸೌಂದರ್ಯಯುತವಾಗಿ ಕಾಣಲು ಫಿಟ್‌ನೆಸ್ ಬೇಕೇ ಬೇಕು.
ಡಯೆಟ್ ಬೇಕು
ವರ್ಕೌಟ್‌ಗಿಂತ ಡಯೆಟ್ ಮುಖ್ಯವಾಗುತ್ತದೆ. ನಾವು ಎಷ್ಟು ಆರೋಗ್ಯವಾಗಿ ತಿನ್ನುತ್ತೀವೋ, ಅದು ನಮ್ಮ ಮುಖದಲ್ಲಿ ಕಾಣುತ್ತದೆ ಎನ್ನುತ್ತಾರೆ. ನಾವು ಜಂಕ್ ಫುಡ್ ತಿಂದರೆ, ಮುಖದಲ್ಲಿ ಸುಕ್ಕುಗಟ್ಟುವುದು, ಮೊಡವೆ ಏಳುವುದು ಆಗುವುದು, ಮುಖದಲ್ಲಿ ಕಾಂತಿ ಕೂಡ ಇರೋದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

