Actress Jyothi Rai: ಕನ್ನಡಕ್ಕೆ ಮರಳಿದ ನಟಿ ಜ್ಯೋತಿ ರೈ; ಚಿತ್ರದ ಫಸ್ಟ್ ಲುಕ್ ಔಟ್
ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ, 'ಹಲ್ಕಾ ಡಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಪ್ರಮೋದ್ ನಾಯಕರಾಗಿರುವ ಈ ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಇದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಕಿರುತೆರೆಯ ನಟಿ ಜ್ಯೋತಿ ರೈ
ಕಿರುತೆರೆಯ ನಟಿ ಜ್ಯೋತಿ ರೈ ಕನ್ನಡ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಹಲ್ಕಾ ಡಾನ್ ಸಿನಿಮಾ ಮೂಲಕ ಜ್ಯೋತಿ ರೈ ಮರಳಿದ್ದಾರೆ. ತೆಲಗು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಜ್ಯೋತಿ ರೈ ಬ್ಯುಸಿಯಾಗಿದ್ದಾರೆ.
ಹಲ್ಕಾ ಡಾನ್ ಸಿನಿಮಾ
ಪ್ರಮೋದ್ ನಟಿಸುತ್ತಿರುವ ಹಲ್ಕಾ ಡಾನ್ ಸಿನಿಮಾ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್, ನಟಿ ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವು ಕಲಾವಿದರು ನಟಸುತ್ತಿದ್ದಾರೆ. ಜ್ಯೋತಿ ರೈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದ ಫಸ್ಟ್ ಲುಕ್
ಈಗಾಗಲೇ ಹಲ್ಕಾ ಡಾನ್ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದ್ದು, ನಟ ಪ್ರಮೋದ್ ಲುಂಗಿ-ಬನಿಯನ್ ತೊಟ್ಟು, ಕೊರಳಲ್ಲಿ ಹಾರ, ಕೈಯಲ್ಲೊಂದು ಗನ್ ಹಿಡಿದುಕೊಂಡು ನಿಂತಿದ್ದಾರೆ. ಪ್ರಮೋದ್ ಜೊತೆಯಲ್ಲಿ ನಾಯಿ ಚಿತ್ರವೊಂದನ್ನು ಸಹ ತೋರಿಸಲಾಗಿದೆ. ಇದೊಂದು ಪಕ್ಕಾ ಲೋಕಲ್ ಕಥೆಯನ್ನೊಳಗೊಂಡಿರುವ ಸಿನಿಮಾ ಎಂದು ಮೊದಲ ಲುಕ್‌ನಲ್ಲಿ ಗೊತ್ತಾಗುತ್ತದೆ.
ಇದನ್ನೂ ಓದಿ: Bigg Boss Kannada 12: ಮನೆ ಮಂದಿಗೂ ಇಷ್ಟವಿಲ್ಲ, ವೀಕ್ಷಕರಿಗೂ ಬೇಸರ; ಯಾಕ್ ಹಿಂಗಾಯ್ತು?
ಚಿತ್ರದ ಮುಹೂರ್ತ ಸಮಾರಂಭ
ಇಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಸುದೀಪ್ ಮತ್ತು ಡಾಲಿ ಧನಂಜಯ್ ಸೇರಿದಂತೆ ಸಿನಿಮಾದ ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Rashmika Mandanna: ನನಗೆ ಯಾರನ್ನೂ ಅರ್ಧಂಬರ್ಧ ಲವ್ ಮಾಡೋಕೆ ಆಗಲ್ಲ; ಸಂಪೂರ್ಣವಾಗಿ ಕೊಟ್ಟುಬಿಡುತ್ತೇನೆ!
ನಾಯಕಿಯಾಗಿ ಅಮೃತ ಅಯ್ಯಂಗಾರ್
ಹಲ್ಕಾ ಡಾನ್ ಸಿನಿಮಾ ಚಲಾ ಎಂಬವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಕೆಪಿ ಶ್ರೀಕಾಂತ್ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಪ್ರಮೋದ್‌ಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಸೀತಾರಾಮ ಸೀರಿಯಲ್ ಸಿಹಿ ಎಂಟ್ರಿ: ಪುಟಾಣಿ ರಿತು ಸಿಂಗ್ಗೆ ಸಂಭಾವನೆ ಎಷ್ಟು? ಬಾಲಕಿ ಹೇಳಿದ್ದೇನು?