ಶತ್ರುಗಳನ್ನ ಕೊಲ್ಲಲು ನಿಮ್ಮ ಕಣ್ಣೇ ಸಾಕು, ದಿವ್ಯಾ ಉರುಡುಗಗೆ ಫ್ಯಾನ್ಸ್ ಕಮೆಂಟ್ಸ್!
ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿರುವ ದಿವ್ಯಾ ಉರುಡುಗ ಲೇಡಿ ಸೂಪರ್ ಸ್ಟಾರ್ ಆಗಿ ನಟಿಸುತ್ತಿರುವ ನಿನಗಾಗಿ ಸೀರಿಯಲ್ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.
ಸೀರಿಯಲ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿ, ಬಳಿಕ ಬಿಗ್ ಬಾಸ್ ಸೀಸನ್ 8 ರ ಮೂಲಕ ಜನಪ್ರಿಯತೆ ಪಡೆದ ನಟಿ ದಿವ್ಯಾ ಉರುಡುಗ (Divya Uruduga) ಇದೀಗ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿರುವ ಹೊಸ ಸೀರಿಯಲ್ ‘ನಿನಗಾಗಿ’ಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅಮ್ಮ ಹಾಕಿದ ಗೆರೆಯನ್ನು ದಾಟದ, ಅಮ್ಮನಿಗಾಗಿ ಎಲ್ಲವನ್ನೂ ಮಾಡುವ, ತನ್ನಿಷ್ಟವನ್ನೆಲ್ಲಾ ಮರೆತು ಅಮ್ಮನ ಇಷ್ಟವನ್ನು ನೆರವೇರಿಸುವ ಆದರೆ ಅಮ್ಮನ ಪ್ರೀತಿಯನ್ನೇ ಕಾಣದ ಮಗಳು ಹಾಗೂ ಸೂಪರ್ ಸ್ಟಾರ್ ನಾಯಕಿ 'ರಚನಾ’ (Rachana)ಆಗಿ ದಿವ್ಯಾ ಉರುಡುಗ ನಟಿಸಲಿದ್ದಾರೆ.
ಸದ್ಯ ಕಲರ್ಸ್ ಕನ್ನಡದಲ್ಲಿ ನಿನಗಾಗಿ ಪ್ರೊಮೋಷನ್ ಅದ್ಧೂರಿಯಾಗಿ ನಡೆಯುತ್ತಿದೆ. ಸೀರಿಯಲ್ ನಾಯಕಿ ಸಿನಿಮಾ ಹೀರೋಯಿನ್ ಆಗಿರೋದರಿಂದ ಅದೇ ರೀತಿಯ ಪೋಸ್ಟರ್ ಮಾಡಿ, ಸಿನಿಮಾ ನಾಯಕಿ ರಚನಾ ಬಗ್ಗೆ ಸಾಕಷ್ಟು ಮಾಹಿತಿ ಕೊಡುವ ಮೂಲಕ ವಿಭಿನ್ನವಾಗಿ ಸೀರಿಯಲ್ ಪ್ರಮೋಷನ್ ಮಾಡ್ತಿದೆ ಸೀರಿಯಲ್ ತಂಡ.
ಮ್ಯಾಗಝಿನ್ ಕವರ್ ಫೋಟೋವಾಗಿ ನಾಯಕಿಯನ್ನು ಪರಿಚಯಿಸುವ ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಭೇಷ್ ಅಂದಿದ್ದಾರೆ. ಚಿತ್ರರಂಗ ಎಂಬ ಮ್ಯಾಗಝೀನ್ ಕವರ್ ನಲ್ಲಿ ರಾರಾಜಿಸುವ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ನಾಯಕಿ ರಚನಾ ಎನ್ನುವ ಕ್ಯಾಪ್ಶನ್ ನೊಂದಿಗೆ, ಬೋಲ್ಡ್ ಲುಕ್ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಪ್ಪಟ ಕನ್ನಡತಿ, ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವುದಕ್ಕಾಗಿ, ಪರಭಾಷ ಚಿತ್ರಗಳ ಆಫರ್ ನಿರಾಕರಿಸಿದ ಕನ್ನಡತಿ ಎಂದು ನಾಯಕಿ ರಚನಾ ವಿವರಣೆ ನೀಡಲಾಗಿದೆ.
ದಿವ್ಯಾ ಉರುಡುಗ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿನ್ನ ಶತ್ರುಗಳನ್ನು ಕೊಲ್ಲಲು ನಿನ್ನ ಕಣ್ಣೇ ಸಾಕು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಸೀರಿಯಲ್ ಪೋಸ್ಟರ್ (Serial poster) ಳೇ ಅದ್ಭುತವಾಗಿವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ದಿವ್ಯಾ ಉರುಡುಗ ಸೀರಿಯಲ್ ಗೆ ಕಂಬ್ಯಾಕ್ ಮಾಡಿದುದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ರಚನಾ ವಿವಿಧ ಸಿನಿಮಾಗಳಲ್ಲಿ ನಟಿಸಿದಂತೆ ಕೂಡ ಪೋಸ್ಟರ್ ಶೇರ್ ಮಾಡಿದ್ದು, ಕೆಲವರು ಹೇಟರ್ಸ್ ಕೂಡ ನಿಮಗೆ ಫ್ಯಾನ್ ಆಗಬಹುದು. ಯು ರಾ ಸೂಪರ್ ಸ್ಟಾರ್ ಎಂದರೆ, ಮತ್ತೊಬ್ಬರು ಲೇಡಿ ಸೂಪರ್ ಸ್ಟಾರ್ (Lady Superstar)ಲುಕ್ ಸ್ಟನ್ನಿಂಗ್ ಆಗಿದೆ, ಪೋಸ್ಟರ್ ಗಳು ಅದ್ಭುತವಾಗಿವೆ ಎಂದು ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಇದೆ ಮೇ 27ರಂದು ಆರಂಭವಾಗಲಿರುವ ನಿನಗಾಗಿ ಸೀರಿಯಲ್ ನಲ್ಲಿ ಗಿಣಿರಾಮ ಧಾರಾವಾಹಿ ನಾಯಕ ರಿತ್ವಿಕ್ ಮಠದ್ ನಾಯಕನಾಗಿ ಮತ್ತು ಒಂದು ಮಗುವಿನ ತಂದೆಯಾಗಿ, ಫುಡ್ ಟ್ರಕ್ ನಡೆಸುವ ಸಾಮಾನ್ಯ ಮನುಷ್ಯನಾಗಿ ನಟಿಸುತ್ತಿದ್ದಾರೆ. ವಿಭಿನ್ನ ಕಥೆಯನ್ನು ಹೊಂದಿರುವ ಈ ಸೀರಿಯಲ್ ನಲ್ಲಿ ಇವರಿಬ್ಬರು ಹೇಗೆ ಒಂದಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕು.