- Home
- Entertainment
- TV Talk
- ಸಹನಟಿಯ ರೇ*ಪ್, ಕಾಮಿಡಿ ಕಿಲಾಡಿ ನಟ ಮಡೆನೂರು ಮನು ಬಂಧನ ಬೆನ್ನಲ್ಲೇ ಸ್ಫೋಟಕ ಆಡಿಯೋ ವೈರಲ್!
ಸಹನಟಿಯ ರೇ*ಪ್, ಕಾಮಿಡಿ ಕಿಲಾಡಿ ನಟ ಮಡೆನೂರು ಮನು ಬಂಧನ ಬೆನ್ನಲ್ಲೇ ಸ್ಫೋಟಕ ಆಡಿಯೋ ವೈರಲ್!
ಸಹ ನಟಿಯನ್ನು ಅತ್ಯಾ*ಚಾರ ಮಾಡಿ ದೈಹಿಕವಾಗಿ ಬಳಸಿಕೊಂಡಿರುವ ಆರೋಪದ ಮೇಲೆ ‘ಕಾಮಿಡಿ ಕಿಲಾಡಿ’ ಶೋ ಮೂಲಕ ಖ್ಯಾತಿ ಗಳಿಸಿದ್ದ ಸ್ಯಾಂಡಲ್‌ವುಡ್ ನಟ ಮಡೆನೂರು ಮನುವನ್ನು ಬಂಧಿಸಲಾಗಿದೆ. ನಟಿಯೊಬ್ಬರು ಮನು ವಿರುದ್ಧ ಅತ್ಯಾ*ಚಾರ ಪ್ರಕರಣದಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮನುವನ್ನು ಬಂಧಿಸಲಾಗಿದೆ.

ಸಹ ನಟಿಯನ್ನು ಅತ್ಯಾ*ಚಾರ ಮಾಡಿ ದೈಹಿಕವಾಗಿ ಬಳಸಿಕೊಂಡಿರುವ ಆರೋಪದ ಮೇಲೆ ‘ಕಾಮಿಡಿ ಕಿಲಾಡಿ’ ಶೋ ಮೂಲಕ ಖ್ಯಾತಿ ಗಳಿಸಿದ್ದ ಸ್ಯಾಂಡಲ್‌ವುಡ್ ನಟ ಮಡೆನೂರು ಮನುವನ್ನು ಬಂಧಿಸಲಾಗಿದೆ. ಕಿರುತೆರೆ ನಟಿಯೊಬ್ಬರು ನಟ ಮನು ವಿರುದ್ಧ ಅತ್ಯಾ*ಚಾರ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದ ಮನುವನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಾಸನ ಬಳಿಯ ಶಾಂತಿಗ್ರಾಮದ ಮಡೆನೂರು ಬಳಿ ಮನು ಬಂಧನವಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧನಕ್ಕೂ ಮುನ್ನಾ ಮಡೆನೂರು ಮನು ವಿಡಿಯೋ ಹೇಳಿಕೆ ನೀಡಿದ್ದು, ನನ್ನ ವಿರುದ್ಧ ಉದ್ದೇಶ ಪೂರ್ವಕವಾಗಿ FIR ಮಾಡ್ಸಿದ್ದಾರೆ. ನಾಳೆ (ಮೇ.23) ಸಿನಿಮಾ ರಿಲೀಸ್ ಇದ್ದು ಇವತ್ತು ಎಫ್ಐಆರ್ ಮಾಡಿಸೊ ಅವಶ್ಯಕತೆ ಇರಲಿಲ್ಲಾ. ಅವಳಿಗೆ ಒತ್ತಾಯ ಮಾಡಿ ದೂರು ಕೊಡಲು ತಿಳಿಸಿದ್ದಾರೆ. ಇಬ್ಬರು ನಟರು ಮತ್ತು ಒರ್ವ ಮಹಿಳೆಯಿಂದ ಪಿತೂರಿ ನಡೆದಿದೆ. ನನ್ನ ಸಾವು ಬಯಸುತ್ತಿದ್ದಾರೆ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದರ ಮಧ್ಯೆ ಮಡೆನೂರು ಮನು ಮತ್ತು ಸಹನಟಿ ಆಡಿಯೋ ವೈರಲ್ ಆಗಿದೆ. ಹಾಗಾದ್ರೆ ಆಡಿಯೋದಲ್ಲಿ ಏನಿದೆ ಗೊತ್ತಾ? ನಾನು ಕುಡಿದು ಬಂದು ಹೊಡಿತಿನಿ ಗಂಡನಿಗೆ ಹೊಡೆಯುವ ಅಧಿಕಾರ ಇದೆ. ಅವಳನ್ನ ಹೊಡಿತೀನಿ ಅವಳು ನನ್ನ ಹೆಂಡತಿ ಹೊಡೆಯುವ ಹಕ್ಕು ನನಗಿದೆ. ನಿಮ್ಮ ಸಿಟಿ ಕಡೆಯಲ್ಲಿ ಇಲ್ಲ ನಮ್ಮ ಹಳ್ಳಿ ಕಡೆ ಇದೆ ಎಂದು ಮನು ಹೇಳಿದ್ದಾನೆ. ಅವಳಿಗೆ ಏನು ಬೇಕು ತಂದುಕೊಡ್ತಿನಿ ಆದ್ರೆ ಅವಳು ದುಡಿದ ಹಣ ಎಲ್ಲವೂ ನನಗೆ ಕೊಡಬೇಕು. ಇನ್ಮುಂದೆ ನೀನು ದುಡಿದ ಹಣ ತಿಂಗಳ ಕೊನೆಗೆ ನನಗೆ ಕೊಡಬೇಕು. ನಾನು ಅವಳಿಗೆ ಮೋಸ ಮಾಡಲ್ಲ. ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ತೇನೆ. ಒಂದು ಕಾಲಕ್ಕೆ ಡಿವೋರ್ಸ್ ಕೊಡುವುದಾದ್ರೆ ಕಾನೂನು ಪ್ರಕಾರ ಕೊಡ್ತಿನಿ. ಮನು ಹಾಗೂ ಸಹನಟಿ ಹಾಗೂ ವ್ಯಕ್ತಿಯೋರ್ವ ಮಾತನಾಡಿರುವ ಆಡಿಯೋ ವೈರಲ್ ಸದ್ಯ ವೈರಲ್ ಆಗಿದೆ.
2018ನೇ ಸಾಲಿನಲ್ಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ಎಂಬುವರು ನನಗೆ ಪರಿಚಯ ಆಗಿ ಇಬ್ಬರು ಸ್ನೇಹಿತರಾಗಿರುತ್ತೇವೆ. ಸದರಿ ಮಡೆನೂರು ಮನು ಈತನು ಈಗಾಗಲೇ ದಿವ್ಯಾ ಎಂಬುವರನ್ನು ಮದುವೆ ಆಗಿ ಅವರಿಗೆ ಒಂದು ಹೆಣ್ಣು ಮಗು ಇದೆ. 29-11-2022 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಒಂದು ಕಾರ್ಯಕ್ರಮ ಇದ್ದು, ಸದರಿ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿರುತ್ತಾನೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಅತ್ಯಾ*ಚಾರ ಮಾಡಿರುತ್ತಾನೆ.
ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ ನಲ್ಲಿ ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿರುತ್ತಾನೆ. ನಂತರ ಅದೇ ಮನೆಯಲ್ಲಿ ಹಲವಾರು ಬಾರಿ ಅತ್ಯಾ*ಚಾರ ಮಾಡಿರುತ್ತಾನೆ. ಈ ನಡುವೆ ನಾನು ಪ್ರೆಗ್ನೆಂಟ್ ಆಗಿದ್ದು, ಇದನ್ನು ತಿಳಿದ ಮನು ಮನೆಗೆ ಬಂದು ನನಗೆ ಗರ್ಭಪಾತ ಆಗುವ ಮಾತ್ರೆ ನೀಡಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೆ ಮತ್ತೆ ನಾನು ಪ್ರೆಗ್ನೆಂಟ್ ಆಗಿದ್ದು, ಮತ್ತೆ ಗರ್ಭಪಾತ ಮಾಡಿಸಿರುತ್ತಾನೆ. ಅತ್ಯಾ*ಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಆತನ ಪೋನ್ನಲ್ಲಿ ರೆಕಾರ್ಡ್ ಮಾಡಿಕೊಂಡು ನನಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿರುತ್ತಾನೆ. ಆತನು ಒಂದು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಗಳನ್ನು ಮನುಗೆ ನೀಡಿರುತ್ತೇನೆ. ಆದ್ದರಿಂದ ಅತ್ಯಾ*ಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕ ಮಾಡಿ,ಗರ್ಭಪಾತ ಮಾಡಿಸಿ ಮೋಸ ಮಾಡಿದ್ದು, ಇದನ್ನು ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದಾನೆ