ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮನು ಮಡೆನೂರು ವಿರುದ್ಧ ಸಹನಟಿ ಲವ್, ಸೆಕ್ಸ್ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಮದುವೆ ಭರವಸೆ ನೀಡಿ ಮೂರು ವರ್ಷಗಳ ಕಾಲ ಅತ್ಯಾ*ಚಾರವೆಸಗಿ, ದೈಹಿಕವಾಗಿ ಬಳಸಿಕೊಂಡು, ಅವಹೇಳನ ಮಾಡಿ, ತಾಳಿ ಕಟ್ಟಿ ಮೋಸ ಮಾಡಿದ್ದಾರೆ ಎಂದು ಯುವತಿ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತಲೆಮರೆಸಿಕೊಂಡಿರುವ ಮನುಗಾಗಿ ಶೋಧ ನಡೆಸುತ್ತಿದ್ದಾರೆ.

ಸ್ಯಾಂಡಲ್‌ವುಡ್ ನಟ, ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವ ಭರವಸೆ ನೀಡಿ ಯುವತಿಗೆ ಮೂರು ವರ್ಷಗಳಿಂದ ಅತ್ಯಾ*ಚಾರ ಎಸಗಿದ ಆರೋಪ ಕೇಳಿಬಂದಿದೆ. ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಕಾಮಿಡಿ ಕಿಲಾಡಿ ಸೀಸನ್–೨’ ವಿಜೇತನಾಗಿದ್ದ ನಟ ಮನು ಅದೇ ರಿಯಾಲಿಟಿ ಶೋನಲ್ಲಿ ಪರಿಚಿತರಾದ ಸಹ ಕಲಾವಿದೆಯೊಂದಿಗೆ ಪ್ರೀತಿಯಲ್ಲಿ ತೊಡಗಿದ್ದರು. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ ಆರೋಪದ ಮೇಲೆ ಯುವತಿ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಹ ನಟಿ ಮಾತ್ರವಲ್ಲದೆ ಇತರ ಮಹಿಳೆಯರ ಜೊತೆಗೆ ಕೂಡ ನಟ ಮನು ಅನೈತಿಕ ಸಂಬಂಧ ಹೊಂದಿದ್ದ. ಈ ಸಂಬಂಧವನ್ನು ಪ್ರಶ್ನಿಸಿದಾಗ ‘ಬ್ರೇಕಪ್’ ಎಂದು ನಿರ್ಲಕ್ಷ್ಯ ತೋರಿಸಿದ್ದಾನೆ. ಯುವತಿಗೆ ತಾಳಿ ಕಟ್ಟಿದರೂ ಮದುವೆಯಾಗದೆ ವಂಚನೆ ಮಾಡಿದ ಆರೋಪವೂ ಇದೆ. ‘ದಪ್ಪಗೆ ಇದ್ದೀಯಾ ನೀನು ಚೆನ್ನಾಗಿಲ್ಲ’ ಎಂದು ಅವಹೇಳನ ಮಾಡಿದ್ದನ್ನು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಚಿತ್ರ‌ನಟ ಮನು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದ್ದು, 3 ವರ್ಷಗಳಿಂದ ಸಹ ಕಲಾವಿದೆ ಮೇಲೆ‌ ಅತ್ಯಾ*ಚಾರ ಎಸಗಿದ್ದಾನಂತೆ. ರಿಯಾಲಿಟಿ ಶೋ ನಲ್ಲಿ ಹೀರೋ ತರ ಮಿಂಚಿ ವಿನ್ನರ್ ಆದ ಮನು ರಿಯಲ್‌ ಲೈಫ್ ನಲ್ಲಿ ಖಳನಾಯಕನಾದ. 2018ರಲ್ಲಿ ಇವರಿಬ್ಬರ ಮಧ್ಯೆ ಪರಿಚಯವಾಗಿದೆ. ನಾವಿಬ್ಬರೂ ಬಹಳ ಒಳ್ಳೆಯ ಪ್ರೆಂಡ್ಸ್ ಆಗಿದ್ದೆವು. 2022ರ ನವೆಂಬರ್‌ ನಲ್ಲಿ ಶಿಕಾರಿಪುರಕ್ಕೆ ಹಾಸ್ಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹೊಟೇಲ್‌ ನಲ್ಲಿ ನಟ ಮನು ಬಲತ್ಕಾರ ಮಾಡಿದ್ದಾನೆ ಎಂದು ಸಹ ನಟಿ ಆರೋಪಿಸಿದ್ದಾರೆ. ಆ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಅತ್ಯಾ*ಚಾರ ಮಾಡಿದ ಆರೋಪ ಕೇಳಿಬಂದಿದೆ.

ದೈಹಿಕ ಕಿರುಕುಳ, ಹಲ್ಲೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ FIR ದಾಖಲಾಗಿದೆ. ಆರೋಪಿ ಮನು ಪರಾರಿಯಾಗಿದ್ದು, ಅವನಿಗಾಗಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಟ ಮನುಗೆ ಈಗಾಗಲೇ ಮದುವೆಯಾಗಿ ಮಗುವಿದೆ ಎನ್ನಲಾಗಿದೆ. ಹಾಗಿದ್ದರೂ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ನಟಿಸುತ್ತಿದ್ದ ನಟಿಯನ್ನು ನಂಬಿಸಿ ಪ್ರೀತಿಸಿ, ಅತ್ಯಾ*ಚಾರ‌ ಎಸಗಿ ವಂಚನೆ ಮಾಡಿದ್ದಾನೆ. ಶಿಕಾರಿಪುರಕ್ಕೆ ಹೋಗಿದ್ದಾಗ ರಿಯಾಲಿಟಿ ಶೋ ವೇಳೆಯೇ ಅತ್ಯಾ*ಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದಾಳೆ. ಅತ್ಯಾ*ಚಾರ ಎಸಗಿದ ಬಳಿಕ ದೂರು ಕೊಡುತ್ತೇನೆ ಎಂಬ ಭಯದಲ್ಲಿ ಮನೆಯಲ್ಲಿ‌ ತಾಳಿ ಕಟ್ಟಿದ್ದಾನೆ. ಸದ್ಯ FIR ದಾಖಲಿಸಿಕೊಂಡು ತನಿಖೆ ನಡೆಸ್ತಿರುವ ಪೊಲೀಸರು ಆರೋಪಿ ಮನುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನಾಳೆ ರಿಲೀಸ್‌ ಆಗಬೇಕಿದ್ದ ಸಿನೆಮಾ

ಇನ್ನು ಮಡೆನೂರು ಮನು ನಟಿಸಿದ್ದ ಕುಲದಲ್ಲಿ ಕೀಳ್ಯಾವುದೋ ಚಿತ್ರ ನಾಳೆ ಅಂದರೆ ಮೇ 23ರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನವೇ ಈ ಆರೋಪ ಕೇಳಿಬಂದಿದ್ದು, ಸದ್ಯ ಮನು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.