Kannada TV Actress Business : ಕಿರುತೆರೆ ನಿರೂಪಕಿ ಮತ್ತು ನಟಿಯರು ಬ್ಯುಸಿನೆಸ್ ಶುರು ಮಾಡಿದ ರೋಚಕ ಕಥೆ ಇದು!
ನೇಮ್, ಫೇಮ್ ಮತ್ತು ಫಾಲೋವರ್ಸ್ ಹೊಂದಿರುವ ಕಿರುತೆರೆ ಜನಪ್ರಿಯ ನಿರೂಪಕಿಯರು ಮತ್ತು ನಟಿಯರು ಉದ್ಯಮಿಗಳಾಗಿದ್ದಾರೆ. ತಮ್ಮದೇ ಕಂಪನಿ ನಡೆಸುತ್ತಿದ್ದು, 10ಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಎರಡು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರ ಪಟ್ಟಿ ಇಲ್ಲಿದೆ...
ಚೈತ್ರಾ ವಾಸುದೇವನ್: ನಿರೂಪಣೆ ಮಾಡುತ್ತಲೇ ಚೈತ್ರಾ ಈವೆಂಡ್ ಮ್ಯಾನೇಜ್‌ಮೆಂಟ್ ಕಂಪನಿ ತೆರೆದರು. ಈವೆಂಟ್ ಫ್ಯಾಕ್ಟರ್ ಹೆಸರಿನಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಐಷಾರಾಮಿ ಜನರಿಗೆ ಮಾತ್ರ ಅಂದುಕೊಳ್ಳಬೇಡಿ, ನಿಮ್ಮ ಬಜೆಟ್ ಹೇಳಿದರೆ, ಅದಕ್ಕೆ ತಕ್ಕಂತೆ ಕೆಲಸ ಮಾಡಿಕೊಟ್ಟು, ಹೆಚ್ಚೆಚ್ಚು ಮಂದಿಗೆ ಹತ್ತಿರವಾಗಿದ್ದಾರೆ.
ನೇಹಾ ಗೌಡ: ಬಹುತೇಕರಿಗೆ ನೇಹಾ ತಮ್ಮದೇ ಆಹಾರ ಕಂಪನಿ ಹೊಂದಿದ್ದಾರೆ ಎಂಬುವುದು ಗೊತ್ತಿಲ್ಲ. ಏಕೆಂದರೆ ಕ್ಲೌಡ್ ಕಿಚನ್ ಹೆಚ್ಚಿಗೆ ಕೆಲಸ ನಡೆಯುವುದು ರಾತ್ರಿ ಹೊತ್ತಿನಲ್ಲಿ. ಲೇಟ್ ನೈಟ್ ಪಾರ್ಟಿ ಮಾಡುವ ಫ್ರೀಕ್‌ಗಳಿಗೆ ಅಹಾರ ಡೆಲಿವರಿ ಮಾಡಲಾಗುತ್ತದೆ.
ಮಾನಸ ಜೋಶಿ: ಧಾರಾವಾಹಿ ಲೋಕದಲ್ಲಿ ಹೆಚ್ಚಾಗಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾನಸ ತಮ್ಮದೇ Kathak ನೃತ್ಯ ಶಾಲೆ ತೆರೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವವರಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಾರೆ.
ದೀಪಿಕಾ ದಾಸ್: ಧಾರಾವಾಹಿ ಮತ್ತು ಬಿಗ್ ಬಾಸ್‌ನಲ್ಲಿ ದೀಪಿಕಾ ಧರಿಸಿದ್ದ ಬಟ್ಟೆಗಳನ್ನು ವೀಕ್ಷಕರು ಮೆಚ್ಚುತ್ತಿದ್ದರು. ಹೀಗಾಗಿ ಸಾಂಪ್ರದಾಯಿಕೆ ಉಡುಗೆ, ಮಾಡ್ರನ್ ಮತ್ತು ಕ್ಯಾಶುಯಲ್ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಜ್ಯುವೆಲರಿ ಕೂಡ ಶುರು ಮಾಡಿದ್ದಾರೆ.
ಶ್ವೇತಾ ಪ್ರಸಾದ್: ರಾಧಾ ರಮಣ ಧಾರಾವಾಹಿಯಿಂದ ಹೊರ ಬಂದ ನಂತರ ಶ್ವೇತಾ ಕೃಷಿ ಮತ್ತು Organic Products ಕಡೆ ಗಮನ ಕೊಟ್ಟರು. ತ್ವಚೆಯಿಂದ ಹಿಡಿದು ದೈನಂದಿನ ಅಗತ್ಯ ವಸ್ತುಗಳವರೆಗೆ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.
ಶ್ವೇತಾ ಚಂಗಪ್ಪ: ಕಿರುತೆರೆಯ ಸುಂದರ ರಾಣಿ ಶ್ವೇತಾ ಎರಡು ಬ್ಯುಸಿನೆಸ್ ಮಾಡುತ್ತಾರೆ. ಒಂದು ಬೆಂಗಳೂರಿನ ಬಹುತೇಕ ಸ್ಥಳದಲ್ಲಿ ಸ್ಪಿನ್ ಸಲೂನ್ ನಡೆಸುತ್ತಾರೆ ಮತ್ತೊಂದು ಡಿಸೈನರ್ ಸೀರೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾರೆ.