ಪ್ರತಿಯೊಬ್ಬ ಕಪಲ್ಸ್ ಮಿಸ್ ಮಾಡದೇ ಜೊತೆಯಾಗಿ ನೋಡಲೇ ಬೇಕಾದ 5 Best Series
5 Best Series: ನಿವು ವೆಬ್ ಸೀರೀಸ್ ಗಳನ್ನು ನೋಡಲು ಇಷ್ಟಪಡುವವರಾಗಿದ್ರೆ, ನಿಮ್ಮ ಸಂಗಾತಿ ಜೊತೆ ಅಂದ್ರೆ ಪತಿ-ಪತ್ನಿಯೂ ಆಗಿರಬಹುದು, ಅಥವಾ ಪ್ರೇಮಿಗಳೂ ಆಗಿರಬಹುದು. ಜೊತೆಯಾಗಿ ನೋಡಬಹುದಾದಂತಹ ಒಂದಷ್ಟು ವೆಬ್ ಸೀರೀಸ್ ಗಳು ಇಲ್ಲಿವೆ.

ವೆಬ್ ಸೀರೀಸ್
ಇತ್ತೀಚಿನ ದಿನಗಳಲ್ಲಂತೂ ವೆಬ್ ಸೀರೀಸ್ ಗಳನ್ನೇ ಜನ ಇಷ್ಟಪಡುತ್ತಾರೆ. ನೀವು ಕೂಡ ಸೀರೀಸ್ ಗಳನ್ನು ಇಷ್ಟಪಡುವವರಾಗಿದ್ದರೆ. ಈ ಪುಟಾಣಿ ಸೀರೀಸ್ ಗಳು ನಿಮಗಾಗಿ. ನಿಮ್ಮ ಸಂಗಾತಿ ಜೊತೆ ನೀವು ಮಿಸ್ ಮಾಡದೇ ನೋಡಬಹುದಾದ ಸುಂದರವಾದ ಸೀರೀಸ್ ಗಳಿವು.
Little Things
ಧ್ರುವ ಮತ್ತು ಕಾವ್ಯ ನಡುವಿನ ಬಾಂಧವ್ಯವು ಪ್ರೀತಿ ಅನ್ನೋದು ಸಣ್ಣ ಪುಟ್ಟ ವಿಷಯಗಳಲ್ಲೇ ಅಡಗಿದೆ ಅನ್ನೋದನ್ನು ತೋರಿಸುತ್ತದೆ. , ಈ ಜೋರಿ, ಪ್ರೀತಿ, ಕೆಲಸ, ಅಡಲ್ಟ್ ಹುಡ್ ಎಲ್ಲವನ್ನೂ ಹೇಗೆ ಸರಿದೂಗಿಸಿಕೊಂಡು ಹೋಗುವುದು ಅನ್ನೋದನ್ನು ಮಾಡರ್ನ್ ಪ್ರೀತಿಯನ್ನು ತೋರಿಸುತ್ತದೆ.
Permanent Roommates
ಇದು ಕೂಡ ಆಧುನಿಕ ಪ್ರೀತಿ ಮತ್ತು ಸಂಬಂಧ, ಮದುವೆ ಕುರಿತಾದ ಸೀರೀಸ್ ಆಗಿದೆ. ಇಲ್ಲಿ ತಾನ್ಯ ಮತ್ತು ಮಿಕೇಶ್ ಪ್ರೀತಿ, ಕಮೀಟ್ ಮೆಂಟ್ ಮತ್ತು ಜೊತೆಯಾಗಿ ಜೀವಿಸಲು ಆರಂಭಿಸಿದ ಮೇಲೆ ಏನೇನು ಆಗುತ್ತೆ ಅನ್ನೋದನ್ನು ಕಾಮಿಡಿ ಜೊತೆ ಇಮೋಷನ್ಸ್ ಜೊತೆಗೆ ತಿಳಿಸಿದ್ದಾರೆ.
Flames
ಮೊದಲ ಕ್ರಶ್, ಮೊದಲ ಮುತ್ತು, ಮೊದಲ ಹಾರ್ಟ್ ಬ್ರೇಕ್ ಕಥೆ ಇದಾಗಿದೆ. *ಹದಿಹರೆಯದ ಪ್ರೀತಿಯ ಅತ್ಯಂತ ಮಧುರವಾದ ನಾಸ್ಟಾಲ್ಜಿಯಾ ಇದು. ಟ್ಯೂಶನ್ ಸೆಂಟರಲ್ಲಿ ಶುರುವಾಗುವ ಟೀನೇಜ್ ಮಕ್ಕಳ ಪ್ರೀತಿ ಪ್ರೇಮದ ಕಥೆ ಇದು.
Mismatched
ಒಬ್ಬರಿಗೊಬ್ಬರೂ ವಿರುದ್ಧ ಸ್ವಭಾವದ ಡಿಂಪಲ್ ಮತ್ತು ರಿಷಿ, ಕೋಡಿಂಗ್ ಕ್ಯಾಂಪ್ ನಲ್ಲಿ ಜೊತೆಯಾಗುತ್ತಾರೆ. ನಂತರ ಇಬ್ಬರ ನಡುವೆ, ನಡೆಯುವ ಸ್ನೇಹ, ಪ್ರೀತಿ, ಸ್ವ ಬೆಳವಣಿಗೆ ಎಲ್ಲವನ್ನೂ ಇಲ್ಲಿ ತೋರಿಸಲಾಗಿದೆ
Broken but beautiful
ಕೆಲವೊಮ್ಮೆ ಪ್ರೀತಿ ಕೊನೆಗೊಳ್ಳುವುದಿಲ್ಲ, ಅದು * ನಿಮ್ಮನ್ನು ಹೊಸ ರೀತಿಯಲ್ಲಿ ಬೆಳೆಯುವಂತೆ ಮಾಡುತ್ತೆ ಎನ್ನುವ ಕತೆ ಇದಾಗಿದೆ. ಇದು ಹಾರ್ಟ್ ಬ್ರೇಕ್, ಹೀಲಿಂಗ್ ಮತ್ತು ಪ್ರೀತಿಯಲ್ಲಿ ಸೆಕೆಂಡ್ ಚಾನ್ಸ್ ನೀಡಿದಾಗ ಏನಾಗುತ್ತದೆ ಅನ್ನೋದನ್ನು ತೋರಿಸುತ್ತದೆ. .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

