- Home
- Entertainment
- TV Talk
- Must-Watch Underrated Web Series: ನೋಡೋಕೆ ಶುರು ಮಾಡಿದ್ರೆ ಇವತ್ತೆ ಎಲ್ಲಾ ಎಪಿಸೋಡ್ ಮುಗಿಸ್ತೀರಿ
Must-Watch Underrated Web Series: ನೋಡೋಕೆ ಶುರು ಮಾಡಿದ್ರೆ ಇವತ್ತೆ ಎಲ್ಲಾ ಎಪಿಸೋಡ್ ಮುಗಿಸ್ತೀರಿ
Underrated Web series: ಕೆಲವೊಂದು ವೆಬ್ ಸೀರೀಸ್ ಗಳು ಹೆಚ್ಚು ಹೆಸರು, ಜನಪ್ರಿಯತೆ ಗಳಿಸೋದಿಲ್ಲ. ಆದರೆ ಆ ಸೀರೀಸ್ ಗಳು ಉತ್ತಮವಾದ ಕಥೆಯನ್ನು ಹೊಂಡಿರುವ ಬೆಸ್ಟ್ ಥ್ರಿಲ್ಲರ್ ಗಳಾಗಿರುತ್ತವೆ. ಅಂತಹ ಒಂದಿಷ್ಟು ಅಂಡರ್ ರೇಟೆಡ್ ವೆಬ್ ಸೀರೀಸ್ ಬಗ್ಗೆ ಇಲ್ಲಿದೆ ಮಾಹಿತಿ.

ವೆಬ್ ಸೀರೀಸ್
ನೀವು ನೋಡಲೇಬೇಕಾದ ಕೆಲವು ಅಂಡರ್ ರೇಟೆಡ್ ವೆಬ್ ಸೀರೀಸ್ ಬಗ್ಗೆ ಇಲ್ಲಿದೆ ಮಾಹಿತಿ. ನೀವು ವೆಬ್ ಸರಣಿ ಪ್ರಿಯರಾಗಿದ್ರೆ, ಈ ಸೀರೀಸ್ ನೋಡೋದನ್ನು ಮರಿಬೇಡಿ.
ಬ್ರೀತ್ ಇಂಟು ದಿ ಶಾಡೋಸ್
6 ವರ್ಷದ ಬಾಲಕಿಯನ್ನು ನಿಗೂಢ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಅಪಹರಿಸುತ್ತಾನೆ, ಆತ ವಿಚಿತ್ರವಾದ ಡಿಮಾಂಡ್ ಇಟ್ಟಿದ್ದು. ತನ್ನ ಮಗಳನ್ನು ಉಳಿಸಲು, ಡಾ. ಅವಿನಾಶ್ ಸಭರ್ವಾಲ್ ಯಾರನ್ನಾದರೂ ಕೊಲ್ಲಬೇಕು! ಮುಂದೆ ಡಾಕ್ಟರ್ ಏನು ಮಾಡ್ತಾರೆ ಅನ್ನೋದು ಕಥೆ.
ಪಾತಾಲ್ ಲೋಕ್
ಪತ್ರಕರ್ತನ ಮೇಲಿನ ಹತ್ಯೆ ಯತ್ನದ ಪ್ರಕರಣವನ್ನು ಪೊಲೀಸ್ ಅಧಿಕಾರಿಗೆ ವಹಿಸಲಾಗುತ್ತದೆ. ನಾಲ್ವರು ಶಂಕಿತರು ಪರಾರಿಯಾಗುವಾಗ, ಅಧಿಕಾರಿ ಅವರನ್ನು ಹಿಂಬಾಲಿಸಿ ಪಾತಾಳ್ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಮತ್ತೆ ಇರೋದೆಲ್ಲಾ ಸಸ್ಪೆನ್ಸ್ ಕ್ರೈಂ.
ದೆಹಲಿ ಕ್ರೈಂ
ದೆಹಲಿ ಸಾಮೂಹಿಕ ಅ*ತ್ಯಾಚಾರ ಪ್ರಕರಣವನ್ನು ಆಧರಿಸಿದ ಈ ಕ್ರೈಮ್ ಡ್ರಾಮಾ, ಅಪರಾಧ ಎಸಗಿದ ಪುರುಷರ ಪತ್ತೆಗಾಗಿ ದೆಹಲಿ ಪೊಲೀಸರ ತನಿಖೆಯ ಕಥೆಯನ್ನು ಹೇಳುತ್ತೆ. ಇದು ನೋಡಲು ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.
ಜುಬ್ಲಿ
ಜುಬ್ಲಿ ಸರಣಿಯು ಸ್ವಾತಂತ್ರ್ಯದ ನಂತರದ ಭಾರತದ ಚಲನಚಿತ್ರೋದ್ಯಮದ ಆರಂಭಿಕ ವರ್ಷಗಳಲ್ಲಿ ನಡೆಯುವ ಕಾಲ್ಪನಿಕ ಹಿಂದಿ ನಾಟಕವಾಗಿದ್ದು, ಸ್ಟುಡಿಯೋ ವ್ಯವಸ್ಥೆಯಲ್ಲಿರುವವರು ಮಹತ್ವಾಕಾಂಕ್ಷೆ, ಪ್ರೀತಿ ಮತ್ತು ದ್ರೋಹವನ್ನು ಎದುರಿಸುವಾಗ ಅವರ ಜೀವನದಲ್ಲಿ ಏನೇನು ನಡೆಯುತ್ತೆ ಅನ್ನೋದು ಕಥೆ.
ಕ್ರಿಮಿನಲ್ ಜಸ್ಟೀಸ್
ಟ್ಯಾಕ್ಸಿ ಚಾಲಕನಾದ ಆದಿತ್ಯ, ತನ್ನ ಪ್ಯಾಸೆಂಜರ್ ಸನಯಾ ಜೊತೆ ಒನ್ ನೈಟ್ ಸ್ಟಾಂಡ್ ಮಾಡುತ್ತಾನೆ. ಆದರೆ, ಅವನು ಎಚ್ಚರಗೊಂಡಾಗ ಆಕೆಯ ರಕ್ತದ ಮಡುವಿನಲ್ಲಿ ಆತನಿದ್ದು, ಅವಳ ಶವ ಅವನ ಪಕ್ಕದಲ್ಲಿರುತ್ತದೆ. ಇದರಿಂದ ಆದಿತ್ಯ ಹೇಗೆ ಹೊರ ಬರುತ್ತಾನೆ ಅನ್ನೋದು ಕಥೆ.
ದಿ ರೈಲ್ವೆ ಮೆನ್
ಭೋಪಾಲ್‌ನ ಕಾರ್ಖಾನೆಯಿಂದ ಮಾರಕ ಅನಿಲ ಸೋರಿಕೆಯಾದ ನಂತರ, ಧೈರ್ಯಶಾಲಿ ರೈಲ್ವೆ ಕಾರ್ಮಿಕರು ಗಂಭೀರ ವಿಪತ್ತನ್ನು ಎದುರಿಸುವಾಗ ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇದೊಂದು ರೋಚಕ ಸರಣಿಯಾಗಿದೆ.
ಕಾಲ್ ಕೂಟ್
ಆಸಿಡ್ ದಾಳಿಯ ಹಿಂದಿನ ಅಪರಾಧಿಯನ್ನು ಕಂಡುಹಿಡಿಯುವುದರ ಸುತ್ತ ಕಥೆ ಸುತ್ತುತ್ತದೆ. ಆಸಿಡ್ ದಾಳಿಯಲ್ಲಿ ಹಿಂದೆ ನಡೆದ 28 ಪ್ರಕರಣಗಳಲ್ಲಿ ಕೇವಲ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ, ಅದನ್ನು ಕಂಡುಹಿಡಿಯುವಲ್ಲಿ ವೈಫಲ್ಯವೇ ಹೆಚ್ಚಾಗಿರುತ್ತದೆ. ಅದರ ಹಿಂದಿನ ಕಥೆ ಇದಾಗಿದೆ.
ಸಪ್ನೆ VS ಎವ್ರಿಒನ್
ಪ್ರಶಾಂತ್ ಮತ್ತು ಜಿಮ್ಮಿ ದೊಡ್ಡ ಡ್ರೀಮರ್ ಆಗಿರುತ್ತಾರೆ., ಅವರಿಬ್ಬರ ನಡುವೆ ಘರ್ಷಣೆ ಉಂಟಾಗಿ, ದಾರಿ ಬೇರೆಯಾದಾಗ, ಹೆಚ್ಚಿನ ಅಡೆತಡೆಗಳು ಎದುರಾಗುತ್ತವೆ ಮತ್ತು ಅವರ ಕನಸುಗಳನ್ನು ಸಾಧಿಸುವುದು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸವಾಲಿನದಾಗಿರುತ್ತ್ತೆ. ಮುಂದೆ ಅವರು ಸವಾಲನ್ನು ಹೇಗೆ ಗೆಲ್ಲುತ್ತಾರೆ ಅನ್ನೋದು ಕಥೆ. .
ಕೌಫ್
ಒಬ್ಬ ಯುವತಿಯು ದೆಹಲಿಗೆ ಸ್ಥಳಾಂತರಗೊಂಡು, ಅಲ್ಲಿ ಹಾಸ್ಟೆಲ್ ಕೋಣೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಾಳೆ. ಆದರೆ ಆ, ಕೋಣೆಯ ನಿಗೂಢ ಭೂತಕಾಲವು ಮಹಿಳೆಯ ಜೀವನದಲ್ಲಿ ವಿಚಿತ್ರ ಘಟನೆಗಳನ್ನು ಎದುರಿಸುವಂತೆ ಮಾಡುತ್ತೆ.