- Home
- Entertainment
- Cine World
- Best Web Series 2025: ಕೂತಲ್ಲೇ ಕೂರಿಸಿ, ಸ್ವಲ್ಪವೂ ಮಿಸುಕಾಡದಂತೆ ಮಾಡೋ ಬೆಸ್ಟ್ ವೆಬ್ ಸಿರೀಸ್‌ಗಳಿವು!
Best Web Series 2025: ಕೂತಲ್ಲೇ ಕೂರಿಸಿ, ಸ್ವಲ್ಪವೂ ಮಿಸುಕಾಡದಂತೆ ಮಾಡೋ ಬೆಸ್ಟ್ ವೆಬ್ ಸಿರೀಸ್‌ಗಳಿವು!
ಈ ಬಾರಿ ಒಟಿಟಿ ವೇದಿಕೆಗೆ ಐತಿಹಾಸಿಕ ವರ್ಷವಾಗಿದೆ. ರೋಮ್ಯಾಂಟಿಕ್, ಕಂಟೆಂಟ್ ಆಧಾರಿತ, ಆಕ್ಷನ್, ಸಸ್ಪೆನ್ಸ್, ಹಾರರ್, ಕಾಮಿಡಿ ಥ್ರಿಲ್ಲರ್ ಸಿನಿಮಾಗಳು ರಿಲೀಸ್ ಆಗಿವೆ. 2025ರಲ್ಲಿ ನೀವು ನೋಡಲೇಬೇಕಾದ ವೆಬ್ ಸಿರೀಸ್‌ಗಳಿವು!

ಯಾವ ವೆಬ್ ಸಿರೀಸ್‌ನಲ್ಲಿ ಏನು ಕಥೆ ಇದೆ?
ಈ ವರ್ಷ ನೀವು ಒಟಿಟಿಯಲ್ಲಿ ನೋಡಲೇಬೇಕಾದ ವೆಬ್ ಸಿರೀಸ್‌ಗಳಿವು! ಯಾವ ವೆಬ್ ಸಿರೀಸ್‌ನಲ್ಲಿ ಏನು ಕಥೆ ಇದೆ?
ಚೌರಾಹ (ಜಿಯೋಸಿನಿಮಾ)
ಸೈಕಲಾಜಿಕಲ್ ಥ್ರಿಲ್ಲರ್ ಇದಾಗಿದೆ
ನಿರ್ದೇಶಕ: ನೀರಜ್ ಪಾಂಡೆ
ನಾಲ್ಕು ಅಪರಿಚಿತರು ಹೈವೇ ಡಾಬಾದಲ್ಲಿ ಭೇಟಿಯಾಗಿ, ಅವರೆಲ್ಲರೂ ಒಂದು ಸೀಕ್ರೇಟ್‌ಗೆ ರಿಲೇಟ್ ಆಗಿರೋದು ಗೊತ್ತಾಗುವುದು. ಈ ಸರಣಿಯು ರೋಮಾಂಚಕ ಟ್ವಿಸ್ಟ್, ಅವಿಶ್ವಸನೀಯ ಸ್ಟೋರಿ ಟೆಲ್ಲರ್, ನೈತಿಕ ಸಂದಿಗ್ಧತೆಯಿಂದ ಕೂಡಿದೆ.
ದಿ ಟೆಸ್ಟ್ ಕೇಸ್: ಸೀಸನ್ 2 (ಆಲ್ಟ್ ಬಾಲಾಜಿ/ಜೀ5)
ಆಕ್ಷನ್ ಡ್ರಾಮಾ ಇದಾಗಿದೆ.
ನಿಮ್ರತ್ ಕೌರ್, ಸಾಯನಿ ಗುಪ್ತಾ, ಜಿಮ್ ಸರ್ಭ್ ನಟಿಸಿದ್ದಾರೆ.
ಓರ್ವ ಮಹಿಳಾ ನೌಕಾಪಡೆ ಅಧಿಕಾರಿಯು ಆಳ ಸಮುದ್ರದ ರಹಸ್ಯ ಕಾರ್ಯಾಚರಣೆ ಮಾಡುತ್ತಾಳೆ. ನಾಯಕತ್ವ, ರಾಷ್ಟ್ರೀಯತೆ, ಯುದ್ಧ ಘಟಕಗಳಲ್ಲಿ ಲಿಂಗ ಭೇದದಂತಹ ಥೀಮ್‌ಗಳ ಕುರಿತ ಕಥೆ ಇದಾಗಿದೆ. ಆರನೇ ಎಪಿಸೋಡ್‌ನ ಜಲಾಂತರ್ಗಾಮಿ ಆಕ್ಷನ್ ದೃಶ್ಯವು ಸಖತ್ ಆಗಿದೆ.
ಕೋಟಾ ಫ್ಯಾಕ್ಟರಿ: ಸೀಸನ್ 3 (ನೆಟ್‌ಫ್ಲಿಕ್ಸ್)
ಕಮಿಂಗ್ ಆಫ್ ಏಜ್ ಡ್ರಾಮಾ
ಮಯೂರ್ ಮೋರೆ, ಜಿತೇಂದ್ರ ಕುಮಾರ್ ನಟಿಸಿದ್ದಾರೆ. ಐಐಟಿ ಪರೀಕ್ಷೆಯ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳ ಒತ್ತಡ, ಆತಂಕ, ಯಶಸ್ಸಿನ ನಿಜವಾದ ಅರ್ಥ ಇಲ್ಲಿದೆ. ಬ್ಲ್ಯಾಕ್ & ವೈಟ್ ದೃಶ್ಯಗಳು, ಭಾವನಾತ್ಮಕ ಕಥಾಹಂದರವು ಇಲ್ಲಿದೆ. ಜೀತು ಭೈಯಾನ ಐದನೇ ಎಪಿಸೋಡ್‌ನ ಸ್ಫೂರ್ತಿದಾಯ ಮಾತುಕತೆ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಮೇಡ್ ಇನ್ ಹೆವನ್: ಸೀಸನ್ 3 (ಅಮೆಜಾನ್ ಪ್ರೈಮ್ ವಿಡಿಯೋ)
ಡ್ರಾಮಾ, ಸಾಮಾಜಿಕ ವಿಮರ್ಶೆ ಇದಾಗಿದೆ. ಅರ್ಜುನ್ ಮಾಥುರ್, ಶೋಭಿತಾ ಧುಲಿಪಾಲ ನಟಿಸಿದ್ದಾರೆ.
ತಾರಾ, ಕರಣ್‌ರ ಕಥೆಯ್ನೊಳಗೊಂಡ ಈ ಸೀಸನ್‌ನಲ್ಲಿ ಜಾಗತಿಕ ವಿವಾಹಗಳು, ಎಲ್‌ಜಿಬಿಟಿಕ್ಯೂ+ ಕಥೆಗಳು, ಭಾರತೀಯ ಶ್ರೀಮಂತ ಸಮಾಜದ ಸೀಕ್ರೇಟ್ ರೂಲ್ಸ್ ಬಗ್ಗೆ ಇದೆ. ಜಾತಿ, ಲಿಂಗ ಗುರುತು, ತಲೆಮಾರಿನ ಆಘಾತದಂತಹ ವಿಷಯಗಳನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸಲಿಂಗಿ ವಿವಾಹದ ಎಪಿಸೋಡ್ ವೈರಲ್ ಆಗಿದೆ.
ದೆಹಲಿ ಕ್ರೈಮ್: ಸೀಸನ್ 3 (ನೆಟ್‌ಫ್ಲಿಕ್ಸ್)
ಇದು ಕ್ರೈಮ್ ಡ್ರಾಮಾ
ಶೆಫಾಲಿ ಶಾ, ರಸಿಕಾ ದುಗಲ್ ನಟಿಸಿದ್ದಾರೆ.
ಈ ಸೀಸನ್‌ನಲ್ಲಿ ಸಿವರ್ತಿಕಾ ಚತುರ್ವೇದಿ (ಶೆಫಾಲಿ ಶಾ) ರಾಜಕಾರಣಿಗಳನ್ನು ಗುರಿಯಾಗಿರಿಸಿಕೊಳ್ಳುತ್ತಾರೆ. ಸರಣಿ ಕೊಲೆಗಾರನ ಪ್ರಕರಣದ ತನಿಖೆ ಆಗುವುದು. ನೈಜ ಘಟನೆಗಳಿಂದ ಸ್ಫೂರ್ತಿಗೊಂಡಿದೆ. ಇಲ್ಲಿ ಭ್ರಷ್ಟಾಚಾರ, ನ್ಯಾಯ, ಮೋಕ್ಷದ ಥೀಮ್ ಇದೆ. ಈ ಸಿರೀಸ್ ಕೊನೆಯ ಎಪಿಸೋಡ್ ಭಾವನಾತ್ಮಕವಾಗಿ ತೀವ್ರವಾಗಿದೆ.
ಪ್ರಾಜೆಕ್ಟ್ Z (ನೆಟ್‌ಫ್ಲಿಕ್ಸ್)
ಡಿಸ್ಟೋಪಿಯನ್ ಸೈ-ಫೈ ಥ್ರಿಲ್ಲರ್ ಇದಾಗಿದೆ
ರಾಧಿಕಾ ಆಪ್ಟೆ ನಟಿಸಿದ್ದಾರೆ.
ಈ ವೆಬ್ ಸಿರೀಸ್ ಪೋಸ್ಟ್ ಅಪೋಕ್ಯಾಲಿಪ್ಟಿಕ್ ಮುಂಬೈನಲ್ಲಿ ನಡೆಯುತ್ತದೆ. ಸರ್ಕಾರಿ ಪ್ರಯೋಗವೊಂದರಿಂದ ಮಾನವ ಗ್ರಹಿಕೆಯನ್ನು ಬದಲಾಯಿಸಿದ ವಿಜ್ಞಾನಿಯೊಬ್ಬರ (ರಾಧಿಕಾ ಆಪ್ಟೆ) ಕಥೆ ಇಲ್ಲಿದೆ. ರೋಮಾಂಟಿಕ್ ಸ್ಟೋರಿ, ವಿಶ್ಯುವಲ್ ಎಫೆಕ್ಟ್, ಸೋಶಿಯಲ್, ಪೊಲಿಟಿಕಲ್ ವಿಷುವೂ ಇಲ್ಲಿದೆ. ವಿಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಹಣವು ಈ ಸಿರೀಸ್‌ನ ವಿಶೇಷತೆಯಾಗಿದೆ.
ಮಿರ್ಜಾಪುರ್: ಸೀಸನ್ 3 (ಅಮೆಜಾನ್ ಪ್ರೈಮ್ ವಿಡಿಯೋ)
ಆಕ್ಷನ್, ಕ್ರೈಮ್ ಡ್ರಾಮಾ ಆಧಾರಿತ ಸಿರೀಸ್ ಇದಾಗಿದೆ
ಕಲಾವಿದರು: ಪಂಕಜ್ ತ್ರಿಪಾಠಿ, ಅಲಿ ಫಜಲ್, ರಸಿಕಾ ದುಗಲ್
ಮಿರ್ಜಾಪುರ್ ವೆಬ್ ಸಿರೀಸ್ ಎರಡು ವರ್ಷಗಳ ಬಳಿಕ ತನ್ನ ಮೂರನೇ ಸೀಸನ್ ಪ್ರಸಾರ ಮಾಡಿತ್ತು. ಪೂರ್ವಾಂಚಲದ ಭೂಗತ ಲೋಕದ ರೋಮಾಂಚಕ ಕಥೆ ಇಲ್ಲಿಯೂ ಮುಂದುವರೆದಿದೆ. ಗುಡ್ಡು ಪಂಡಿತ್ (ಅಲಿ ಫಜಲ್) ಈಗ ಹೆಚ್ಚು ಕ್ರೂರಿಯಾಗಿದ್ದಾನೆ, ಕಾಲೀನ್ ಭೈಯಾನ (ಪಂಕಜ್ ತ್ರಿಪಾಠಿ) ಅವ್ರಿಂದ ಉಂಟಾದ ಅಧಿಕಾರದ ಶೂನ್ಯತೆಯು ಹೊಸ ಹಿಂಸೆ, ದ್ರೋಹಕ್ಕೆ ಕಾರಣವಾಗಿದೆ. ಈ ಸೀಸನ್‌ಲ್ಲಿ ಆಳವಾದ ಪಾತ್ರ ವಿಶ್ಲೇಷಣೆ, ರಾಜಕೀಯ ಸೂಕ್ಷ್ಮತೆಗವೆ. ರಸಿಕಾ ದುಗಲ್ ಅವರು ನಿಭಾಯಿಸಿರೋ ಬೀನಾ ತ್ರಿಪಾಠಿಯ ಪಾತ್ರವು ಹೀರೋಯಿನ್ ಪಾತ್ರಕ್ಕೆ ಹೊಸ ಆಯಾಮ ಕೊಟ್ಟಿದೆ.