ಅಗ್ನಿಸಾಕ್ಷಿಗೆ 11 ವರ್ಷ! ಕನ್ನಡ ಕಿರುತೆರೆ ಇತಿಹಾಸದಲ್ಲೇ ಇಂಥ ಸೂಪರ್ ಹಿಟ್ ಸೀರಿಯಲ್ ಬೇರೊಂದಿಲ್ಲ ಅಂತಿದ್ದಾರೆ ಫ್ಯಾನ್ಸ್!
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಪ್ರಸಾರವಾಗಿ ಬರೋಬ್ಬರಿ 11 ವರ್ಷ ಪೂರ್ತಿಯಾಗಿದ್ದು, ಮೊದಲ ಸಂಚಿಕೆ ಪ್ರಸಾರವಾದ ದಿನವನ್ನು ನೆನೆಪಿಟ್ಟುಕೊಂಡು ವೀಕ್ಷಕರು ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಅಂದ್ರೆ ಅದು ಅಗ್ನಿಸಾಕ್ಷಿ ಸೀರಿಯಲ್ (Agnisakashi Serial). ಬರೋಬ್ಬರಿ 6 ವರ್ಷಗಳ ಕಾಲ ಭರ್ಜರಿ ಮನರಂಜನೆ ನೀಡುವ ಮೂಲಕ, ಜನಮನ ಗೆದ್ದಂತಹ ಧಾರಾವಾಹಿ ಇದಾಗಿತ್ತು, ಇಂದಿಗೂ ಜನ ಸೀರಿಯಲ್ ನೆನಪಿಸಿಕೊಳ್ಳುತ್ತಿದ್ದಾರೆ.
ವಿಜಯ್ ಸೂರ್ಯ (Vijay Suriya) ನಾಯಕ ಸಿದ್ಧಾರ್ಥ್ ಪಾತ್ರದಲ್ಲಿ ನಟಿಸಿದ್ದರೆ, ವೈಷ್ಣವಿ ಗೌಡ (Vaishnavi Gowda) ಸನ್ನಿಧಿಯಾಗಿ ನಟಿಸಿದ್ದರು. ಸಿದ್ಧಾರ್ಥ್ ಮತ್ತು ಸನ್ನಿಧಿಯ ಜೋಡಿ ರಾಜ್ಯದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದು, ಇಬ್ಬರು ಗುಳಿಗೆನ್ನೆ ನಾಯಕ -ನಾಯಕಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇಬ್ಬರನ್ನು ನಿಜ ಜೀವನದಲ್ಲೂ ಜೋಡಿಯಾಗಿ ನೋಡ ಬಯಸಿದ್ದರು ಜನ. ಅಷ್ಟೊಂದು ಇಷ್ಟವಾಗಿತ್ತು ಈ ಸೀರಿಯಲ್.
ಅಗ್ನಿಸಾಕ್ಷಿ ಕಥೆ ಬಗ್ಗೆ ಹೇಳೊದಾದ್ರೆ ಸನ್ನಿಧಿ ಮಿಡಲ್ ಕ್ಲಾಸ್ ಹುಡುಗಿ, ತನ್ನ ಮನೆಯವರಿಗೋಸ್ಕರ ಏನು ಬೇಕಾದ್ರೂ ಮಾಡುವವಂತಹ ಹುಡುಗಿ. ಇನ್ನೊಂದೆಡೆ ಸಿದ್ಧಾರ್ಥ, ಒಬ್ಬ ಬ್ಯುಸಿನೆಸ್ ಮೆನ್, ಜೀವನವನ್ನು ಎಂಜಾಯ್ ಮಾಡಬೇಕೆಂದು ಬಯಸುವ ಹುಡುಗ. ಇಬ್ಬರನ್ನು ಮದುವೆಗೆ ಒಪ್ಪಿಸೋದು ಸಿದ್ಧಾರ್ಥ ಅತ್ತಿಗೆ ಚಂದ್ರಿಕಾ.
ಚಂದ್ರಿಕಾ ಅಂದ್ರೆ ಮನೆ ಮಂದಿಗೆ ದೇವರಂತೆ, ಸಿದ್ದಾರ್ಥ ಅಂತೂ ಅತ್ತಿಗೆ ಹೇಳಿದ ಮಾತು ಮೀರುವವನೇ ಅಲ್ಲ. ಚಂದ್ರಿಕಾ ಸನ್ನಿಧಿಯನ್ನು ಆಯ್ಕೆ ಮಾಡಲು ಕಾರಣ, ಆಕೆಗೆ ಯಾವತ್ತೂ ಮಗು ಆಗೋದಿಲ್ಲ ಎನ್ನುವ ಕಾರಣಕ್ಕೆ. ಆಕೆಗೆ ಮಗು ಆಗದೇ ಇದ್ದರೆ, ಆಸ್ತಿಯನ್ನು ಯಾರಿಗೂ ಕೊಡಬೇಕಾಗಿ ಇರೋದಿಲ್ಲ ಎನ್ನುವ ಕಾರಣಕ್ಕೆ ಸನ್ನಿಧಿ-ಸಿದ್ಧಾರ್ಥ್ ರ ಮದುವೆ ಮಾಡಿಸುತ್ತಾರೆ.
ಇಬ್ಬರಿಗೂ ಇದು ಒತ್ತಾಯದ ಮದುವೆಯೇ. ಆದರೆ ನಂತರ ದಿನಕಳೆದಂತೆ, ಈ ಜೋಡಿ ಲವ್ವಲ್ಲಿ ಬೀಳುತ್ತಾರೆ. ನಂತರ ಚಂದ್ರಿಕಾ ಒಂದೊಂದೇ ಅಸಲಿಯತ್ತು,ಸನ್ನಿಧಿ ಮುಂದೆ ತೆರೆದುಕೊಳ್ಳುತ್ತೆ. ಸನ್ನಿಧಿ ಯಾವ ರೀತಿಯಾಗಿ ಚಂದ್ರಿಕಾಳ ಕೆಟ್ಟ ಆಲೋಚನೆಗಳಿಂದ ತನ್ನ ಮನೆಮಂದಿಯನ್ನು ರಕ್ಷಿಸುತ್ತಾಳೆ ಅನ್ನೋದೇ ಕಥೆಯಾಗಿತ್ತು.
ಈ ಜನಪ್ರಿಯ ಧಾರಾವಾಹಿಯಲ್ಲಿ, ವೈಷ್ಣವಿ, ವಿಜಯ್ ಸೂರ್ಯ ಅಲ್ಲದೇ, ಮುಖ್ಯಮಂತ್ರಿ ಚಂದ್ರು, ಪ್ರಿಯಾಂಕಾ ಶಿವಣ್ಣ (Priyanka Shivanna), ಸುಕೃತಾ ನಾಗ್, ರಾಜೇಶ್ ಧೃವಾ, ಐಶ್ವರ್ಯ ಸಾಲಿಮಠ್, ಅನುಶಾ ರಾವ್, ಇಶಿತಾ ವರ್ಷಾ, ಚಿತ್ಕಲಾ ಬಿರಾದಾರ್, ರಾಜೇಶ್ವರಿ ಪಾರ್ಥಸಾರಥಿ, ಸಂಪತ್ ಜೆಎಸ್, ಸಿತಾರಾ ತಾರ ಸೇರಿ ಹಲವು ತಾರೆಯರು ನಟಿಸಿದ್ದರು.
ಈ ಧಾರಾವಾಹಿಯ ಮೊದಲ ಸಂಚಿಕೆ 2013 ಡಿಸೆಂಬರ್ 2 ರಂದು ಪ್ರಸಾರವಾಗಿತ್ತು, ಅಂದ್ರೆ, ಈ ಡಿಸೆಂಬರ್ 2ಕ್ಕೆ ಸೀರಿಯಲ್ ಗೆ 11 ವರ್ಷ. ಈ ಹಿನ್ನೆಲೆಯಲ್ಲಿ ಅಗ್ನಿಸಾಕ್ಷಿ ಅಭಿಮಾನಿಗಳು ಸಂಭ್ರಮಿಸಿದ್ದು, ಕನ್ನಡ ಇತಿಹಾಸದಲ್ಲಿ ಇಂತಹ ಒಳ್ಳೆ ಧಾರಾವಾಹಿ ಮತ್ತೆ ಬರಲು ಸಾಧ್ಯವಿಲ್ಲ, ಎವರ್ ಗ್ರೀನ್ (evergreen serial), ಬ್ಲಾಕ್ ಬಸ್ಟರ್, ಸೂಪರ್ ಹಿಟ್ ಸೀರಿಯಲ್ ಎಂದಿದ್ದಾರೆ.