ಇದು ಯಾವ ನಗರವೂ ಅಲ್ಲ, ಕೋಟ್ಯಾಂತರ ಸಮಾಧಿಗಳಿರುವ ವಿಶ್ವದ ಬೃಹತ್ ಸ್ಮಶಾನ
ಈ ಲೇಖನದಲ್ಲಿ, ವಿಶ್ವದ ಅತಿದೊಡ್ಡ ಸ್ಮಶಾನವೆಂದು ಪರಿಗಣಿಸಲಾದ ಸ್ಮಶಾನದ ಬಗ್ಗೆ ತಿಳಿಸಲಾಗಿದೆ. ಇಲ್ಲಿ ಕೋಟ್ಯಂತರ ಮೃತ ದೇಹಗಳನ್ನು ಹೂಳಲಾಗಿದೆ ಎಂದು ಹೇಳಲಾಗುತ್ತದೆ. ನೀವು ವಿಶ್ವದ ಅತಿದೊಡ್ಡ ಸ್ಮಶಾನದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ನೀವು ಈ ಲೇಖನವನ್ನು ಓದಬೇಕು.
ಪ್ರಪಂಚದ ಪ್ರತಿಯೊಂದು ಮೂಲೆಯಲ್ಲೂ ನೀವು ಸ್ಮಶಾನಗಳನ್ನು ಕಾಣಬಹುದು. ಇದು ಸತ್ತ ಜನರನ್ನು ಸಮಾಧಿ ಮಾಡುವ ಸ್ಥಳ. ಭಾರತದಲ್ಲಿ, ನೀವು ಅನೇಕ ಸಣ್ಣ ಮತ್ತು ದೊಡ್ಡ ಸ್ಮಶಾನಗಳನ್ನು ಕಾಣಬಹುದು. ಭಾರತವನ್ನು ಹೊರತುಪಡಿಸಿ, ಇತರ ದೇಶಗಳಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಸ್ಮಶಾನಗಳನ್ನು ನೀವು ಸುಲಭವಾಗಿ ಕಾಣಬಹುದು. ಆದರೆ ಯಾವ ದೇಶದಲ್ಲಿ ವಿಶ್ವದ ಅತಿದೊಡ್ಡ ಸ್ಮಶಾನವಿದೆ ಮತ್ತು ಆ ಸ್ಮಶಾನದಲ್ಲಿ ಎಷ್ಟು ಮೃತ ದೇಹಗಳನ್ನು (dead body) ಹೂಳಲಾಗಿದೆ ಎಂದು ನಿಮ್ಮನ್ನು ಕೇಳಿದರೆ, ನಿಮ್ಮ ಉತ್ತರ ಏನಿರುತ್ತೆ?
ವಿಶ್ವದ ಅತಿದೊಡ್ಡ ಸ್ಮಶಾನ ಎಲ್ಲಿದೆ? (largest cemetery of world)
ವಿಶ್ವದ ಅತಿದೊಡ್ಡ ಸ್ಮಶಾನದ ಬಗ್ಗೆ ಇತರ ವಿಷಯಗಳನ್ನು ಓದುವ ಮೊದಲು, ಅದು ಯಾವ ದೇಶದಲ್ಲಿದೆ ಎಂದು ತಿಳಿದುಕೊಳ್ಳೋಣ. ಈ ಸ್ಮಶಾನ ಕೊಲ್ಲಿ ರಾಷ್ಟ್ರ ಇರಾಕ್‌ನಲ್ಲಿದೆ. ಇದು ಇರಾಕ್ ನ ನಜಾಫ್ ನಗರದಲ್ಲಿದೆ. ಈ ಸ್ಮಶಾನದ ಎಷ್ಟು ದೊಡ್ಡದಿದೆ ಎಂದರೆ ನೀವು ಊಹೆ ಮಾಡಲು ಸಾಧ್ಯವಾಗದಷ್ಟು ವಿಶಾಲವಾಗಿದೆ ಇದು. ಈ ಸ್ಮಶಾನ ಎಷ್ಟು ದೊಡ್ಡದಾಗಿದೆ ಎಂದರೆ 1-2 ನಗರಗಳು ಅದರೊಳಗೆ ನೆಲೆಸಬಹುದು.
ವಿಶ್ವದ ಅತಿದೊಡ್ಡ ಸ್ಮಶಾನದ ಹೆಸರೇನು?
ಇಲ್ಲಿ ಹೇಳುತ್ತಿರುವ ಸ್ಮಶಾನದ ಹೆಸರು 'ವಾದಿ-ಅಲ್-ಸಲಾಮ್' (Wadi Al Salaam). ಸುಮಾರು 1500 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಮಶಾನವು ವಿಶ್ವಾದ್ಯಂತ 'ಶಾಂತಿಯ ಕಣಿವೆ' ಎಂದೂ ಪ್ರಸಿದ್ಧ. ಇಲ್ಲಿ ಶಿಯಾ ಇಮಾಮ್ ಮತ್ತು ನಾಲ್ಕನೇ ಖಲೀಫಾ 'ಇಮಾಮ್ ಅಲಿ ಇಬ್ನ್ ತಾಲಿಬ್' ಅವರ ದರ್ಗಾದ ಜೊತೆಗೆ ಇನ್ನೂ ಅನೇಕ ಮುಖ್ಯ ದರ್ಗಾಗಳಿವೆ ಎಂದು ಹೇಳಲಾಗುತ್ತದೆ. ಎಲ್ಲಾ ದರ್ಗಾಗಳು ಅಂದರೆ ಸಮಾಧಿಗಳನ್ನು ಕಲ್ಲು ಮತ್ತು ಜೇಡಿಮಣ್ಣಿನಿಂದ ನಿರ್ಮಿಸಲಾಗಿದೆ.
ವಾದಿ-ಅಲ್-ಸಲಾಮ್ ಸ್ಮಶಾನ ಎಷ್ಟು ಹಳೆಯದು?
ವಾದಿ-ಅಲ್-ಸಲಾಮ್ ಅಂದರೆ ಶಾಂತಿಯ ಕಣಿವೆ ಸಾಕಷ್ಟು ಪ್ರಾಚೀನವಾಗಿದೆ. ಇಲ್ಲಿ ಜನರನ್ನು ಸಮಾಧಿ ಮಾಡುವ ಕೆಲಸವು 10-20 ವರ್ಷಗಳಿಂದ ಅಲ್ಲ, 1400 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಯುತ್ತಿದೆಯಂತೆ ಎಂದು ಹೇಳಲಾಗುತ್ತೆ. ಒಂದು ಅಂದಾಜಿನ ಪ್ರಕಾರ, ಈ ಸ್ಮಶಾನದಲ್ಲಿ ಸುಮಾರು ಕೋಟಿ ಶವಗಳನ್ನು ಹೂಳಲಾಗಿದೆ.
ವಾದಿ-ಅಲ್-ಸಲಾಮ್ ಸ್ಮಶಾನಕ್ಕೆ ಸಂಬಂಧಿಸಿದ ಇತರ ವಿಷಯಗಳು
ಇದು ಪ್ರಪಂಚದಾದ್ಯಂತದ ಶಿಯಾ ಮುಸ್ಲಿಮರಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ ಮತ್ತು ಅವರು ತಮ್ಮಲ್ಲಿ ಯಾರಾದರೂ ಮೃತರಾದರೆ ಅವರ ಮೃತ ದೇಹವನ್ನು ಹೂಳಲು ಇಲ್ಲಿಗೆ ಆಗಮಿಸುತ್ತಾರೆ ಎನ್ನಲಾಗುತ್ತೆ. ಒಂದು ಸುದ್ದಿಯ ಪ್ರಕಾರ, ಈ ಸ್ಮಶಾನದಲ್ಲಿ ಪ್ರತಿದಿನ ಸುಮಾರು 200 ಮೃತ ದೇಹಗಳನ್ನು (200 dead bodies) ಹೂಳಲಾಗುತ್ತದೆ.
ಮತ್ತೊಂದು ಸುದ್ದಿಯೆಂದರೆ ಇಲ್ಲಿ ಒಂದು ಸಮಾಧಿ ಇದೆ, ಅಲ್ಲಿ ಕೆಲವು ಜನರು ಮನ್ನತ್ ಕೇಳಲು ಅಂದರೆ ಹಲವಾರು ಕೋರಿಕೆಗಳೊಂದಿಗೆ ಅಲ್ಲಿಗೆ ಬರುತ್ತಲೇ ಇರುತ್ತಾರೆಯಂತೆ. ಇಲ್ಲಿ ಬಂದರೆ ಮನೋಕಾಮನೆಗಳು ಈಡೆರುತ್ತೆ ಎಂದು ಸಹ ಕೆಲವರು ನಂಬುತ್ತಾರೆ. ಇನ್ನು ಯುನೆಸ್ಕೋ ಈ ಸ್ಮಶಾನವನ್ನು 'ವಿಶ್ವ ಪರಂಪರೆ'ಯ ತಾಣದ ಲಿಸ್ಟ್ ನಲ್ಲೂ ಸೇರಿಸಿದೆ.