ಬೆಂಗಳೂರಿನಲ್ಲಿದೆ Hidden Island : ವೀಕೆಂಡ್ ಪಾರ್ಟಿಗೆ ಬೆಸ್ಟ್ ತಾಣ!
ನೀವು ವೀಕೆಂಡ್ ಪಾರ್ಟಿ ಮಾಡೋರು ಆಗಿದ್ರೆ, ಹೊಸ ಹೊಸ ರೆಸ್ಟೋರೆಂಟ್ ಎಲ್ಲಿದೆ ಅಂತಾ ಹುಡುಕ್ತಾ ಇದ್ರೆ, ಬೆಂಗಳೂರಲ್ಲೇ ಇದೆ, ವಿಭಿನ್ನ ಥೀಮ್ ಹೊಂದಿರುವ ಒಂದು ರೆಸ್ಟೋರೆಂಟ್, ಅದೆಲ್ಲಿದೆ? ಅಲ್ಲೇನು ವಿಶೇಷತೆ ಇದೆ ನೋಡೋಣ.
ಈ ಸೆಕೆಯ ನಡುವೆ, ವೀಕೆಂಡ್ ಪ್ಲ್ಯಾನ್ ಬಗ್ಗೆ ಯೋಚನೆ ಮಾಡ್ತಿದ್ರೆ, ಈ ಬಾರಿ ರಾಜರಾಜೇಶ್ವರಿ ನಗರಕ್ಕೆ ಡ್ರೈವ್ ಮಾಡಿ ಮತ್ತು ಅಲ್ಲಿ ಹೊಸದಾಗಿ ತೆರೆಯಲಾದ ಈ ದ ಹಿಡನ್ ಐಲ್ಯಾಂಡ್ (The Hidden Island) ರೆಸ್ಟೋರೆಂಟ್ ಗೆ ಭೇಟಿ ನೀಡಿ. ಖಂಡಿತವಾಗಿಯೂ ನೀವು ಎಂಜಾಯ್ ಮಾಡ್ತೀರಿ.
ಹೌದು ನೀವು ರಾಜರಾಜೇಶ್ವರಿ ನಗರದ ಚನ್ನಸಂದ್ರಕ್ಕೆ ಹೋದ್ರೆ ಅಲ್ಲೆ ನಿಮಗೆ ಈ ಅದ್ಭುತ ಹಿಡನ್ ಐಲ್ಯಾಂಡ್ ಥೀಮ್ ರೆಸ್ಟೋರೆಂಟ್ ಕಾಣಸಿಗುತ್ತೆ. ಈ ರೆಸ್ಟೋರೆಂಟ್ ವೈಬ್ರೆಂಟ್ ಆಗಿರೋ ಗೋಡೆಯ ವರ್ಣಚಿತ್ರಗಳು ಮತ್ತು ಅದ್ಭುತ ವರ್ಣರಂಜಿತ ದೀಪಗಳಿಂದ (Vibrant lights) ಆವೃತವಾಗಿದೆ, ಇದನ್ನು ನಿಮ್ಮ ಮುಂದಿನ ನೈಟ್ ಹ್ಯಾಂಗ್ಔಟ್ ತಾಣವನ್ನಾಗಿ ಮಾಡಬಹುದು!
ಈ ಐಲ್ಯಾಂಡ್ ಥೀಮ್ ರೆಸ್ಟೋರೆಂಟ್ ನ ಮಧ್ಯಭಾಗವು ಲಂಬವಾದ ರೇಖೀಯ ವಿನ್ಯಾಸದೊಂದಿಗೆ ತಲೆಕೆಳಗಾದ ಛಾವಣಿಯನ್ನು ಹೊಂದಿದೆ ಮತ್ತು ಗುಲಾಬಿ ದೀಪಗಳಿಂದ ಹೈಲೈಟ್ ಮಾಡಲಾಗಿದೆ. ಮೇಲ್ಛಾವಣಿಯನ್ನು ಹ್ಯಾಂಗಿಂಗ್ ಗಿಡಗಳಿಂದ ಅಲಂಕರಿಸಲಾಗಿದೆ. ಇಡೀ ಸ್ಥಳವು ಶಾಂಡ್ಲಿಯರ್ಗಳು ಮತ್ತು ಕಾಮನಬಿಲ್ಲಿನ ಬೆಳಕಿನ ಸೆಟಪ್ನಿಂದ ಅದ್ಭುತವಾಗಿ ಬೆಳಗುತ್ತದೆ.
ಪ್ರತಿಯೊಂದು ಗೋಡೆಯು ದೊಡ್ಡ ಗಾತ್ರದ ಟ್ರೈಬಲ್ ಆರ್ಟ್ ನ (Tribal art) ವರ್ಣಚಿತ್ರವನ್ನು ಹೊಂದಿದೆ. ಇದನ್ನು ನೋಡೋದೆ ಕಣ್ಣಿಗೆ ಹಬ್ಬವಾಗಿದೆ. ಇಲ್ಲಿ ಪ್ರತಿ ಟೇಬಲ್ ದುಂಡು ಆಕಾರದಲ್ಲಿದೆ ಮತ್ತು ನಾಲ್ಕು ಬದಿಗಳಲ್ಲಿ ನೀರಿನಿಂದ ಆವೃತವಾಗಿದೆ, ಕೋಯಿ ಮೀನುಗಳು ಸಹ ಈ ನೀರಿನಲ್ಲಿ ಈಜುತ್ತವೆ. ಅದು ಸುಂದರವಲ್ಲವೇ? ಗಟ್ಟಿಯಾದ ಹಿನ್ನೆಲೆ ಸಂಗೀತವು ಈ ರೆಸ್ಟೋರೆಂಟನ್ನು ಪರ್ಫೆಕ್ಟ್ ಪಾರ್ಟಿ ಹಬ್ ಆಗಿಸುತ್ತೆ.
ಇನ್ನೇಕೆ ತಡ ಈ ವೀಕೆಂಡ್ ಗೆ ನಮ್ಮದೇ ಊರಿನಲ್ಲಿರುವ ಹಿಡನ್ ಐಲ್ಯಾಂಡ್ ಜಗತ್ತಿಗೆ ಪಲಾಯನ ಮಾಡಿ. ಇಲ್ಲಿ ನೀವು ರುಚಿಕರವಾದ ಮತ್ತು ಆರೋಗ್ಯಕರ ಆಹಾರವನ್ನು, ಬಾಯಲ್ಲಿ ನೀರೂರಿಸುವ ಇಟಾಲಿಯನ್ ಮತ್ತು ಏಷ್ಯನ್ ಭಕ್ಷ್ಯಗಳನ್ನು ಸಹ ಎಂಜಾಯ್ ಮಾಡಬಹುದು.
ಕಾಕ್ ಟೆಲ್ ಪಾರ್ಟಿ, ಡೆಸರ್ಟ್ ಜೊತೆಗೆ ಸುಂದರವಾದ ಸ್ಥಳವನ್ನು ನೀವು ಎಂಜಾಯ್ ಮಾಡಲು ಬಯಸಿದ್ರೆ, ಎಲ್ಲಿದೆ ಈ ತಾಣ ನೋಡೋಣ…
ಸ್ಥಳ: ನಂ.36, ಖಾತಾ ನಂ.349/36/342, ಚನ್ನಸಂದ್ರ ಮುಖ್ಯರಸ್ತೆ, ಆರ್.ಆರ್.ನಗರ
ಸಮಯ : ಬೆಳಿಗ್ಗೆ 11 ರಿಂದ 12 ರವರೆಗೆ
ಬೆಲೆ: ಇಬ್ಬರಿಗೆ 900 ರೂ.
ಸಂಪರ್ಕ: 7676187274