ಡೆಮು & ಮೆಮು ರೈಲುಗಳ ನಡುವಿನ ವ್ಯತ್ಯಾಸ ಏನು? ಇವುಗಳ ಸಾಮಾರ್ಥ್ಯ ಎಷ್ಟು?
ಭಾರತೀಯ ರೈಲುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ಅಚ್ಚರಿಯ ವಿಷಯಗಳು ಹೊರಗೆ ಬರುತ್ತಿರುತ್ತವೆ. ಡೆಮು ಮತ್ತು ಮೆಮು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೂ ಬಹುತೇಕರಿಗೆ ಗೊತ್ತಿರಲ್ಲ. ಇಂದು ಆ ಎರಡು ರೈಲುಗಳ ನಡುವಿನ ವ್ಯತ್ಯಾಸ ಏನು ಎಂಬುದರ ಮಾಹಿತಿ ಇಲ್ಲಿದೆ.
ದೂರದ ಪ್ರಯಾಣಕ್ಕೆ ಬಹುತೇಕ ಜನರು ರೈಲು ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಲಕ್ಷ ಲಕ್ಷ ಬೆಲೆಯ ಟಿಕೆಟ್ ಮತ್ತು ಕಡಿಮೆ ದರದ ರೈಲುಗಳು ಭಾರತದಲ್ಲಿ ಚಲಿಸುತ್ತವೆ. ಎಕ್ಸ್‌ಪ್ರೆಸ್, ಗರೀಬ್ ರಥ್, ದೀನ್ ದಯಾಳು, ಪ್ಯಾಸೆಂಜರ್, ವಂದೇ ಭಾರತ್, ವಂದೇ ಮೆಟ್ರೋ, ರಾಜಧಾನಿ, ಶತಾಬ್ದಿ, ವಿಸ್ಟಾಡೋಮ್, ಮಹಾರಾಜ, ಮೆಮು, ಡೆಮು ಸೇರಿದಂತೆ ಹಲವು ರೈಲುಗಳಿವೆ. ಎಲ್ಲಾ ರೈಲುಗಳು ಪ್ರತ್ಯೇಕ ವಿಶೇಷತೆಯನ್ನು ಹೊಂದಿವೆ.
ಇಂದು ನಾವು ನಿಮಗೆ ಡೆಮು ಮತ್ತು ಮೆಮು ರೈಲುಗಳ ನಡುವಿನ ವ್ಯತ್ಯಾಸ ಏನು ಎಂದು ಹೇಳುತ್ತಿದ್ದೇವೆ. ಇವುಗಳು ಬೆಂಗಳೂರು, ಚೆನ್ನೈ, ಬೆಂಗಳೂರು, ದೆಹಲಿ ಸೇರಿದಂತೆ ಮಹಾನಗರಗಳು ಮತ್ತು ಉಪನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ನಮ್ಮ ರಾಜ್ಯದಲ್ಲಿಯೂ ಈ ರೈಲುಗಳು ಸಂಚರಿಸುತ್ತಿವೆ.
ಡೆಮು ರೈಲು
Diesel Electric Multiple Unit ಡೆಮು ರೈಲಿನ ಪೂರ್ಣರೂಪವಾಗಿದೆ. ಕಡಿಮೆ ದೂರದ ಪ್ರಯಾಣಕ್ಕೆ ಡೆಮು ರೈಲುಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿಯೂ ಡೀಸೆಲ್ ಎಲೆಕ್ಟ್ರಿಕ್ ಡೆಮು, ಡೀಸೆಲ್ ಮೆಕ್ಯಾನಿಕಲ್ ಡೆಮು ಮತ್ತು ಡೀಸೆಲ್ ಹೈಡ್ರಾಲಿಕ್ ಡೆಮು ಎಂಬ ಮೂರು ವಿಧಗಳಿವೆ. ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, ಪ್ರತಿ ಮೂರು ಬೋಗಿಗಳ ನಂತರ ಒಂದು ಪವರ್ ಕೋಚ್ ಇರುತ್ತದೆ.
ಈ ರೈಲುಗಳಲ್ಲಿ ಸ್ಲೀಪರ್ ಕೋಚ್, ಫಸ್ಟ್ ಎಸಿ, ಎಕ್ಸಿಕ್ಯೂಟಿವ್ ಕ್ಲಾಸ್ ಶ್ರೇಣಿಯ ಆಸನಗಳು ಲಭ್ಯ ಇವೆ. 120 ಕಿಮೀ ವೇಗದ ಸಾಮಾರ್ಥ್ಯ ಹೊಂದಿದ್ರೂ ನಿಧಾನವಾಗಿಯೇ ಚಲಿಸುತ್ತವೆ. ನಾನ್-ಎಲೆಕ್ಟ್ರಿಫೈಡ್ ಮಾರ್ಗದಲ್ಲಿ ಹೆಚ್ಚಾಗಿ ಈ ಡೆಮು ರೈಲುಗಳು ಸಂಚರಿಸುತ್ತವೆ. ಅಕ್ಟೋಬರ್ 23, 1994 ರಂದು ಜಲಂಧರ್ ಮತ್ತು ಹೋಶಿಯಾರ್‌ಪುರ ನಡುವೆ ಮೊದಲ ಡೆಮು ರೈಲು ಸಂಚರಿಸಿತ್ತು. ಗ್ರಾಮೀಣ ಅಥವಾ ಉಪನಗರಳಿಗೆ ಸಂಪರ್ಕ ಕಲ್ಪಿಸುತ್ತವೆ.
ಮೆಮು ರೈಲು
Mainline Electric Multiple Unit ಮೆಮು ರೈಲಿನ ಪೂರ್ಣರೂಪವಾಗಿದ್ದು, ಪ್ರತಿ 4 ಕೋಚ್ ನಂತರ ಒಂದು ಪವರ್ ಕಾರ್ ಅಳವಡಿಸಲಾಗಿರುತ್ತದೆ. ಗಂಟೆಗೆ ಗರಿಷ್ಠ 160 ಕಿಮೀ ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, 200 ಕಿಮೀಗಿಂತ ಹೆಚ್ಚು ದೂರದ ಪ್ರಯಾಣಕ್ಕೆ ಮೆಮು ರೈಲುಗಳನ್ನು ಬಳಸಲಾಗುತ್ತದೆ.
5 ಅಡಿ 6 ಇಂಚು (1,676 ಮಿಲಿಮೀಟರ್) ಬ್ರಾಡ್ ಗೇಜ್‌ನಲ್ಲಿ ಮೆಮು ರೈಲುಗಳು ಸಂಚರಿಸುತ್ತವೆ. ಉನ್ನತ ತಂತ್ರಜ್ಞಾನ ಹೊಂದಿದ್ದು, 25 ಕೆವಿ ಎಸಿ ಓವರ್‌ಹೆಡ್ ಲೈನ್‌ನಿಂದ ಮೆಮು ರೈಲುಗಳು ಸಂಚರಿಸುತ್ತವೆ. ಮೆಮು ರೈಲುಗಳಲ್ಲಿ ಸ್ಲೀಪರ್, ಎಸಿ, ಫಸ್ಟ್ ಕ್ಲಾಸ್, ಸೆಕೆಂಡ್ ಎಸಿ, ಚೇರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುತ್ತವೆ. 1995ರಲ್ಲಿ ಮೊದಲ ಬಾರಿಗೆ ಮೆಮು ರೈಲುಗಳು ತಮ್ಮ ಸಂಚಾರವನ್ನು ಆರಂಭಿಸಿದ್ದವು.
ಎಮು ರೈಲು
Electric multiple unit ಇದರ ಪೂರ್ಣರೂಪವಾಗಿದ್ದು, ಮೆಮು ರೈಲಿನಂತೆಯಯೇ ಇರುತ್ತವೆ. ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ಈ ರೈಲುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮುಂಬೈನಲ್ಲಿ ಇವುಗಳನ್ನು ಲೋಕಲ್ ಟ್ರೈನ್ ಎಂದು ಕರೆಯಲಾಗುತ್ತದೆ. ಲೋಕಲ್ ಟ್ರೈನ್ ಮುಂಬೈ ನಗರದ ಜೀವನಾಡಿ ಅಂತಾನೇ ಕರೆಸಿಕೊಳ್ಳುತ್ತವೆ. ಮುಂಬೈನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಜನರು ಲೋಕಲ್ ಟ್ರೈನ್‌ಗಳನ್ನು ಬಳಸುತ್ತಾರೆ.