- Home
- News
- State
- Shivamogga Ragigudda Ganesha Idol: ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!
Shivamogga Ragigudda Ganesha Idol: ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!
ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.

ಶಿವಮೊಗ್ಗ: ಗಣಪತಿ ವಿಗ್ರಹ ಅವಮಾನ
ಇಂದು ಸಂಜೆ 6:30ರ ವೇಳೆ ನಡೆದ ಈ ಘಟನೆಯಿಂದ ಕೆರಳಿದ ಸ್ಥಳೀಯ ಮಹಿಳೆಯರು ತಕ್ಷಣ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ, ಯುವಕರು ವಿಗ್ರಹಗಳನ್ನು ಪುನಃ ಕಟ್ಟೆಯ ಮೇಲೆ ಇರಿಸಿ ತೆರಳಿದ್ದಾರೆ.
ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ
ಗಣಪತಿ ಕಟ್ಟೆ ಸ್ಥಳದ ಬಳಿ ಹೈಕೋರ್ಟ್ ವಕೀಲ ಸಿದ್ದಿಕಿ ಎಂಬವರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಜಾಗವು ಪಾರ್ಕ್‌ಗೆ ಸಂಬಂಧಿಸಿದ್ದಾಗಿ ಇಲ್ಲಿ ಯಾಕೆ ನಿಮ್ಮ ದೇವರು ಇಟ್ಟಿದ್ದೀರಿ ಎಂದು ಸ್ಥಳೀಯ ಹಿಂದೂಗಳೊಂದಿಗೆ ವಾಗ್ವಾದ ನಡೆಸಿದ್ದ ಯುವಕರು. ಇದರಿಂದಾಗಿ ಸ್ಥಳೀಯ ಮಹಿಳೆಯರು ಮತ್ತು ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಳಿಕ ಕಟ್ಟೆಯ ಮೇಲೆ ಹತ್ತಿ ಹಿಂದೂ ದೇವರು ಗಣೇಶ ಮೂರ್ತಿಯನ್ನು ಕಾಲಿನಿಂದ ಒದ್ದು ಅವಮಾನಿಸಿರುವ ಕಿಡಿಗೇಡಿಗಳು.
ಸ್ಥಳಕ್ಕೆ ಪೊಲೀಸರ ಬೇಟಿ
ಘಟನೆಯ ಮಾಹಿತಿ ತಿಳಿದ ಬಂಗಾರಪ್ಪ ಬಡಾವಣೆಯ ಇತರ ನಿವಾಸಿಗಳು ಆಕ್ರೋಶಗೊಂಡು ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಿಡೀರ್ ಪ್ರತಿಭಟನೆಗಿಳಿದರು. ಸ್ಥಳಕ್ಕೆ ತಕ್ಷಣ ಧಾವಿಸಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಎಸ್‌ಪಿ ಮಿಥುನ್ ಕುಮಾರ ಹೇಳಿಕೆ:
ಶಿವಮೊಗ್ಗದಲ್ಲಿ ಗಣಪತಿ, ನಾಗರ ವಿಗ್ರಹ ಅವಮಾನ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಎಸ್‌ಪಿ ಮಿಥುನ್ ಕುಮಾರ್ ಪ್ರಕ್ರಿಯಿಸಿದ್ದಾರೆ.
ರಾಗಿ ಗುಡ್ಡದ ಬಂಗಾರಪ್ಪ ಬಡಾವಣೆಯ ಪಾರ್ಕ್‌ನಲ್ಲಿ ಮೀಸಲಿಟ್ಟ ಜಾಗದಲ್ಲಿ ಕಟ್ಟೆಯೊಂದರ ಮೇಲೆ ಇರಿಸಲಾಗಿದ್ದ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಕೆಲವರು ಕೆಳಗೆ ಹಾಕಿ ಅವಮಾನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ವಿಗ್ರಹಗಳು ಮೊದಲಿದ್ದ ಜಾಗದಲ್ಲೇ ಇರುವುದು ಕಂಡುಬಂದಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ, ಯಾಕೆ ಮಾಡಲಾಗಿದೆ ಎಂಬುದನ್ನು ತನಿಖೆಯ ನಂತರ ತಿಳಿದು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಯುವಕರು ನಡೆದು ಹೋಗುವ ವಿಡಿಯೋ ಸಿಕ್ಕಿದ್ದು, ಅದರ ಮೇಲೆ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಬಂದೋಬಸ್ತ್ ಕೂಡ ಮಾಡಲಾಗಿದೆ.
ದುಷ್ಕರ್ಮಿಗಳ ಬಂಧನ ಭರವಸೆ
ಪ್ರತಿಭಟನಾಕಾರರು ಯುವಕರ ಬಂಧನಕ್ಕೆ ಒತ್ತಾಯಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಸದ್ಯ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತಗೊಂಡಿದೆ.
ಕಾನೂನು ಕ್ರಮಕ್ಕೆ ಒತ್ತಾಯ
ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.