ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಂತ ಹೇಯ ಕೃತ್ಯ ದಾಖಲಾಗಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉದ್ದೇಶದಿಂದ ಈ ಕೃತ್ಯ ಎಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಹಾನಗಲ್ (ಜು.05) ಗೋವುಗಳ ಮೇಲೆ ನಡೆಯುತ್ತಿರುವ ಹೇಯ ಕೃತ್ಯ ಪ್ರಕರಣ ಹೆಚ್ಚಾಗುತ್ತಿದೆ. ತಮ್ಮ ತಮ್ಮ ದ್ವೇಷ, ಧರ್ಮ, ಸಿದ್ಧಾಂತಗಳ ನಡುವಿನ ಕಿತ್ತಾಟದಲ್ಲಿಅಮಾಯಕ ಗೋವುಗಳು ನರಕಯಾತನೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಹೇಯ ಕೃತ್ಯ ದಾಖಲಾಗಿದೆ. ಪಂಚಾಕ್ಷರಿ ಮಠದ ಪವಿತ್ರ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಮಠದ ಎದುರು ಹಾಡಹಗಲೇ ಗೋವಿನ ಮೇಲೆ ಲೈಂಗಿಕ ದೌರ್ಜನ್ಯ

ಪಂಚಾಕ್ಷರಿ ಮಠದ ಎದುರಲ್ಲೇ ಈ ಕೃತ್ಯ ಎಸಗಲಾಗಿದೆ. ಹಾಡಹಗಲೇ ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಗೋವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿ ಖಾಸೀಂ ಸಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾಡಶೆಟ್ಟಿಹಳ್ಳಿ ನಿವಾಸಿಯಾಗಿರೋ ವಿಕೃತ ಕಾಮಿ ಖಾಸೀಂಸಾಬ ಇಮಾಮಸಾಬ ಡೊಳ್ಳೇಶ್ವರ ಕಳೆದ ಜೂನ್ 30ರಂದು ಮಧ್ಯಾಹ್ನ 12.30ರ ವೇಳೆ ಗೋವಿನ ಮೇಲೆ ಈ ಕೃತ್ಯ ಎಸಗಿದ್ದಾನೆ. ಪಂಚಾಕ್ಷರಿ ಮಠಕ್ಕೆ ಸೇರಿದ್ದ ಈ ಗೋವು ಮಠದ ಎದುರು ನಿಂತಿತ್ತು. ಈ ವೇಳೆ ಆಗಮಿಸಿದ ಈ ಖಾಸಿಂ ಸಾಬ್ ಕೃತ್ಯ ಎಸಗಿದ್ದಾನೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ಹಿಂದೂ ಧಾರ್ಮಿಕ ಭಾವನೆ ಕೆರಳಿಲು ಕೃತ್ಯ ಆರೋಪ

ಖಾಸೀಂ ಸಾಬ್ ಪವಿತ್ರ ಗೋವಿನ ಮೇಲೆ ವಿಕೃತ ದೃಷ್ಟಿ ಬೀರಿದ್ದಾನೆ. ಇದು ಕೇವಲ ಕಾಮ ಮಾತ್ರವಲ್ಲ, ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವೂ ಅಡಗಿದೆ ಎಂದು ಆರೋಪ ಕೇಳಿಬಂದಿದೆ. ಗೋಮಾತೆ ಎಂದು ಪೂಜಿಸುವ ಆಕಳ ಮೇಲೆ ಕ್ರೌರ್ಯ ಮೆರೆದು ಅಪವಿತ್ರಗೊಳಿಸಿದ್ದಾನೆ. ಮೂಕ ಪ್ರಾಣಿಯ ಮೇಲೆ ಕೃತ್ಯ ಎಸಗಿದ್ದಾನೆ. ಹೀಗಾಗಿ ಖಾಸೀಂ ಸಾಬ್ ವಿರುದ್ದ ಕಾಡಶೆಟ್ಟಿಹಳ್ಳಿ ಗ್ರಾಮದ ಶಿವರುದ್ರಪ್ಪ ನಿಸ್ಸೀಮಪ್ಪ ಹುಣಸಿಕಟ್ಟಿ ದೂರು ದಾಖಲಿಸಿದ್ದಾರೆ.

ಸಿಸಿಟಿವಿ ಪರಿಶೀಲಿಸಿದ ಪೊಲೀಸರು

ದೂರು ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದದ ಸಿಟಿಸಿಟಿ ದೃಶ್ಯಗಳನ್ನು ಪಡೆದಿದ್ದಾರೆ. ಬಳಿಕ ಈ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಖಾಸೀಂ ಸಾಬ್ ಕೃತ್ಯ ದಾಖಲಾಗಿರುವುದು ಪತ್ತೆಯಾಗಿದೆ. ದೂರು ಹಾಗೂ ದಾಖಲೆ ಆಧಾರದಲ್ಲಿ ಪೊಲೀಸರು ಖಾಸೀಂ ಸಾಬ್‌ನ ಬಂಧಿಸಿದ್ದಾರೆ.