MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಮಿಯಾಝಾಕಿ ಮಾವು ನಮ್ಮ ಸೇಂದೂರಕ್ಕೂ ಸಮವಲ್ಲ, ಇದು ಶಿಫಾರಸು ತಳಿ ಅಲ್ಲ; ರೈತರಿಗೆ ಎಚ್ಚರಿಕೆ ಕೊಟ್ಟ IIHR ವಿಜ್ಞಾನಿಗಳು

ಮಿಯಾಝಾಕಿ ಮಾವು ನಮ್ಮ ಸೇಂದೂರಕ್ಕೂ ಸಮವಲ್ಲ, ಇದು ಶಿಫಾರಸು ತಳಿ ಅಲ್ಲ; ರೈತರಿಗೆ ಎಚ್ಚರಿಕೆ ಕೊಟ್ಟ IIHR ವಿಜ್ಞಾನಿಗಳು

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ ಲಕ್ಷ ಬೆಲೆ ಎಂದು ಸದ್ದು ಮಾಡುತ್ತಿರುವ 'ಮಿಯಾಝಾಕಿ' ಮಾವಿನ ಹಿಂದೆ ದೊಡ್ಡ ವಂಚನೆಯ ಜಾಲವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಧಿಕೃತವಾಗಿ ಭಾರತಕ್ಕೆ ಪರಿಚಯಿಸದ ಈ ತಳಿಯ ಸಸಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಂಚನೆ ಜಾಲದ ವಿವರ ಇಲ್ಲಿದೆ.

2 Min read
Author : Sathish Kumar KH
Published : Apr 20 2026, 12:50 PM IST
Share this Photo Gallery
  • FB
  • TW
  • Linkdin
  • Whatsapp
18
ಮಿಯಾ ಜಾಕಿ ಮಾವಿನ ಶೋಕಿ ಬಿಟ್ಟುಬಿಡಿ
Image Credit : Facebook

ಮಿಯಾ ಜಾಕಿ ಮಾವಿನ ಶೋಕಿ ಬಿಟ್ಟುಬಿಡಿ

ಬೆಂಗಳೂರು (ಏ.20): ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಸುದ್ದ ಮಾಧ್ಯಮಗಳಲ್ಲಿ ‘ಮಿಯಾಝಾಕಿ’ (Miyazaki) ಎಂಬ ಮಾವಿನ ತಳಿ ಭಾರೀ ಸದ್ದು ಮಾಡುತ್ತಿದೆ. ಒಂದು ಕೆ.ಜಿ ಮಾವಿನ ಹಣ್ಣಿಗೆ ಬರೋಬ್ಬರಿ 2 ರಿಂದ 3 ಲಕ್ಷ ರೂಪಾಯಿ ಬೆಲೆ ಸಿಗುತ್ತದೆ ಎಂಬ ಆಕರ್ಷಕ ಸುದ್ದಿಯನ್ನು ನಂಬಿ ಸಾವಿರಾರು ರೈತರು ಈ ತಳಿಯ ಸಸಿಗಳನ್ನು ನೆಡಲು ಆಸಕ್ತಿ ತೋರುತ್ತಿದ್ದಾರೆ.

28
ಲಕ್ಷ ರೂ. ಬೆಲೆ ಕಥೆಯ ಹಿಂದೆ ವಂಚನೆ ಜಾಲ
Image Credit : Facebook

ಲಕ್ಷ ರೂ. ಬೆಲೆ ಕಥೆಯ ಹಿಂದೆ ವಂಚನೆ ಜಾಲ

ಆದರೆ, ಈ ‘ಲಕ್ಷಾಂತರ ರೂಪಾಯಿಯ ಹಣ್ಣಿನ’ ಹಿಂದೆ ದೊಡ್ಡದೊಂದು ವಂಚನೆಯ ಜಾಲವಿದ್ದು, ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (IIHR) ವಿಜ್ಞಾನಿಗಳು ಮತ್ತು ಮಾವು ತಜ್ಞರು ಕಿವಿಮಾತು ಹೇಳಿದ್ದಾರೆ.

Related Articles

Related image1
ಕರ್ನಾಟಕದಲ್ಲೂ ಫಲ ಕೊಟ್ಟ ವಿಶ್ವದ ದುಬಾರಿ ಮಾವು..!
Related image2
ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು
38
ವೈಜ್ಞಾನಿಕ ನಿದರ್ಶನವಿಲ್ಲದ 'ಲಕ್ಷ'ದ ಕತೆ:
Image Credit : Facebook

ವೈಜ್ಞಾನಿಕ ನಿದರ್ಶನವಿಲ್ಲದ 'ಲಕ್ಷ'ದ ಕತೆ:

ಅಸಲಿಗೆ, ಮಿಯಾಝಾಕಿ ಎಂಬುದು ಜಪಾನ್‌ನ ಒಂದು ಪ್ರದೇಶದ ಹೆಸರು. ಮೂಲತಃ ಅಮೆರಿಕದ ಫ್ಲೋರಿಡಾ ಪ್ರಾಂತ್ಯದಲ್ಲಿ ಅಭಿವೃದ್ಧಿಪಡಿಸಿದ 'ಐರ್ವಿನ್' (Irwin) ಎಂಬ ತಳಿಯನ್ನೇ ಜಪಾನ್‌ನಲ್ಲಿ ಮಿಯಾಝಾಕಿ ಎಂದು ಕರೆಯಲಾಗುತ್ತದೆ. ಇದು ಕಡು ಕೆಂಪು ಬಣ್ಣ ಹೊಂದಿರುವುದರಿಂದ ನೋಡಲು ಆಕರ್ಷಕವಾಗಿದೆ.

48
ಜಪಾನ್‌ನಲ್ಲಿಉಡುಗೊರೆ ನೀಡಲು ಬಳಕೆ
Image Credit : Facebook

ಜಪಾನ್‌ನಲ್ಲಿಉಡುಗೊರೆ ನೀಡಲು ಬಳಕೆ

ಆದರೆ ರುಚಿ ಮತ್ತು ಸುವಾಸನೆಯಲ್ಲಿ ನಮ್ಮ ದೇಶದ ಮಾಮೂಲಿ ತಳಿಗಳಿಗಿಂತ ವಿಶೇಷವೇನೂ ಇಲ್ಲ. ಜಪಾನ್‌ನಲ್ಲಿ ಇದನ್ನು 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯುತ್ತಾರೆ ಮತ್ತು ಅಲ್ಲಿನ ಶ್ರೀಮಂತರು ಇದನ್ನು ಉಡುಗೊರೆಯಾಗಿ ನೀಡಲು ಬಳಸುತ್ತಾರೆ.

58
ನರ್ಸರಿಗಳ ವಂಚನೆ ಮತ್ತು ಕ್ವಾರಂಟೈನ್ ನಿಯಮದ ಉಲ್ಲಂಘನೆ:
Image Credit : FB

ನರ್ಸರಿಗಳ ವಂಚನೆ ಮತ್ತು ಕ್ವಾರಂಟೈನ್ ನಿಯಮದ ಉಲ್ಲಂಘನೆ:

ಭಾರತಕ್ಕೆ ಯಾವುದೇ ವಿದೇಶಿ ತಳಿ ಬರಬೇಕಾದರೆ ಅದು ICAR (ಭಾರತೀಯ ಕೃಷಿ ಅನುಸಂಧಾನ ಪರಿಷತ್) ಮೂಲಕ ಕ್ವಾರಂಟೈನ್ (ನಿರ್ಬಂಧಿತ ತಪಾಸಣೆ) ಮಾನದಂಡಗಳನ್ನು ಪೂರೈಸಬೇಕು. ಆದರೆ ಮಿಯಾಝಾಕಿ ತಳಿ ಅಂತಹ ಯಾವುದೇ ಅಧಿಕೃತ ಪ್ರಕ್ರಿಯೆಗೆ ಒಳಪಟ್ಟಿಲ್ಲ. ಹೀಗಿದ್ದರೂ, ಕೆಲವು ನರ್ಸರಿಗಳು ರೈತರನ್ನು ಮರುಳು ಮಾಡಲು ಒಂದು ಸಸಿಯನ್ನು 1,000 ರೂಪಾಯಿಯಿಂದ ಹಿಡಿದು 10,000 ರೂಪಾಯಿವರೆಗೆ ಮಾರಾಟ ಮಾಡುತ್ತಿವೆ. ಇದು ಸಂಪೂರ್ಣವಾಗಿ ರೈತರನ್ನು ದಾರಿ ತಪ್ಪಿಸುವ ತಂತ್ರ ಎಂದು IIHR ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಬಿ.ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

68
ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದಕ್ಕಿದೆಯೇ?
Image Credit : Facebook

ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದಕ್ಕಿದೆಯೇ?

ಮಿಯಾಝಾಕಿ ಹಣ್ಣು ತಿಂದರೆ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. 'ಇದೊಂದು ಹಸಿ ಸುಳ್ಳು. ನಮ್ಮ ದೇಶದ ಸೇಂಧೂರ ಹಣ್ಣಿನ ಸಿಪ್ಪೆಗೆ ಇರುವ ಗುಣವೂ ಈ ಹಣ್ಣಿಗಿಲ್ಲ. ಅನಗತ್ಯವಾಗಿ ಬೇಡಿಕೆ ಸೃಷ್ಟಿಸಿ ರೈತರ ಹಣ ಲೂಟಿ ಮಾಡಲಾಗುತ್ತಿದೆ. ಲಕ್ಷ ಹಣ ಕೊಟ್ಟು ಈ ಹಣ್ಣು ಖರೀದಿಸುವ ಗ್ರಾಹಕರು ನಮ್ಮಲ್ಲಿಲ್ಲ' ಎಂದು ಮಾವು ತಜ್ಞ ಡಾ. ಎಸ್.ವಿ.ಹಿತ್ತಲಮನಿ ತಿಳಿಸಿದ್ದಾರೆ.

78
ಭಾರತೀಯ ತಳಿಗಳೇ ಶ್ರೇಷ್ಠ:
Image Credit : Facebook

ಭಾರತೀಯ ತಳಿಗಳೇ ಶ್ರೇಷ್ಠ:

ಭಾರತವು ಮಾವಿನ ಮೂಲ ದೇಶವಾಗಿದ್ದು, ಇಲ್ಲಿ 1,000ಕ್ಕೂ ಹೆಚ್ಚು ನೈಸರ್ಗಿಕ ತಳಿಗಳಿವೆ. ಆಲ್ಫಾನ್ಸೋ, ಬಾದಾಮಿ, ಮಲ್ಲಿಕಾ, ದಶೇರಿಗಳಂತಹ ತಳಿಗಳ ರುಚಿಗೆ ವಿಶ್ವವೇ ಮಾರುಹೋಗಿದೆ. IIHR ನಲ್ಲಿ ಸುಮಾರು 800ಕ್ಕೂ ಹೆಚ್ಚು ತಳಿಗಳ ಮೇಲೆ ಸಂಶೋಧನೆ ನಡೆಯುತ್ತಿದ್ದು, ಮಿಯಾಝಾಕಿ ತಳಿ ಅಧಿಕೃತ ಶಿಫಾರಸಿನ ಪಟ್ಟಿಯಲ್ಲಿ ಇಲ್ಲ.

88
ರೈತರಿಗೆ ಸಲಹೆ:
Image Credit : Facebook

ರೈತರಿಗೆ ಸಲಹೆ:

ಯಾವುದೋ ಯೂಟ್ಯೂಬ್ ವಿಡಿಯೋ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ ನೋಡಿ ದುಬಾರಿ ಬೆಲೆಗೆ ಸಸಿಗಳನ್ನು ಖರೀದಿಸಬೇಡಿ. ಸಸಿಗಳನ್ನು ಖರೀದಿಸುವ ಮುನ್ನ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ (KVK) ಅಥವಾ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ. ಅಧಿಕೃತವಲ್ಲದ ತಳಿಗಳನ್ನು ಬೆಳೆದು ಆರ್ಥಿಕ ನಷ್ಟಕ್ಕೆ ಒಳಗಾಗಬೇಡಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಮಾವು
ಭಾರತ ಸುದ್ದಿ
ಹಣ್ಣುಗಳು
ವ್ಯವಹಾರ

Latest Videos
Recommended Stories
Recommended image1
ಒಣಹುಲ್ಲು ಸಾಗಿಸುತ್ತಿದ್ದ ಬೊಲೆರೋಗೆ ವಿದ್ಯುತ್ ತಂತಿ ತಗುಲಿ ಬೆಂಕಿ: ನಡುರಸ್ತೆಯಲ್ಲಿ ಧಗಧಗ
Recommended image2
ಪೊಲೀಸ್ ಇಲಾಖೆಯಲ್ಲಿ 'ಖಾಕಿ' ವಾರ್: ಐಪಿಎಸ್ ಅಧಿಕಾರಿ ರೆಡ್ಡಿ ವಿರುದ್ಧ ಡಿಜಿಪಿಗೆ ಎಸ್‌ಪಿ ದೂರು
Recommended image3
ಬೆಂಗಳೂರಿನ 17 ಕಡೆ ಇಡಿ ದಾಳಿ: ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದಲ್ಲಿ ಶೋಧ
Related Stories
Recommended image1
ಕರ್ನಾಟಕದಲ್ಲೂ ಫಲ ಕೊಟ್ಟ ವಿಶ್ವದ ದುಬಾರಿ ಮಾವು..!
Recommended image2
ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved