ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು

ವಿಶ್ವದಲ್ಲಿಯೇ ಅತ್ಯಂದ ದುಬಾರಿಯಾದ ಜಪಾನ್‌ ಮೂಲದ ಮಿಯಾಜಾಕಿ ಮಾವಿನ ಹಣ್ಣು ಈಗ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿಯೂ ಲಭ್ಯವಿದೆ.

World most expensive Miyazaki mango is available in Koppal sat

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ 23): ವಿಶ್ವದಲ್ಲಿಯೇ ಅತ್ಯಂದ ದುಬಾರಿ ಮಾವಿನ ಹಣ್ಣು ಎಂದು ಕರೆಸಿಕೊಳ್ಳುವ ಜಪಾನ್‌ ಮೂಲದ ಮಿಯಾಜಾಕಿ ಮಾವಿನ ಹಣ್ಣು ಈಗ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿಯೂ ಲಭ್ಯವಿದೆ. ಆದರೆ, ಇದರ ಬೆಲೆ ಬಂಗಾರಕ್ಕಿಂತೂ ಅತ್ಯಧಿಕವಾಗಿದ್ದು, ಪ್ರತಿ ಕೆ.ಜಿ. ಮಿಯಾಜಾಕಿ ಮಾವಿನ ಹಣ್ಣಿಗೆ 2.5 ಲಕ್ಷ ರೂ.ಗಳಿಂದ 2.7 ಲಕ್ಷ ರೂ. ಬೆಲೆಯಿದೆ.

ಸಾಮಾನ್ಯವಾಗಿ ಮಾವು ಕೆಜಿಗೆ 100 ರಿಂದ 200 ರೂಪಾಯಿ ಇರಬಹುದು. ಆದರೆ ಇಲ್ಲೊಂದು ಮಾವಿ ಹಣ್ಣಿನ ಬೆಲೆ ಕೆಜಿಗೆ ಬರೋಬ್ಬರಿ ಬಂಗಾರದ ಬೆಲೆಯಲ್ಲಿದೆ.‌ ಅಷ್ಟಕ್ಕೂ ಯಾವುದು ಜಗತ್ತಿನ ದುಬಾರಿ ಬೆಲೆಯ ಮಾವು ಅನ್ನೋದನ್ನ‌ ನೋಡೋಣ. ಮಾವಿನ ಉತ್ಸಾಹಿಗಳ ಜಗತ್ತಿನಲ್ಲಿ ಮಿಯಾಜಾಕಿ ತಳಿ ಮಾವು ಜಗತ್ತಿನ ದುಬಾರಿ ಮಾವು ಎಂದು ಪರಿಗಣಿಸಲ್ಪಟ್ಟಿದೆ. ಈ ಮಾವಿನ ಬೆಲೆ ಒಂದು ಕಿಲೋ ಗ್ರಾಂಗೆ 2 ಲಕ್ಷ 50 ಸಾವಿರ ರೂಗಳು ಎಂದು ತಿಳಿದು ಬಂದಿದೆ. ಈ ಮಾವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!

ಕೊಪ್ಪಳದಲ್ಲಿಯೂ ಮಿಯಾಜಾಕಿ ಮಾವಿನ‌ಹಣ್ಣು ಲಭ್ಯ: ಕೊಪ್ಪಳದಲ್ಲಿ ಪ್ರತಿವರ್ಷ ಮಾವಿನ ಹಣ್ಣೀನ ಸೀಜನ್ ನಲ್ಲಿ ತೋಟಗಾರಿಕೆ ಇಲಾಖೆಯವರು ಮಾವು ಮೇಳ‌ ಏರ್ಪಡಿಸುತ್ತಾರೆ. ಈ ಹಿನ್ನಲೆಯಲ್ಲಿ ಈ ವರ್ಷದ ಮಾವು ಮೇಳ‌ ಇಂದಿನಿಂದ ಆರಂಭಗೊಂಡಿದ್ದು ಮೇ 31 ರವರೆಗೂ ಜರುಗಲಿದೆ.‌ ಹೀಗಾಗಿ ಈ ವರ್ಷದ ಮಾವು ಮೇಳದಲ್ಲಿ ಏಮಾದರೂ ವಿಶೇಷತೆ ಇರಲೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಜಗತ್ತಿನ ದುಬಾರಿ ಮಾವಿನ ಹಣ್ಣಾದ ಮಿಯಾಜಾಕಿಯನ್ನು ಕೊಪ್ಪಳದ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. 

ಜಗತ್ತಿನ ದುಬಾರಿಯ ಮಾವಿನ ಹಣ್ಣಿನ ಮೂಲ ಜಪಾನ್‌: ಜಪಾನ್‌ನ ಮಿಯಾಜಾಕಿ ಪ್ರಿಫೆಕ್ಟರ್‌ನಿಂದ ಹುಟ್ಟಿಕೊಂಡ ಈ ಮಾವು ತಮ್ಮ ಅಸಾಧರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಗಾಗಿ ಖ್ಯಾತಿಯನ್ನುಗಳಿಸಿದೆ. ಕೃಷಿಯ ಶ್ರೀಮಂತ ಇತಿಹಾಸದೊಂದಿಗೆ, ಮಿಯಾಜಾಕಿ ಮಾವುಗಳನ್ನು ನಿಯಂತ್ರಿತ ಪರಿಸರದಲ್ಲಿ ನಿಖರವಾಗಿ ಬೆಳೆಯಲಾಗುತ್ತಿದೆ. ಅವುಗಳ ಅಭಿವೃದ್ಧಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ಖಾತ್ರಿಪಡಿಸುತ್ತದೆ.

ಮಿಯಾಜಾಕಿ ಹಣ್ಣಿನ ವಿಶೇಷ ಏನು? : ಇನ್ನು ಮಿಯಾಜಾಕಿ ಮಾವಿನ ಹಣ್ಣಿನ ವಿಶೇಷತೆ  ಒಂದೆರಡಲ್ಲ,ಬದಲಾಗಿ ಹತ್ತಾರು.‌ ಮಿಯಾಜಾಕಿ ಇದರ ಫಲಿತಾಂಶವು ರೋಮಾಂಚಕವಾಗಿರುತ್ತದೆ.  ಕಿತ್ತಳೆ ಬಣ್ಣ, ನಯವಾದ ವಿನ್ಯಾಸ ಮತ್ತು ಸಂತೋಷಕರ ಪರಿಮಳವನ್ನು ಹೊಂದಿರುವ ಹಣ್ಣಾಗಿದೆ. ಮಿಯಾಜಾಕಿ ಮಾವು ಅದರ ಉತ್ತಮ ರುಚಿಗೆ ಹೆಚ್ಚು ಪರಿಗಣಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ನಂಬಲಾಗದಷ್ಟು ಸಿಹಿ, ರಸಭರಿತ ಮತ್ತು ಸುವಾಸನೆ ಎಂದು ವಿವರಿಸಲಾಗಿದೆ. ಇದರ ಹೆಚ್ಚಿನ ಸಕ್ಕರೆ ಅಂಶವನ್ನು ಬ್ರಿಕ್ಸ್ ಮಟ್ಟದಿಂದ ಅಳೆಯಲಾಗುತ್ತಿದೆ.

ಮಾವು ಕೆಮಿಕಲ್ ಹಾಕಿ ಹಣ್ಣಾಗಿಸಿದ್ದಾ, ತಿಳಿಯೋದು ಹೇಗೆ?

ಮಿಯಾಜಾಕಿಗೆ ದುಬಾರಿ ಬೆಲೆ:  ಮಿಯಾಜಾಕಿ ಮಾವಿನ ಹಣ್ಣು  ಮಾಧುರ್ಯಕ್ಕೆ ವಿಶೇಷವಾದ ಕೊಡುಗೆ ನೀಡುತ್ತದೆ. ಅವುಗಳ ಪ್ರಿಮಿಯಂ ಗುಣಮಟ್ಟ ಮತ್ತು ಸೀಮಿತ ಲಭ್ಯತೆಯಿಂದಾಗಿ ಮಿಯಾಜಾಕಿ ಮಾವುನ ಹಣ್ಣುಗಳ ಸಾಕಷ್ಟು ದುಬಾರಿಯಾಗಬಹುದು. ಬೆಲೆ ಪ್ರತ್ಯೇಕತೆ ಮತ್ತು ಕೃಷಿ ಮತ್ತು ನಿರ್ವಹಣೆಯಲ್ಲಿ ತೆಗೆದುಕೊಂಡ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ, ಮಿಯಾಜಾಕಿ ಮಾವು ಅದರ ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಗಾಗಿ ಪ್ರಸಿದ್ದಿ ಹೊಂದಿದೆ.  ಇದು ಪ್ರಪಂಚದಾದ್ಯಂತ ಮಾವಿನ ಪ್ರಿಯರ ಗಮನವನ್ನು ಸೆಳೆದಿದೆ. ಇದು ಅತ್ಯುತ್ತಮ ಮಾವಿನ ಅನುಭವವನ್ನು ಬಯಸುವವರಿಗೆ ಹೆಚ್ಚು ಬೇಡಿಕೆಯಿರುವ ಮಾವಿನ ಹಣ್ಣಾಗಿದೆ.

Latest Videos
Follow Us:
Download App:
  • android
  • ios