MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • 193ಕೆಜಿ ಭಾರ ಎತ್ತಿ CWGನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು ಫಿಟ್ನೆಸ್ ಸೀಕ್ರೆಟ್ ರಿವೀಲ್

193ಕೆಜಿ ಭಾರ ಎತ್ತಿ CWGನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು ಫಿಟ್ನೆಸ್ ಸೀಕ್ರೆಟ್ ರಿವೀಲ್

Mirabai Chanu Fitness: 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಅವರ ಆಹಾರ ಪದ್ಧತಿ ಕೇಳಿದ್ರೆ ನಿಮಗೆ ಶಾಕ್ ಆಗಬಹುದು! ದೇಶಕ್ಕೆ ಹೆಮ್ಮೆ ತಂಡ ಕ್ರೀಡಾಪಟುವಿನ ಕಠಿಣ ಶಿಸ್ತು ಮತ್ತು ಆಹಾರ ಪದ್ದತಿಯ ರಹಸ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ…

2 Min read
Author : Pavna Das
Published : Jul 27 2026, 05:51 PM IST
Share this Photo Gallery
  • FB
  • TW
  • Linkdin
  • Whatsapp
16
CWGನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು
Image Credit : Google

CWGನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು

2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (CWG) ದೇಶದ ಮೊದಲ ಚಿನ್ನದ ಪದಕವನ್ನು ಗೆದ್ದ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ತ್ರಿವರ್ಣ ಧ್ವಜ ಹಾರಿಸುವುದನ್ನು ನೋಡಿದಾಗ ಅವರ ಬಗ್ಗೆ ಹೆಮ್ಮೆ ಹಾಗೂ ಸಾಧನೆಯ ಹಿಂದಿನ ಕಠಿಣ ಪರಿಶ್ರಮ ನೆನಪಾಗುತ್ತದೆ. ತನ್ನ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅವರು ನಿಗದಿತ ತೂಕದ ವಿಭಾಗದಲ್ಲಿ ಉಳಿಯಲು, ಸ್ಪರ್ಧೆಗೆ ಮುಂಚಿತವಾಗಿ ಸತತ ಮೂರು ದಿನಗಳಿಂದ ಅವರು ಸರಿಯಾಗಿ ಊಟ ಮಾಡಿಲ್ಲ ಎಂದು ಹೇಳಿದ್ದರು. ವೇಟ್ ಲಿಫ್ಟಿಂಗ್ ನಲ್ಲಿ ಸರಿಯಾಗಿ ಹೊಟ್ಟೆ ತುಂಬದೆ ದೇಶಕ್ಕಾಗಿ ಪದಕ ಗೆಲ್ಲುವುದು ಅಸಾಧ್ಯವೆಂದು ತೋರುತ್ತದೆ, ಆದರೆ ಚಾನು ತನ್ನ ಕಠಿಣ ಪರಿಶ್ರಮ, ಡೆಡಿಕೇಶನ್ ಮೂಲಕ ಅದನ್ನು ಸಾಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವೇಟ್ ಲಿಫ್ಟಿಂಗ್ ಮಾಡುವವರು ಹೊಟ್ಟೆ ತುಂಬಾ ತಿನ್ನುತ್ತಾರೆಯೇ?
Image Credit : PM Modi x

ವೇಟ್ ಲಿಫ್ಟಿಂಗ್ ಮಾಡುವವರು ಹೊಟ್ಟೆ ತುಂಬಾ ತಿನ್ನುತ್ತಾರೆಯೇ?

ಜನರು ಸಾಮಾನ್ಯವಾಗಿ ವೇಟ್ ಲಿಫ್ಟರ್ ಸರಿಯಾಗಿ ಹೊಟ್ಟೆ ತುಂಬಾ ತಿನ್ನುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವವು ಸಂಪೂರ್ಣವಾಗಿ ವಿಭಿನ್ನವಾಗಿದೆ; ಕ್ರೀಡಾಪಟುಗಳು ಅಥವಾ ತೂಕ ಎತ್ತುವವರು ತಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಲು ಊಟದ ಬಗ್ಗೆ ಕಾಳಜಿ ವಹಿಸಲೇಬೇಕು. ಈ ಬಗ್ಗೆ ಹಿಂದೆ ಮೀರಾಬಾಯಿ ತಿಳಿಸಿರುವಂತೆ "ನಾವು ವೇಟ್‌ಲಿಫ್ಟರ್‌ಗಳಾಗಿರುವುದರಿಂದ, ನಾವು ಬಹಳಷ್ಟು ತಿನ್ನಬೇಕು ಎಂದು ಎಲ್ಲರೂ ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ನಾವು ಯಾವಾಗಲೂ ನಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು."ಎಂದಿದ್ದರು. ಯಾಕಂದ್ರೆ ಸ್ವಲ್ಪ ತೂಕ ವ್ಯತ್ಯಾಸ ಆದರೂ ಅನರ್ಹರಾಗುವ ಸಾಧ್ಯತೆ ಇದೆ.

Related Articles

Related image1
2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್
Related image2
Gold Medal: ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್‌ ಗರ್ಲ್!
36
ಇಷ್ಟಪಟ್ಟ ಯಾವ ಆಹಾರ ತಿನ್ನುವಂತಿಲ್ಲ
Image Credit : Getty

ಇಷ್ಟಪಟ್ಟ ಯಾವ ಆಹಾರ ತಿನ್ನುವಂತಿಲ್ಲ

ಮೀರಾಬಾಯಿಯ ಆಹಾರದಲ್ಲಿ ಬೆಳಗಿನ ಚಹಾ ಮತ್ತು ಟೋಸ್ಟ್, ಪರಾಠಾ ಅಥವಾ ಒಂದು ಲೋಟ ಹಾಲು ಕೂಡ ಇರಲಿಲ್ಲ. ತೂಕ ಹೆಚ್ಚಾಗುವ ಭಯದಿಂದ ಬ್ರೆಡ್ ಮತ್ತು ಹಾಲಿನಂತಹ ಸಾಮಾನ್ಯ ವಸ್ತುಗಳನ್ನು ಸಹ ಸೇವಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರ ಬೆಳಗಿನ ಉಪಾಹಾರವು ಕೇವಲ ಮೂರು ಪದಾರ್ಥಗಳನ್ನು ಒಳಗೊಂಡಿರುವ ಅತ್ಯಂತ ಸರಳ ಬ್ರೇಕ್ ಫಾಸ್ಟ್. ಬೇಯಿಸಿದ ಮೊಟ್ಟೆಗಳು, ಬೇಯಿಸಿದ ಕಪ್ಪು ಕಡಲೆ ಮತ್ತು ಬೇಯಿಸಿದ ಅಣಬೆಗಳು. ಇಡೀ ದಿನ ದೇಹಕ್ಕೆ ಶಕ್ತಿ ನೀಡಲು ಇದೇ ಆಹಾರ.

46
ಈ ಆಹಾರದಿಂದ ಏನು ಪ್ರಯೋಜನ?
Image Credit : Mirabai Chanu – Social Media

ಈ ಆಹಾರದಿಂದ ಏನು ಪ್ರಯೋಜನ?

ಬೇಯಿಸಿದ ಮೊಟ್ಟೆ ಪ್ರೊಟೀನ್ ಮೂಲವಾಗಿದ್ದು, ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ಇದು ಮೆದುಳಿನ ಕಾರ್ಯ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಮೂಳೆಗಳು ಸ್ಟ್ರಾಂಗ್ ಆಗಲು ಬೇಕಾದ ಕ್ಯಾಲ್ಶಿಯಂ ಕೂಡ ಇದರಲ್ಲಿದೆ. ಇನ್ನು ಬೇಯಿಸಿದ ಅಣಬೆಯಲ್ಲಿ ಕಡಿಮೆ ಕ್ಯಾಲರಿ ಮತ್ತು ಕೊಬ್ಬು ಇದು ತೂಕ ಇಳಿಕೆಗೆ ಸಹಕಾರಿ. ಜೊತೆಗೆ ರೋಗ್ಯ ನಿರೋಧಕ ಶಕ್ತಿಯನ್ನು ಹೊಂದಿದ್ದು, ಹೃದಯದ ಆರೋಗ್ಯಕ್ಕೂ ಉತ್ತಮ. ಇನ್ನು ಬೇಯಿಸಿದ ಕಪ್ಪು ಕಡಲೆ ದಿನವಿಡೀ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಉತ್ತಮ ಜೀರ್ಣಕ್ರಿಯೆಗೂ ಸಹಕಾರಿ, ಜೊತೆಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಕಾರಿ.

56
ತರಬೇತಿಗೆ ಮುನ್ನ ಲಘು ಊಟ
Image Credit : Mirabai Chanu – Social Media

ತರಬೇತಿಗೆ ಮುನ್ನ ಲಘು ಊಟ

ಇದು ಕೇವಲ ಉಪಾಹಾರದ ಬಗ್ಗೆ ಅಲ್ಲ; ಅವರ ಕಠಿಣ ವ್ಯಾಯಾಮ ಮತ್ತು ಟ್ರೈನಿಂಗ್ ಪಿರಿಯಡ್ ಹೊರತಾಗಿಯೂ, ಅವರ ಮಧ್ಯಾಹ್ನ ಊಟವು ತುಂಬಾ ಹಗುರವಾಗಿರುತ್ತದೆ. ಅವರು ಮಧ್ಯಾಹ್ನ ಊಟಕ್ಕೆ ಸಲಾಡ್ ಮತ್ತು ಸೀ ಫುಡ್ ಸೇವಿಸುತ್ತಾರೆ. ಲಘು ಊಟಗಳು ಸುಲಭವಾಗಿ ಜೀರ್ಣವಾಗುತ್ತವೆ, ಇದರಿಂದ ತರಬೇತಿಯ ಸಮಯದಲ್ಲಿ ಹೆವಿ ಫೀಲ್ ಆಗುವುದಿಲ್ಲ, ಅಲ್ಲದೇ ಸುಲಭವಾಗಿ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ.

66
ಪದಕದ ಹಿಂದಿನ ನಿಜವಾದ ಶಿಸ್ತು
Image Credit : Mirabai Chanu – Social Media

ಪದಕದ ಹಿಂದಿನ ನಿಜವಾದ ಶಿಸ್ತು

ವೇಟ್‌ಲಿಫ್ಟಿಂಗ್‌ನಂತಹ ಕ್ರೀಡೆಗಳಲ್ಲಿ, ದೇಹದ ತೂಕದಲ್ಲಿ 100–200 ಗ್ರಾಂ ವ್ಯತ್ಯಾಸವಿದ್ದರೂ ಸಹ ಕ್ರೀಡಾಪಟುವನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬಹುದು. ಅದಕ್ಕಾಗಿಯೇ ಮೀರಾಬಾಯಿ ಚಾನು ಹೆಚ್ಚುವರಿ ಫ್ಯಾಟ್ ಅಥವಾ ತೂಕವನ್ನು ಸೇರಿಸದೆ ಶಕ್ತಿಯನ್ನು ಒದಗಿಸುವ ಆಹಾರಕ್ರಮದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಾರೆ. ಕ್ರೀಡಾಪಟುಗಳ ಯಶಸ್ಸು ಮತ್ತು ಪದಕಗಳನ್ನು ನಾವು ಹೆಚ್ಚಾಗಿ ಆನಂದಿಸುತ್ತೇವೆ, ಆದರೆ ಮೀರಾಬಾಯಿ ಚಾನು ಅವರ ಕಥೆಯು ಪ್ರತಿ ಚಿನ್ನದ ಪದಕದ ಹಿಂದೆ ವರ್ಷಗಳ ಸಮರ್ಪಣೆ, ತ್ಯಾಗ ಮತ್ತು ಕಠಿಣ ಶಿಸ್ತು ಅಡಗಿದೆ ಎಂದು ನಮಗೆ ನೆನಪಿಸುತ್ತದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕಾಮನ್‌ವೆಲ್ತ್ ಕ್ರೀಡಾಕೂಟ
ಕ್ರೀಡೆಗಳು
ಜೀವನಶೈಲಿ
ಆರೋಗ್ಯಕರ ಆಹಾರಗಳು
ಆರೋಗ್ಯ

Latest Videos
Recommended Stories
Recommended image1
"ಅಭಿಷೇಕ್‌ಗೆ ಸಿಗೋ ಚಾನ್ಸ್‌ ಸಂಜುಗೆ ಯಾಕಿಲ್ಲ?": ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಕೆಂಡವಾದ ಕೃಷ್ಣಮಾಚಾರಿ ಶ್ರೀಕಾಂತ್!
Recommended image2
Gold Medal: ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್‌ ಗರ್ಲ್!
Recommended image3
ಸೂರ್ಯವಂಶಿ ವಿಚಾರದಲ್ಲಿ ಭುಗಿಲೆದ್ದ ಮತ್ತೊಂದು ಆಗ್ರಹ.. ಗಿಲ್‌ ಸ್ಥಾನಕ್ಕೆ ಬಂತಾ ಆಪತ್ತು..?
Related Stories
Recommended image1
2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್
Recommended image2
Gold Medal: ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್‌ ಗರ್ಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved