19 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ಕುಷ್ಟಗಿಯಲ್ಲಿ ತಂದೆ-ಮಗಳ ಭಾವನಾತ್ಮಕ ಮಿಲನ!
ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ತಂದೆಯನ್ನು ನೋಡುವ ಆಸೆ
ಕುಟುಂಬದ ಅನಿವಾರ್ಯ ಪರಿಸ್ಥಿತಿಗಳಿಂದ ತಂದೆ-ಮಗಳು ಹಲವು ವರ್ಷಗಳಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ. ಕಾಲ ಕಳೆಯುತ್ತಿದ್ದರೂ, ತಂದೆಯನ್ನು ಮತ್ತೊಮ್ಮೆ ನೋಡಬೇಕೆಂಬ ಆಸೆ ಮಗಳ ಮನದಲ್ಲಿ ಜೀವಂತವಾಗಿಯೇ ಇತ್ತು. ಪ್ರತಿಯೊಂದು ಹಬ್ಬ, ವಿಶೇಷ ಸಂದರ್ಭಗಳಲ್ಲಿ “ತವರು ಮನೆಯವರು” ಎಂಬ ಕೊರತೆ ಆಕೆಯನ್ನು ಕಾಡುತ್ತಿತ್ತು .

19 ವರ್ಷಗಳ ಅಂತರ
ಇತ್ತೀಚೆಗೆ ನಡೆದ ಈ ಭೇಟಿಯಲ್ಲಿ, ತಂದೆಯನ್ನು ಕಂಡ ಕ್ಷಣ ಮಗಳು ಶ್ರುತಿ ಮಾತು ಬಾರದೆ ಭಾವುಕಳಾದಳು. ವರ್ಷಗಳ ಬಳಿಕ ಮಗಳನ್ನು ಕಂಡ ತಂದೆ ಹನುಮಂತ ರಾವ್ ದೇಸಾಯಿ ಭಾವುಕರಾದರು. 19 ವರ್ಷಗಳ ದೂರವು ಆ ಒಂದು ಬೇಟಿಯಲ್ಲಿ ಕರಗಿದಂತಾಯಿತು.
ಕಣ್ಣೀರು ಮಾತನಾಡಿದ ಕ್ಷಣ
“ಮಗಳೇ…” ಎಂಬ ತಂದೆಯ ಕರೆಯೊಂದಿಗೆ ಇಬ್ಬರ ಭಾವನೆಗಳು ಉಕ್ಕಿಬಂದವು. ಆ ಕ್ಷಣದಲ್ಲಿ ಅಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧುಮಿತ್ರರೂ ಭಾವುಕರಾದರು. ಮಾತುಗಳಿಗಿಂತ ಕಣ್ಣೀರು ಅವರ ಪ್ರೀತಿ, ನೋವು ಮತ್ತು ನಿರೀಕ್ಷೆಯನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸಿತು.
19 ವರ್ಷಗಳ ಅಂತರ ಯಾಕೆ?
ಈ ಘಟನೆ ಕುಟುಂಬ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಿದ್ದು, ಎಷ್ಟೇ ವರ್ಷಗಳ ಅಂತರ ಇದ್ದರೂ ಹೃದಯಗಳ ಬಾಂಧವ್ಯ ಎಂದಿಗೂ ಕಡಿದುಹೋಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಕುಷ್ಟಗಿ ತಾಲೂಕು ಅಡವಿಸಾಗರದಲ್ಲಿ ತಂದೆ ವಾಸವಿದ್ದರು. ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಶ್ರುತಿ ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಹುಡುಗಿಯ ಅಕ್ಕ ಮನೆ ಮುಂದಿರುವ ಬಾವಿಗೆ ಬಿದ್ದಿದ್ದರು. ಹೀಗಾಗಿ ಎರಡನೇ ಮಗಳು ಒಂದೂವರೆ ವರ್ಷವಿದ್ದಾಗ ತಾಯಿ ತಂಗಿ ಚಿಕ್ಕಮ್ಮ ಧಾರವಾಡಕ್ಕೆ ಕರೆತಂದು ಬೆಳೆಸಿದ್ದರು. ಆಮೇಲೆ 8ನೇ ಕ್ಲಾಸಿನಲ್ಲಿದ್ದಾಗ ತಂದೆ-ಮಗಳು ಭೇಟಿಯಾಗಿದ್ದರು. ಆಮೇಲೆ ತಂದೆ ಬೇರೆ ಕಡೆಗೆ ಶಿಫ್ಟ್ ಆಗಿದ್ದರೂ ಕೂಡ ಭೇಟಿ ಆಗಿರಲಿಲ್ಲ. ಕೌಟುಂಬಿಕ ಸಮಸ್ಯೆ ಇತ್ತು ಎಂದು ಮಗಳು-ತಂದೆ ಭೇಟಿ ಆಗಿರಲಿಲ್ಲ, ತಂದೆ ಜೊತೆಗೆ ಚಿಕ್ಕಮ್ಮ ಕೂಡ ಕಾಂಟ್ಯಾಕ್ಟ್ ಇರದ ಕಾರಣ ಹೀಗೆ ಭೇಟಿ ಆಗೋದು 19 ವರ್ಷ ಆಗಿದೆ.

