- Home
- Entertainment
- Cine World
- ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಮಾಡಿರುವ 'ಕರುಪ್ಪು' ನಟ ಸೂರ್ಯ ಒಟ್ಟೂ ಆಸ್ತಿ ಎಷ್ಟು ಗೊತ್ತಾ?
ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಮಾಡಿರುವ 'ಕರುಪ್ಪು' ನಟ ಸೂರ್ಯ ಒಟ್ಟೂ ಆಸ್ತಿ ಎಷ್ಟು ಗೊತ್ತಾ?
ಸೂರ್ಯ ಮತ್ತು ಜ್ಯೋತಿಕಾ ಜೋಡಿ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರೀತಿಯ ದಂಪತಿಗಳು. ಇವರಿಬ್ಬರ ಒಟ್ಟು ಆಸ್ತಿಯನ್ನು ಲೆಕ್ಕ ಹಾಕಿದರೆ ಅದು ಬರೋಬ್ಬರಿ 537 ಕೋಟಿ ರೂಪಾಯಿಗಳಿಗೂ ಅಧಿಕವಾಗುತ್ತದೆ! ಹಾಗಿದ್ದರೆ ಸೂರ್ಯ ಆಸ್ತಿ ಎಷ್ಟು?

ಕೋಟಿ ಕೋಟಿ ಒಡೆಯ ‘ಸಿಂಗಂ’ ಸೂರ್ಯ: ‘ಕರುಪ್ಪು’ ನಾಯಕನ ಅಸಲಿ ಆಸ್ತಿ ಎಷ್ಟು ಗೊತ್ತಾ?
ದಕ್ಷಿಣ ಭಾರತದ ಚಿತ್ರರಂಗದ ‘ನಟ ರಾಕ್ಷಸ’, ಕರುನಾಡಿನ ಮನೆಮಗನಂತೆಯೇ ಪ್ರೀತಿ ಗಳಿಸಿರುವ ನಟ ಸೂರ್ಯ ಈಗ ‘ಕರುಪ್ಪು’ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಆರ್ಭಟಿಸಲು ಸಜ್ಜಾಗಿದ್ದಾರೆ. ಆರ್‌ಜೆ ಬಾಲಾಜಿ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುಮಾರು ಮೂರು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸೂರ್ಯ, ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ, ಒಬ್ಬ ಯಶಸ್ವಿ ನಿರ್ಮಾಪಕ ಹಾಗೂ ಬುದ್ಧಿವಂತ ಹೂಡಿಕೆದಾರನಾಗಿ ಬೃಹತ್ ಆಸ್ತಿ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ.

ಸರವಣನ್ ಟು ಸೂರ್ಯ: ಸ್ಟಾರ್ ಪಟ್ಟದ ಪಯಣ
ಸರವಣನ್ ಶಿವಕುಮಾರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ ಅವರ ಆರಂಭಿಕ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಅಜಿತ್ ಕುಮಾರ್ ಅವರು ‘ನೆರುಕ್ಕು ನೇರ್’ ಚಿತ್ರದಿಂದ ಹಿಂದೆ ಸರಿದಾಗ ಆ ಅವಕಾಶ ಸೂರ್ಯ ಅವರ ಪಾಲಾಯಿತು. ಅಲ್ಲಿಂದ ಶುರುವಾದ ಇವರ ಜೈತ್ರಯಾತ್ರೆ ‘ಪೆರಳಗನ್’, ‘ವೇಲ್’, ‘ಫ್ರೆಂಡ್ಸ್’, ‘ಸಿಂಗಂ’ ಅಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಸೂರ್ಯ ಅವರನ್ನು ಭಾರತೀಯ ಚಿತ್ರರಂಗದ ಪವರ್‌ಫುಲ್ ಸ್ಟಾರ್ ಆಗಿ ಬೆಳೆಸಿತು. ಇತ್ತೀಚಿನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಸೂರ್ಯ ಅವರ ಮಾರ್ಕೆಟ್ ವ್ಯಾಲ್ಯೂ ಮಾತ್ರ ಕಮ್ಮಿಯಾಗಿಲ್ಲ.
350 ಕೋಟಿ ರೂಪಾಯಿಗೂ ಅಧಿಕ ಆಸ್ತಿ!
ಇತ್ತೀಚಿನ ವರದಿಗಳ ಪ್ರಕಾರ, ನಟ ಸೂರ್ಯ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 350 ಕೋಟಿ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಚೆನ್ನೈ ಮತ್ತು ಮುಂಬೈನಂತಹ ದುಬಾರಿ ನಗರಗಳಲ್ಲಿ ಇವರು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಇವರ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪ್ರೀಮಿಯಂ ಕಾರುಗಳ ಸಂಗ್ರಹವೇ ಇದೆ. ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ‘2D ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಸೂರರೈ ಪೋಟ್ರು’ ಮತ್ತು ‘ಜೈ ಭೀಮ್’ ನಂತಹ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ಮಿಸಿ ಸಿನಿಮಾ ಉದ್ಯಮದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ.
ಸೂರ್ಯ-ಜ್ಯೋತಿಕಾ: ಚಿತ್ರರಂಗದ ‘ಪವರ್ ಕಪಲ್’
ಸೂರ್ಯ ಮತ್ತು ಜ್ಯೋತಿಕಾ ಜೋಡಿ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರೀತಿಯ ದಂಪತಿಗಳು. ಇವರಿಬ್ಬರ ಒಟ್ಟು ಆಸ್ತಿಯನ್ನು ಲೆಕ್ಕ ಹಾಕಿದರೆ ಅದು ಬರೋಬ್ಬರಿ 537 ಕೋಟಿ ರೂಪಾಯಿಗಳಿಗೂ ಅಧಿಕವಾಗುತ್ತದೆ! ಜ್ಯೋತಿಕಾ ಅವರ ವೈಯಕ್ತಿಕ ಆಸ್ತಿಯೇ ಸುಮಾರು 331 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಈ ದಂಪತಿ ತಮ್ಮ ಮಕ್ಕಳೊಂದಿಗೆ ಮುಂಬೈಗೆ ಶಿಫ್ಟ್ ಆಗಿದ್ದು, ಅಲ್ಲಿ ಸುಮಾರು 70 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಮನೆಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಭಾವನೆ ಮತ್ತು ‘ಕಂಗುವ’ ಕಹಿಸತ್ಯ
ಸೂರ್ಯ ಅವರ ಸಂಭಾವನೆ ಕೂಡ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಬಿಗ್ ಬಜೆಟ್ ಸಿನಿಮಾ ‘ಕಂಗುವ’ ಚಿತ್ರಕ್ಕಾಗಿ ಅವರು ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಸಿನಿಮಾ ಕಥೆ ಮತ್ತು ನಿರ್ದೇಶನದ ವೈಫಲ್ಯದಿಂದ ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೂ, ಸೂರ್ಯ ಅವರ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಅವರ ಆಸ್ತಿ ಸುಮಾರು 125 ಕೋಟಿ ಇತ್ತು, ಇಂದು ಅದು ಮೂರು ಪಟ್ಟು ಹೆಚ್ಚಾಗಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿ.
‘ಕರುಪ್ಪು’ ಬಿಡುಗಡೆಗೆ ಎದುರಾದ ಅಡೆತಡೆಗಳು
ಸದ್ಯ ಬಿಡುಗಡೆಯಾಗಿರುವ ‘ಕರುಪ್ಪು’ ಸಿನಿಮಾ ಪ್ರಚಾರದ ಮೂಲಕ ಭಾರೀ ಸದ್ದು ಮಾಡಿತ್ತು. ಆದರೆ ಬಿಡುಗಡೆಯ ದಿನವೇ ಕೆಲವು ಥಿಯೇಟರ್‌ಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಂಡಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಆರ್‌ಜೆ ಬಾಲಾಜಿ, "ಈ ಸಿನಿಮಾ ಮೊದಲಿನಿಂದಲೂ ಹಲವು ಅಡೆತಡೆಗಳನ್ನು ಎದುರಿಸುತ್ತಲೇ ಬಂದಿದೆ. ಸುಮಾರು 32 ತಿಂಗಳುಗಳ ಹೋರಾಟದ ನಂತರ ಸಿನಿಮಾ ಇಲ್ಲಿಯವರೆಗೆ ಬಂದಿದೆ. ದೇವರ ಮೇಲೆ ನಂಬಿಕೆಯಿದೆ, ಎಲ್ಲವೂ ಸುಗಮವಾಗಲಿದೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಸೂರ್ಯ ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ, ತಮ್ಮ ಶಿಸ್ತು ಮತ್ತು ಪರಿಶ್ರಮದಿಂದ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಈ ‘ಕರುಪ್ಪು’ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

